ಬಿ.ಸಿ.ರೋಡು ಸರ್ಕಲ್ ಬಳಿ ರಾ.ಹೆ.75ಕ್ಕೆ ಬಿ.ಸಿ.ರೋಡು-ಕಡೂರು ಹೆದ್ದಾರಿಯೂ ಸೇರುತ್ತಿದ್ದು, ಮತ್ತೂಂದೆಡೆ ಪಾಣೆಮಂಗಳೂರು ಭಾಗದಿಂದ ಆಗಮಿಸುವ ರಸ್ತೆ, ಬಂಟ್ವಾಳ ಪೇಟೆಯಿಂದ ಆಗಮಿಸಿದ ರಸ್ತೆ ಹೆದ್ದಾರಿಯನ್ನು ಸಂಪರ್ಕಿಸುತ್ತಿದೆ. ಹೀಗಾಗಿ ಸರ್ಕಲ್ ನಾಲ್ಕೂ ಭಾಗದಿಂದಲೂ ವಾಹನಗಳು ವೇಗವಾಗಿ ನುಗ್ಗಿ ತಾವು ಸಾಗಬೇಕಾದ ಹಾದಿಗೆ ತಿರುವು ಪಡೆದುಕೊಳ್ಳುತ್ತಿವೆ.
Advertisement
ಸದ್ಯಕ್ಕೆ ಕಾಮಗಾರಿ ನಡೆಯುತ್ತಿದೆ ಎಂದು ವಾಹನಗಳು ನಿಧಾನಕ್ಕೆ ಬಂದರೂ ಮುಂದೆ ಕಾಮಗಾರಿ ಪೂರ್ತಿಗೊಂಡ ಬಳಿಕ ವೇಗವಾಗಿ ನುಗ್ಗಿದರೆ ಅಪಘಾತದ ಸಾಧ್ಯತೆ ಹೆಚ್ಚಿದೆ. ವಾಹನಗಳು ನಿಧಾನಕ್ಕೆ ಸಾಗಿದರೆ ಟ್ರಾಫಿಕ್ ಜಾಮ್‌ನ ಆತಂಕವಿದೆ. ಮತ್ತೂಂದೆಡೆ ಒಂದು ಸಣ್ಣ ಅಪಘಾತ ಉಂಟಾದರೂ ವಾಹನಗಳು ತಾಸುಗಟ್ಟಲೆ ಸರತಿಯಲ್ಲಿ ನಿಲ್ಲಬೇಕಾದ ಅಪಾಯವೂ ಎದುರಾಗಬಹುದು.
ಹಿಂದೆ ಬಿ.ಸಿ.ರೋಡು-ಪುಂಜಾಲಕಟ್ಟೆ ಹೆದ್ದಾರಿ ಅಭಿವೃದ್ಧಿಯ ಸಂದರ್ಭದಲ್ಲಿ ಅಲ್ಲಿನ ಕಾಮಗಾರಿಯನ್ನು ಗಾಣದಪಡ್ಪುವರೆಗೆ ನಿಲ್ಲಿಸಿ ಮುಂದೆ ಬಿ.ಸಿ.ರೋಡು-ಅಡ್ಡಹೊಳೆ ಹೆದ್ದಾರಿ ಅಭಿವೃದ್ಧಿಯ ಸಂದರ್ಭ ರಸ್ತೆಯನ್ನು ವಿಸ್ತರಿಸುವ ಜತೆಗೆ ಸರ್ಕಲ್‌ನಲ್ಲಿ ಓವರ್‌ಪಾಸ್ ನಿರ್ಮಾಣಗೊಳ್ಳುತ್ತದೆ ಎನ್ನಲಾಗಿತ್ತು. ಬಳಿಕ ಹೆದ್ದಾರಿ ಕಾಮಗಾರಿಯ ಸಂದರ್ಭ ಅಂತಹ ಯಾವುದೇ ಪ್ರಸ್ತಾವವಿಲ್ಲದೆ ಬರೀ ಸರ್ಕಲ್ ಮಾತ್ರ ಅಭಿವೃದ್ಧಿ ಪಡಿಸಲಾಗುತ್ತಿದೆ. ಓವರ್‌ಪಾಸ್, ಅಂಡರ್‌ಪಾಸ್‌ಗಳ ನಿರ್ಮಾಣಕ್ಕೆ ಸ್ಥಳೀಯವಾಗಿರುವ ರೈಲ್ವೇ ಸೇತುವೆ ಅಡ್ಡಿಯಾಗುತ್ತದೆ ಎಂದು ಮೂಲಗಳು ತಿಳಿಸಿದೆ.
Related Articles
Advertisement
-ಕಿರಣ್ ಸರಪಾಡಿ