Advertisement

Bantwal ಉಕ್ಕಿ ಹರಿದ ನೇತ್ರಾವತಿ: ಹಲವೆಡೆ ತಗ್ಗು ಪ್ರದೇಶ ಜಲಾವೃತ್ತ; ರಸ್ತೆ ಸಂಚಾರ ವ್ಯತ್ಯಯ

11:23 PM Jul 19, 2024 | Team Udayavani |

ಬಂಟ್ವಾಳ: ಘಟ್ಟ ಪ್ರದೇಶದಲ್ಲಿ ನಿರಂತರವಾಗಿ ಸುರಿಯುತ್ತಿರುವ ಮಳೆಯ ಪರಿಣಾಮ ನೇತ್ರಾವತಿ ನದಿಯಲ್ಲಿ ಹೆಚ್ಚಿನ ಪ್ರಮಾಣದಲ್ಲಿ ನೀರು ಹರಿದು ಶುಕ್ರವಾರ ಬಂಟ್ವಾಳ ತಾಲೂಕಿನ ಹಲವೆಡೆ ತಗ್ಗು ಪ್ರದೇಶಗಳು ಜಲಾವೃತ್ತಗೊಂಡಿದ್ದು, ಕೆಲವು ಕಡೆ ರಸ್ತೆ ಸಂಚಾರ ಕಡಿತಗೊಂಡಿತ್ತು.

Advertisement

ಬಂಟ್ವಾಳದಲ್ಲಿ ನದಿ ನೀರಿನ ಅಪಾಯಕಾರಿ ಮಟ್ಟ 8.5 ಮೀ. ಆಗಿದ್ದು, ಮಧ್ಯಾಹ್ನದ ವೇಳೆಗೆ ನೀರಿನ ಮಟ್ಟ ಏಕಾಏಕಿ ಏರಿಕೆಯಾಗಿ 8.6 ಮೀ.ಗೆ ತಲುಪಿತ್ತು. ಹೀಗಾಗಿ ಬಂಟ್ವಾಳ ಬಡ್ಡಕಟ್ಟೆಯಲ್ಲಿ ಸಾಕಷ್ಟು ಅಂಗಡಿಗಳು, ಮೀನು ಮಾರುಕಟ್ಟೆ, ಸಾರ್ವಜನಿಕ ಶೌಚಾಲಯಗಳು ಜಲಾವೃತಗೊಂಡವು. ಪಾಣೆಮಂಗಳೂರಿನ ಆಲಡ್ಕದಲ್ಲಿ ಜು. 18ರಂದೇ ಮನೆಗಳು ಮುಳುಗಡೆಯಾಗಿದ್ದು, ಅಲ್ಲೂ ನೀರಿನ ಪ್ರಮಾಣ ಹೆಚ್ಚಾಗಿತ್ತು.

ಅಜಿಲಮೊಗರು ಮಸೀದಿ ಆವರಣಕ್ಕೆ ನೀರು ಬಂದು ಅಜಿಲಮೊಗರು-ಉಪ್ಪಿನಂಗಡಿ ರಸ್ತೆಯ ಸಂಚಾರ ಕಡಿತಗೊಂಡಿತ್ತು. ಬಂಟ್ವಾಳ ಪೇಟೆಗೆ ಸಂಪರ್ಕ ರಸ್ತೆಯ ಕೋಟೆಕಣಿ, ಬಸ್ತಿಪಡು³-ಗೂಡಿನಬಳಿ ಸಂಪರ್ಕ ರಸ್ತೆಯ ಕಂಚಿಗಾರಪೇಟೆ, ಪಾಣೆಮಂಗಳೂರು-ಮೆಲ್ಕಾರ್‌ ಸಂಪರ್ಕ ಆಲಡ್ಕ ಸೇತುವೆ ಬಳಿ ರಸ್ತೆಗೆ ನೀರು ಹರಿದ ಪರಿಣಾಮ ಸರಪಾಡಿ-ಬೀಯಪಾದೆ ಸಂಪರ್ಕ ಕಡಿತಗೊಂಡಿತ್ತು.

ತಾಲೂಕಿನ ಮಣಿನಾಲ್ಕೂರು, ಸರಪಾಡಿ, ಬರಿಮಾರು, ನಾವೂರು, ಸಜೀಪಮುನ್ನೂರು, ನರಿಕೊಂಬು, ಬಾಳ್ತಿಲ, ಶಂಭೂರು, ಕಡೇಶ್ವಾಲ್ಯ ಗ್ರಾಮಗಳಲ್ಲಿ ತಗ್ಗು ಪ್ರದೇಶಗಳು ಜಲಾವೃತಗೊಂಡಿದ್ದು, ಭತ್ತದ ಗದ್ದೆಗಳು, ಅಡಿಕೆ ತೋಟಗಳಿಗೆ ನೀರು ನುಗ್ಗಿತ್ತು. ದ.ಕ.ಜಿಲ್ಲಾಧಿಕಾರಿ ಮುಲ್ಲೆ$ç ಮುಗಿಲನ್‌ ಸಹಿತ ಜಿಲ್ಲಾ ಮಟ್ಟದ ಅಧಿಕಾರಿಗಳು ಬಂಟ್ವಾಳಕ್ಕೆ ಭೇಟಿ ನೀಡಿ ನೆರೆಬಾಧಿತ ಪ್ರದೇಶಗಳನ್ನು ಪರಿಶೀಲಿಸಿದರು.

Advertisement

Udayavani is now on Telegram. Click here to join our channel and stay updated with the latest news.

Next