Advertisement
ಬಾಂಗ್ಲಾದೇಶದಲ್ಲಿ ಅಲ್ಪಸಂಖ್ಯಾಕರಾದ ಹಿಂದೂ ಗಳನ್ನು ರಕ್ಷಿಸಬೇಕಾದ್ದು ಬಾಹುಳ್ಯ ಹೊಂದಿರುವ ಮುಸ್ಲಿಮರ ಕರ್ತವ್ಯವಾಗಿದೆ. ಆದರೆ ಇದಾಗದ ಕಾರಣಕ್ಕೆ ನಾನು ಹಿಂದೂಗಳ ಕ್ಷಮೆ ಕೇಳುತ್ತೇನೆ. ಇದು ನಮ್ಮ ಲೋಪ ಎಂಬುದನ್ನು ಒಪ್ಪಿಕೊಳ್ಳುತ್ತೇನೆ. ಮುಂದಿನ ದಿನಗಳಲ್ಲಿ ಹೀಗಾಗದಂತೆ ನೋಡಿಕೊ ಳ್ಳುತ್ತೇವೆ ಎಂದು ಅವರು ಹೇಳಿದ್ದಾರೆ.
ಅನಿರ್ದಿಷ್ಟಾವಧಿ ಮುಷ್ಕರ ಆರಂಭಿಸಿದ್ದ ಬಾಂಗ್ಲಾ ಪೊಲೀಸರು ಮಧ್ಯಾಂತರ ಸರಕಾರದ ಜತೆ ಮಾತುಕತೆ ನಡೆಸಿದ ಬಳಿಕ ಮುಷ್ಕರವನ್ನು ಹಿಂಪಡೆದಿದ್ದಾರೆ. ಪ್ರತಿಭಟನೆ ಹಿಂಪಡೆಯಲು ಪೊಲೀಸರು ಇಟ್ಟಿದ್ದ 11 ಬೇಡಿಕೆಗಳನ್ನು ಈಡೇರಿಸಲು ಮಧ್ಯಾಂತರ ಸರಕಾರ ಒಪ್ಪಿಕೊಂಡಿದೆ ಎಂದು ಮೂಲಗಳು ತಿಳಿಸಿವೆ. ಅಕ್ರಮ ಆಯುಧ ವಾಪಸ್ ಕೊಡಿ:
ಪ್ರತಿಭಟನಕಾರರು ಬಳಕೆ ಮಾಡುತ್ತಿರುವ ಅಕ್ರಮ ಹಾಗೂ ಅನಧಿಕೃತ ಆಯುಧಗಳನ್ನು ಆ.19ರೊಳಗೆ ಸರಕಾರದ ವಶಕ್ಕೆ ನೀಡಬೇಕು ಎಂದು ಮಧ್ಯಾಂತರ ಸರಕಾರ ಸೂಚನೆ ನೀಡಿದೆ. ನಿರಂತರವಾಗಿ ನಡೆದ ಪ್ರತಿಭಟನೆಯ ಸಮಯದಲ್ಲಿ ಪೊಲೀಸರು ಹಾಗೂ ಇತರ ಕಾನೂನು ಪಾಲಕರ ಬಳಿ ಲೂಟಿ ಮಾಡಲಾದ ಆಯುಧಗಳನ್ನು ತಂದೊಪ್ಪಿಸುವಂತೆ ಸೂಚಿಸಿದೆ. ಅಲ್ಲದೇ ಆಯುಧಗಳನ್ನು ತಂದುಕೊಡಲು ಭಯ ವಾದರೆ, ಬೇರೊಬ್ಬರ ಕೈಲಿ ಕೊಟ್ಟು ಕಳುಹಿಸಿ ಎಂದೂ ಬಾಂಗ್ಲಾದೇಶದ ಮಧ್ಯಾಂತರ ಸರಕಾರ ಹೇಳಿದೆ.
Related Articles
ಬಾಂಗ್ಲಾದ ಮಾಜಿ ಮುಖ್ಯಮಂತ್ರಿ ಶೇಖ್ ಹಸೀನಾ ಅವರ ಪಕ್ಷವಾದ ಅವಾಮಿ ಲೀಗ್ ಅನ್ನು ನಿಷೇಧಿಸುವ ಯಾವುದೇ ಉದ್ದೇಶ ನಮಗಿಲ್ಲ. ಬಾಂಗ್ಲಾದ ಅಭಿವೃದ್ಧಿಗೆ ಈ ಪಕ್ಷ ಕೊಡುಗೆ ನೀಡಿದೆ. ಇದನ್ನು ನಾವು ಗೌರವಿಸುತ್ತೇವೆ. ಅವಾಮಿ ಲೀಗ್ ಪಕ್ಷ ಚುನಾ ವಣೆಯಲ್ಲೂ ಸ್ಪರ್ಧಿಸಲಿ ಎಂದು ಅವರು ಹೇಳಿದರು.
Advertisement
“ಬಾಂಗ್ಲಾದಲ್ಲಿ ಹಿಂದೂಗಳ ಮೇಲೆ ನಡೆಯುತ್ತಿರುವ ದಾಳಿ ಬಹಳ ನೋವು ತಂದಿದೆ. ಅಲ್ಪಸಂಖ್ಯಾಕರ ರಕ್ಷಣೆಗೆ ಸರಕಾರ ಕ್ರಮ ಕೈಗೊಳ್ಳಲಿ.” – ಪ್ರಿಯಾಂಕಾ ವಾದ್ರಾ, ಕಾಂಗ್ರೆಸ್ ನಾಯಕಿ
ಬಾಂಗ್ಲಾದಲ್ಲಿ ಪ್ರತಿಮೆ ಧ್ವಂಸ: ತರೂರ್‌ರಿಂದ ತಪ್ಪು ಮಾಹಿತಿ ಟ್ವೀಟ್ಹೊಸದಿಲ್ಲಿ: 1971ರ ಯುದ್ಧದ ವೇಳೆ ಪಾಕಿಸ್ಥಾನದ ಶರಣಾಗತಿ ಬಿಂಬಿಸುವ ಪ್ರತಿಮೆಗಳನ್ನು ಬಾಂಗ್ಲಾದಲ್ಲಿ ಧ್ವಂಸ ಮಾಡಲಾಗಿದೆ ಎಂದು ಕಾಂಗ್ರೆಸ್ ನಾಯಕ ಶಶಿ ತರೂರ್ ಟ್ವೀಟ್ ಮಾಡಿದ್ದರು. ಆದರೆ ಇದು ಸುಳ್ಳು ಎಂದು ಸಾಬೀತಾಗಿದೆ. ನೀರಜ್ ಎಂಬ ವ್ಯಕ್ತಿ ಈ ಪ್ರತಿಮೆಗಳ 6 ವರ್ಷ ಹಿಂದಿನ ಫೋಟೋ ಟ್ವೀಟ್ ಮಾಡಿದ್ದು, ಪಾಕಿಸ್ಥಾನದ ಕ್ರೌರ್ಯ ತೋರಿಸಲು ಪ್ರತಿ ಮೆಗಳನ್ನು ಈ ರೀತಿ ನಿರ್ಮಿಸಲಾಗಿದೆ ಎಂದಿದ್ದಾರೆ.