Advertisement

ಬಂಟ್ವಾಳ ವಿಶ್ವ ಪರಿಸರ ದಿನಾಚರಣೆ

04:34 PM Jun 06, 2018 | |

ಬಂಟ್ವಾಳ : ಬಿ.ಸಿ.ರೋಡ್‌ ಮಿನಿವಿಧಾನ ಸೌಧದ ಎದುರು ಕೋರ್ಟ್‌ ಆವರಣದಲ್ಲಿ ಗಿಡ ನೆಡುವ ಮೂಲಕ ವಿಶ್ವ ಪರಿಸರ ದಿನಾಚರಣೆಯನ್ನು ಜೂ. 5ರಂದು ಆಚರಿಸಲಾಯಿತು. ಅರಣ್ಯ ಇಲಾಖೆ ಬಂಟ್ವಾಳ, ತಾಲೂಕು ಕಾನೂನು ಸೇವೆಗಳ ಸಮಿತಿ ಬಂಟ್ವಾಳ, ವಕೀಲರ ಸಂಘ ಬಂಟ್ವಾಳ, ಕಂದಾಯ ಇಲಾಖೆ ಹಾಗೂ ಪುರಸಭೆ ಬಂಟ್ವಾಳ ಸಂಯುಕ್ತವಾಗಿ ಕಾರ್ಯಕ್ರಮ ಹಮ್ಮಿಕೊಂಡಿತ್ತು.

Advertisement

ಬಂಟ್ವಾಳ ತಹಶೀಲ್ದಾರ್‌ ವೈ. ರವಿ, ಸೀನಿಯರ್‌ ಸಿವಿಲ್‌ ಜಡ್ಜ್ ಮಹಮ್ಮದ್‌ ಇಮ್ತಿಯಾಜ್‌ ಮಹಮ್ಮದ್‌, ಹೆಚ್ಚುವರಿ ಸಿವಿಲ್‌ ಜಡ್ಜ್ ಮತ್ತು ಜೆ.ಎಂ.ಎಫ್‌. ಸಿ. ನ್ಯಾಯಾಧೀಶೆ ಪ್ರತಿಭಾ ಡಿ.ಎಸ್‌, ಬಂಟ್ವಾಳ ವಕೀಲರ ಸಂಘದ ಅಧ್ಯಕ್ಷ ದೀಪಕ್‌ ಕುಮಾರ್‌ ಜೈನ್‌, ಮಾಜಿ ಅಧ್ಯಕ್ಷ ಬಿ. ವೆಂಕಟರಮಣ ಶೆಣೈ, ಹಾಗೂ ವಕೀಲ ಸಂಘದ ಪಧಾದಿಕಾರಿಗಳು, ಬಂಟ್ವಾಳ ವಲಯ ಅರಣ್ಯಾಧಿಕಾರಿ ಸುರೇಶ್‌ ಬಿ., ಉಪವಲಯ ಅರಣ್ಯಾಧಿಕಾರಿ ಪ್ರೀತಂ ಎಸ್‌, ಅರಣ್ಯ ರಕ್ಷಕರಾದ ವಿನಯಕುಮಾರ್‌, ಶಿವಲಿಂಗ ಸ್ವಾಮಿ, ಸಿಬ್ಬಂದಿಗಳಾದ ಭಾಸ್ಕರ್‌ ಡಿ., ಜಯರಾಮ, ಸ್ನೇಕ್‌ ಕಿರಣ್‌ ಪಿಂಟೊ, ನಗರ ಠಾಣಾ ಎಸ್‌. ಐ. ಚಂದ್ರಶೇಖರ್‌, ಪುರಸಭಾ ಅಧಿಕಾರಿ ರತ್ನ ಪ್ರಸಾದ್‌ ಮೊದಲಾದವರು ಉಪಸ್ಥಿತರಿದ್ದರು.

Advertisement

Udayavani is now on Telegram. Click here to join our channel and stay updated with the latest news.

Next