ಹೆಬ್ರಿ: ಪೆರ್ಡೂರಿನ ಹೃದಯ ಭಾಗದಲ್ಲಿ ಬಂಟರ ಸಂಘ (ರಿ.) ಪೆರ್ಡೂರು ಮಂಡಲದಿಂದ ನಿರ್ಮಾಣಗೊಂಡ ಶ್ರೀಮತಿ ಸರ್ವಾಣಿ ಪಳ್ಳಿ ಶ್ರೀನಿವಾಸ ಹೆಗ್ಡೆ ಬಂಟರ ಸಮುದಾಯ ಭವನದ ಉದ್ಘಾಟನ ಸಮಾರಂಭ ಫೆ. 11ರಂದು ನಡೆಯಲಿದೆ.
ಸುಮಾರು 3.5 ಎಕ್ರೆ ವಿಶಾಲವಾದ ಪ್ರದೇಶದಲ್ಲಿ ಸಕಲ ವ್ಯವಸ್ಥೆಯನ್ನು ಒಳಗೊಂಡ ಈ ಭವನದ ಉದ್ಘಾಟನಾ ಸಮಾರಂಭದ ಅಧ್ಯಕ್ಷತೆಯನ್ನು ಪೆರ್ಡೂರು ಮಂಡಲದ ಅಧ್ಯಕ್ಷ ಕೆ. ಶಾಂತಾರಾಮ ಸೂಡ ವಹಿಸಲಿದ್ದಾರೆ.
ಮುಂಬಯಿ ವಿಲೇಪಾರ್ಲೆಯ ರಾಮಕೃಷ್ಣ ಗ್ರೂಪ್ ಆಫ್ ಹೊಟೇಲ್‌ನ ಸುಬ್ಬಯ್ಯ ವಿ. ಶೆಟ್ಟಿ, ಮಣಿಪಾಲ ಮಾಹೆಯ ಸಹಕುಲಾಧಿಪತಿ ಡಾ| ಎಚ್. ಎಸ್. ಬಲ್ಲಾಳ್, ಬಂಟರ ಯಾನೆ ನಾಡವರ ಮಾತೃ ಸಂಘ ಮಂಗಳೂರು ಇದರ ಅಧ್ಯಕ್ಷ ಅಜಿತ್ ಕುಮಾರ್ ರೈ ಮಾಲಾಡಿ, ಎಂಆರ್‌ಜಿ ಗ್ರೂಪ್‌ನ ಅಧ್ಯಕ್ಷ ಕೆ. ಪ್ರಕಾಶ್ ಶೆಟ್ಟಿ, ಬಂಟರ ಸಂಘ ಬ್ರಹ್ಮಾವರ ಇದರ ಮಾಜಿ ಅಧ್ಯಕ್ಷ ಶೇಡಿಕೊಡ್ಲು ವಿಟ್ಠಲ ಶೆಟ್ಟಿ, ಜಾಗತಿಕ ಬಂಟರ ಸಂಘಗಳ ಒಕ್ಕೂಟ ಮಂಗಳೂರು ಇದರ ಅಧ್ಯಕ್ಷ ಐಕಳ ಹರೀಶ್ ಶೆಟ್ಟಿ, ಸಿಟಿ ಆಸ್ಪತ್ರೆ ಮಂಗಳೂರು ಇದರ ಆಡಳಿತ ನಿರ್ದೇಶಕ ಡಾ| ಕೈಲ್ಕೆರೆ ಭಾಸ್ಕರ ಶೆಟ್ಟಿ, ಹಿಂದುಳಿದ ವರ್ಗಗಳ ಶಾಶ್ವತ ಆಯೋಗದ ಅಧ್ಯಕ್ಷ ಕೆ. ಜಯಪ್ರಕಾಶ್ ಹೆಗ್ಡೆ, ಶಾಸಕ ಗುರ್ಮೆ ಸುರೇಶ್ ಶೆಟ್ಟಿ, ವಿಧಾನ ಪರಿಷತ್ ಸದಸ್ಯ ಮಂಜುನಾಥ್ ಭಂಡಾರಿ, ಅದಾನಿ ಗ್ರೂಪ್‌ನ ಅಧ್ಯಕ್ಷ ಮತ್ತು ಕಾರ್ಯನಿರ್ವಾಹಕ ನಿರ್ದೇಶಕ ಕಿಶೋರ್ ಆಳ್ವ, ಉದ್ಯಮಿ ಸುಧಾಕರ ಶೆಟ್ಟಿ, ಬೆಂಗಳೂರು ಬಂಟರ ಸಂಘದ ನಿಕಟಪೂರ್ವ ಆಧ್ಯಕ್ಷ ಉಪೇಂದ್ರ ಶೆಟ್ಟಿ,ಬಂಟರ ಯಾನೆ ನಾಡವರ ಮಾತೃಸಂಘದ ಉಡುಪಿ ತಾಲೂಕು ಸಮಿತಿ ಸಂಚಾಲಕ ಶಿವಪ್ರಸಾದ್ ಹೆಗ್ಡೆ,ಉದ್ಯಮಿಗಳಾದ ದಿನೇಶ್ ಹೆಗ್ಡೆ, ಕೆ. ರಾಜರಾಮ ಹೆಗ್ಡೆ, ಮುನಿಯಾಲು ಉದಯಕೃಷ್ಣ ಶೆಟ್ಟಿ ಚಾರಿಟೆಬಲ್ ಟ್ರಸ್ಟ್ ಅಧ್ಯಕ್ಷ ಉದಯಕುಮಾರ್ ಶೆಟ್ಟಿ ಮೊದಲಾದವರು ಭಾಗವಹಿಸಲಿದ್ದಾರೆ. ಸಾಂಸ್ಕೃತಿಕ ಕಾರ್ಯಕ್ರಮವೂ ನಡೆಯಲಿದೆ.
ಸಮುದಾಯ ಭವನದ ವೈಶಿಷ್ಟ್ಯ
ಸುಮಾರು 7 ಕೋಟಿ ರೂ. ವೆಚ್ಚದಲ್ಲಿ ನಿರ್ಮಾಣಗೊಂಡ ಆತ್ಯಾಧುನಿಕ ಹಾಗೂ ಅತ್ಯಾಕರ್ಷಕ ಒಳಾಂಗಣ ವಿನ್ಯಾಸದ ಸಮುದಾಯ ಭವನ ಹಚ್ಚಹಸಿರಿನ ಪರಿಸರದ ನಡುವೆ ಕಂಗೊಳಿಸುತ್ತಿದೆ. 900ಕ್ಕೂ ಮಿಕ್ಕಿ ಆಸನವುಳ್ಳ ಹವಾನಿಯಂತ್ರಿತ ಸಭಾಭವನ ಹಾಗೂ 600ಕ್ಕೂ ಮಿಕ್ಕಿ ಜನರಿಗೆ ಆಸನ ವ್ಯವಸ್ಥೆಯ ಊಟದ ಹಾಲ್ ಹೊಂದಿದೆ. ಸಸ್ಯಹಾರ ಮತ್ತು ಮಾಂಸಹಾರಕ್ಕೆ ಪ್ರತ್ಯೇಕ ಕಿಚನ್ ಹಾಲ್ ವ್ಯವಸ್ಥೆಯಿದ್ದು, ವಿಶಾಲವಾದ ವೇದಿಕೆ, ಬೃಹತ್ ಗ್ರೀನ್ ರೂಂ., ಹವಾನಿಯಂತ್ರಿತ ಅತಿಥಿಗೃಹ ವಿಶೇಷ ಆಕರ್ಷಣೆಯಾಗಿದೆ. ಸಮುದಾಯ ಭವನದ ಒಳಗೆ ಪೆರ್ಡೂರು ಬಂಟರ ಸೌಹಾರ್ದ ಸಹಕಾರಿಯ ಮುಖ್ಯ ಕಚೇರಿ ಹೊಂದಿದ್ದು ವಿಶಾಲವಾದ ಪಾರ್ಕಿಂಗ್ ವ್ಯವಸ್ಥೆ ಕಲ್ಪಿಸಲಾಗಿದೆ ಎಂದು ಪೆರ್ಡೂರು ಮಂಡಲದ ಅಧ್ಯಕ್ಷ ಕೆ. ಶಾಂತಾರಾಮ ಸೂಡ ಹೇಳಿದ್ದಾರೆ.