Advertisement
ಉಜ್ಜಯಿನಿಯ ಮಹರ್ಷಿ ಸಾಂದೀಪನಿ ರಾಷ್ಟ್ರಿಯ ವೇದವಿದ್ಯಾ ಪ್ರತಿಷ್ಠಾನದ ವತಿಯಿಂದ ಪರ್ಯಾಯ ಶ್ರೀ ಪಲಿಮಾರು ಮಠ ಶ್ರೀಕೃಷ್ಣ ಮಠ, ಉಡುಪಿ ಸಂಸ್ಕೃತ ಕಾಲೇಜು ಮತ್ತು ಬೆಂಗಳೂರಿನ ಪೂರ್ಣಪ್ರಜ್ಞ ಸಂಶೋಧನ ಮಂದಿರದ ಸಹಭಾಗಿತ್ವದಲ್ಲಿ ರಾಜಾಂಗಣದಲ್ಲಿ ನಡೆಯುತ್ತಿರುವ ಮೂರು ದಿನಗಳ ದಕ್ಷಿಣ ಕ್ಷೇತ್ರೀಯ ವೇದ ಸಮ್ಮೇಳನದಲ್ಲಿ ಎರಡನೇ ದಿನವಾದ ಬುಧವಾರ ಸಮ್ಮಾನವನ್ನು ಸ್ವೀಕರಿಸಿ ಮಾತನಾಡಿದ ಅವರು, ವೇದಜ್ಞರೇ ಕಡಿಮೆ ಅದರಲ್ಲೂ ವೇದಾರ್ಥ ಚಿಂತನೆ ಮಾಡುವವರು ಇನ್ನೂ ಕಡಿಮೆ ಎಂದರು.
ಸಮ್ಮಾನ ನೆರವೇರಿಸಿದ ಶ್ರೀ ಅದಮಾರು ಮಠದ ಶ್ರೀ ಈಶಪ್ರಿಯ ತೀರ್ಥ ಶ್ರೀಪಾದರು, ವೇದಜ್ಞರಿಗೆ ಸಮ್ಮಾನ ಮಾಡುವುದೆಂದರೆ ವೇದಗಳಿಗೇ ಸಮ್ಮಾನ ಮಾಡಿದಂತೆ ಎಂದು ಅಭಿಪ್ರಾಯಪಟ್ಟರು. ಪೂರ್ಣಪ್ರಜ್ಞ ಸಂಶೋಧನ ಮಂದಿರದ ನಿರ್ದೇಶಕ ಡಾ| ಆನಂದತೀರ್ಥ ನಾಗಸಂಪಿಗೆಅವರು ಅಭಿನಂದನಾ ಭಾಷಣ ಮಾಡಿದರು. ಸಂಸ್ಕೃತ ಕಾಲೇಜಿನ ಪ್ರಾಂಶುಪಾಲ ಡಾ| ಎನ್.ಲಕ್ಷ್ಮೀನಾರಾ ಯಣ ಭಟ್ ಉಪಸ್ಥಿತರಿದ್ದರು.
Related Articles
ಸಂಸ್ಕೃತ ಕಾಲೇಜಿನ ಪ್ರಾಂಶುಪಾಲ ಡಾ| ಎನ್. ಲಕ್ಷ್ಮೀನಾರಾಯಣ ಭಟ್ಟರ ಅಧ್ಯಕ್ಷತೆಯಲ್ಲಿ ನಡೆದ ಗೋಷ್ಠಿಯಲ್ಲಿ ವಿದ್ವಾಂಸ ಹೆರ್ಗ ರವೀಂದ್ರ ಭಟ್, ಎರ್ನಾಕುಳಂ ಚಿನ್ಮಯ ವಿ.ವಿ. ಪ್ರಾಧ್ಯಾಪಕ ಡಾ| ರಾಮಕೃಷ್ಣ ಪೆಜತ್ತಾಯ, ಬೆಂಗಳೂರಿನ ಪ್ರಾಧ್ಯಾಪಕ ಕೆ. ಕೃಷ್ಣರಾಜ ಕುತ್ಪಾಡಿ, ಪುಣೆಯ ಸಂಶೋಧಕಿ ಡಾ| ಭಾಗ್ಯಲತಾ ಪ್ರಬಂಧ ಮಂಡಿಸಿದರು.
Advertisement
ಬೆಂಗಳೂರು ಪೂರ್ಣಪ್ರಜ್ಞ ವಿದ್ಯಾ ಪೀಠದ ನಿವೃತ್ತ ಪ್ರಾಂಶುಪಾಲ ಪ್ರೊ| ಎ. ಹರಿದಾಸ ಭಟ್ಟರ ಅಧ್ಯಕ್ಷತೆಯಲ್ಲಿ ನಡೆದ ಗೋಷ್ಠಿಯಲ್ಲಿ ವೇದ ವಿದ್ವಾಂಸ ರಾದ ವಿ| ಸನತ್‌ಕುಮಾರ್ ಮತ್ತೂರು, ಕದ್ರಿ ಪ್ರಭಾಕರ ಅಡಿಗ, ಸುದರ್ಶನ ಸಾಮಗ, ಸಗ್ರಿ ರಾಘವೇಂದ್ರ ಉಪಾ ಧ್ಯಾಯ ಪ್ರಬಂಧ ಮಂಡಿಸಿದರು. ಕೇರಳ ಶಂಕರಾಚಾರ್ಯ ವಿ.ವಿ. ನಿವೃತ್ತ ಪ್ರಾಧ್ಯಾಪಕ ರಾಮಕೃಷ್ಣ ಭಟ್ ಅಧ್ಯಕ್ಷತೆಯಲ್ಲಿ ನಡೆದ ಗೋಷ್ಠಿಯಲ್ಲಿ ತಿರುಪತಿ ರಾಷ್ಟ್ರೀಯ ಸಂಸ್ಕೃತ ಸಂಸ್ಥಾನದ ಪ್ರಾಧ್ಯಾಪಕರಾದ ಡಾ| ಗಣಪತಿ ಭಟ್, ಪ್ರೊ| ಎಂ.ಎಲ್.ಎನ್. ಮೂರ್ತಿ, ಬೆಂಗಳೂರು ಸಂಸ್ಕೃತ ಕಾಲೇಜಿನ ಪ್ರಾಧ್ಯಾಪಕ ಅನಂತಕೃಷ್ಣ ಭಟ್ ಪ್ರಬಂಧ ಮಂಡಿಸಿದರು.