Advertisement
ಕರ್ನಾಟಕ ರಾಜ್ಯ ಎಸ್ಸಿ, ಎಸ್ಟಿ ಸಂಘಟನೆಯ ರಾಜ್ಯಾಧ್ಯಕ್ಷ ವೆಂಕಟೇಶಯ್ಯ ವಿ.ಟಿ. ಪ್ರಸ್ತಾವಿಸಿ, ಸಂಘಟನೆ ನಡೆದು ಬಂದ ದಾರಿ, ಹೋರಾಟ, ಸರಕಾರದ ಮೀಸಲಾತಿ- ಯೋಜನೆ ಹಾಗೂ ಇನ್ನಿತರ ವಿಷಯಗಳ ಬಗ್ಗೆ ಮಾಹಿತಿ ನೀಡಿದರು. ಎಸ್ಸಿ, ಎಸ್ಟಿ ಸಂಘಟನೆಯ ಜಿಲ್ಲಾಧ್ಯಕ್ಷ ಆಂಜನೇಯ ಸ್ವಾಮಿ ಹೊಸಮನಿ ಅಧ್ಯಕ್ಷತೆ ವಹಿಸಿದ್ದರು. ಮುಖ್ಯ ಅತಿಥಿಯಾಗಿದ್ದ ಪಾಣೆ ಮಂಗಳೂರು ಶ್ರೀ ಶಾರದಾ ಪ್ರೌಢ ಶಾಲೆಯ ಸಂಚಾಲಕ ಜನಾರ್ದನ ಭಟ್ ಮಾತನಾಡಿದರು. ಮಂಗಳೂರು ಸರಕಾರಿ ಪಾಲಿಟೆಕ್ನಿಕ್‌ನ ಉಪನ್ಯಾಸಕ ಭಾಸ್ಕರ್ ವಿಟ್ಲ ವಿಶೇಷ ಉಪನ್ಯಾಸ ನೀಡಿದರು.
ಎಸೆಸೆಲ್ಸಿಯಲ್ಲಿ ಬಂಟ್ವಾಳ ತಾ|ನಲ್ಲಿ ಅತಿ ಹೆಚ್ಚು ಅಂಕ ಪಡೆದ ವಿದ್ಯಾರ್ಥಿಗಳಾದ ಪ್ರಶಿಕ್ಷಾ, ಸ್ಫೂರ್ತಿ, ಶ್ರೇಯಾ, ಸುಧಾಕರ್ ಅವರನ್ನು ಸಮ್ಮಾನಿಸಲಾಯಿತು. ಸಾ.ಶಿ.ಇ. ಉಡುಪಿ ಉಪನಿರ್ದೇಶಕ ಶೇಷಶಯನ ಕಾರಿಂಜ ಅವರನ್ನು ಗೌರವಿಸಲಾಯಿತು. ಸಭಾ ಕಾರ್ಯಕ್ರಮದ ಬಳಿಕ ಶಿಕ್ಷಕರ ಶೈಕ್ಷಣಿಕ ಕುಂದುಕೊರತೆ ಬಗ್ಗೆ ರಾಜ್ಯಾಧ್ಯಕ್ಷರ ಜತೆ ಚರ್ಚೆ ನಡೆಯಿತು. ವಿವಿಧ ಬೇಡಿಕೆ ಈಡೇರಿಸುವಂತೆ ಆಗ್ರಹಿಸಿ ಸಂಘದ ವತಿಯಿಂದ ಮನವಿ ಸಲ್ಲಿಸಲಾಯಿತು. ಮಾದೇಶ ತಂಡ ಪ್ರಾರ್ಥಿಸಿ, ರಾಜ್ಯ ಸಂಘಟನ ಕಾರ್ಯದರ್ಶಿ ಧನರಾಜ್ ಡಿ.ಆರ್ ಸ್ವಾಗತಿಸಿ, ಲಿಂಗರಾಜು ವಂದಿಸಿದರು. ರಾಜೇಶ್ ನಿರೂಪಿಸಿದರು.
Related Articles
ಉನ್ನತ ಹುದ್ದೆಗಳಲ್ಲಿ ಎಸ್ಸಿ-ಎಸ್ಟಿ ಸಮುದಾಯ ಹಿಂದುಳಿದಿರುವುದು ಖೇದಕರ. ಸೌಲಭ್ಯಗಳನ್ನು ಹಕ್ಕುಗಳೊಂದಿಗೆ ಹಾಗೂ ಶೈಕ್ಷಣಿಕ ಸೇವೆಯನ್ನು ಕರ್ತವ್ಯದೊಂದಿಗೆ ನಿರ್ವಹಿಸಿದರೆ ಯಶಸ್ಸು ಸಾಧ್ಯ.
– ಶೇಷಶಯನ ಕಾರಿಂಜ
ಉಡುಪಿ ಸಾ.ಶಿ.ಇ.. ಉಪನಿರ್ದೇಶಕರು
Advertisement