Advertisement

Bangladesh;ಸಿಡಿದೆದ್ದ ಹಿಂದೂಗಳು: ಮಧ್ಯಾಂತರ ಸರಕಾರದ ವಿರುದ್ಧ ಬೃಹತ್‌ ರ್‍ಯಾಲಿ

02:47 AM Oct 27, 2024 | Team Udayavani |

ಢಾಕಾ: ಮಾಜಿ ಪ್ರಧಾನಿ ಹಸೀನಾರನ್ನು ಹುದ್ದೆ ಯಿಂದ ಕೆಳಗಿಳಿಸುವ ಸಂದರ್ಭದಲ್ಲಿ ಅತೀದೊಡ್ಡ ದಂಗೆಗೆ ಸಾಕ್ಷಿಯಾಗಿದ್ದ ಬಾಂಗ್ಲಾ ದಲ್ಲಿ ಇದೀಗ ಹಿಂದೂ ಅಲ್ಪ ಸಂಖ್ಯಾಕ ಸಮುದಾಯವು ರಣಕಹಳೆ ಮೊಳಗಿಸುತ್ತಿದೆ. ಛತ್ತೋಗ್ರಾಮ್‌ನ (ಹಿಂದಿನ ಚಿತ್ತಗಾಂಗ್‌) ಐತಿಹಾಸಿಕ ಲಾಲ್‌ ದೀ ಮೈದಾನದಲ್ಲಿ ಶುಕ್ರವಾರ ಸಾವಿರಾರು ಹಿಂದೂಗಳು ಒಟ್ಟಾಗಿ ಅಲ್ಪಸಂಖ್ಯಾಕರ ರಕ್ಷಣೆಗೆ ಆಗ್ರಹಿಸಿ ಬೃಹತ್‌ ರ್ಯಾಲಿ ನಡೆಸಿದ್ದಾರೆ.

Advertisement

ಸನಾತನ ಜಾಗರಣ್‌ ಮಂಚ್‌ ಈ ರ್‍ಯಾಲಿ ಆಯೋಜಿಸಿದ್ದು, ಬಾಂಗ್ಲಾ ದಂಗೆ ಸಂದರ್ಭದಲ್ಲಿ ಹಿಂದೂಗಳು, ಕ್ರಿಶ್ಚಿಯ ನ್ನರು, ಬೌದ್ಧರು ಸೇರಿದಂತೆ ಅಲ್ಪಸಂಖ್ಯಾಕ ಸಮುದಾಯಗಳ ಮೇಲಾದ ದಾಳಿ ಯನ್ನು ಈ ಪ್ರತಿಭಟನೆ ಮೂಲಕ ಖಂಡಿಸಲಾಗಿದೆ. ಜತೆಗೆ ಅಲ್ಪಸಂಖ್ಯಾಕರೂ ಬಾಂಗ್ಲಾದೇಶಿಗರೇ ಆಗಿದ್ದೇವೆ, ನಮಗೂ ಹಕ್ಕಿದೆ ಎನ್ನುವಂಥ ಘೋಷಣೆಗಳನ್ನು ಮೊಳಗಿಸಿ, ಮೊಹಮ್ಮದ್‌ ಯೂನುಸ್‌ ನೇತೃತ್ವದ ಮಧ್ಯಾಂತರ ಸರಕಾರದ ಎದುರು 8 ಬೇಡಿಕೆಗಳನ್ನು ಪ್ರತಿಭಟನಕಾ ರರು ಇಟ್ಟಿದ್ದಾರೆ. ಈ ಬೇಡಿಕೆಗಳ ಪೈಕಿ ದುರ್ಗಾ ಪೂಜೆಗೆ 5 ದಿನ‌ ರಜೆ, ದಂಗೆಯ ಸಂತ್ರಸ್ತರಿಗೆ ಪರಿಹಾರ- ಪುನರ್ವಸತಿ, ಅಲ್ಪಸಂಖ್ಯಾಕರ ರಕ್ಷಣೆಗೆ ಕಾನೂನು ರಚನೆಯ ಪ್ರಸ್ತಾವವೂ ಇವೆ.

ಬೇಡಿಕೆಗಳೇನು?
ದುರ್ಗಾ ಪೂಜೆಗೆ 5 ದಿನ ರಜೆ
ದಂಗೆ ಸಂತ್ರಸ್ತರಿಗೆ ಪರಿಹಾರ
ಅಲ್ಪಸಂಖ್ಯಾಕರ ರಕ್ಷಣೆಗೆ ಹೊಸ ಕಾನೂನು ಜಾರಿ, ಸಚಿವಾಲಯದ ರಚನೆ
ಅಲ್ಪಸಂಖ್ಯಾಕರ ಮೇಲೆ ದಾಳಿ ನಡೆಸಿದವರ ವಿರುದ್ಧ ಕ್ರಮ
ಹಿಂದೂ, ಕ್ರಿಶ್ಚಿಯನ್‌ ಬೌದ್ಧರ ಕಲ್ಯಾಣಕ್ಕೆ ಟ್ರಸ್ಟ್‌ ಸ್ಥಾಪನೆ

ಬಾಂಗ್ಲಾ ಅಲ್ಪಸಂಖ್ಯಾಕರ ರಕ್ಷಣೆಗೆ ಬದ್ಧ ಎಂದು ಭಾರತ ಸರಕಾರ ಈ ಹಿಂದೆಯೇ ವಾಗ್ಧಾನ ನೀಡಿದೆ. ಅಲ್ಲಿನ ಹಿಂದೂಗಳು ದೇಶ ತೊರೆಯದೇ ಅಲ್ಲಿಯೇ ನೆಲೆಯಾಗಬೇಕು. ಅಲ್ಲಿ ಶಕ್ತಿಪೀಠವಿದೆ ಎಂದು ನಾವು ಭಾವಿಸಿದ್ದೇವೆ. ಅವರ ಮಾತೃಭೂಮಿಯ ಸ್ವಾತಂತ್ರ್ಯಕ್ಕೆ ಭಾರತ ಮಹತ್ತರ ಪಾತ್ರವಹಿಸಿದೆ.
ದತ್ತಾತ್ರೇಯ ಹೊಸಬಾಳೆ, ಆರ್‌ಎಸ್‌ಎಸ್‌ ಸರಕಾರ್ಯವಾಹ

Advertisement
Advertisement

Udayavani is now on Telegram. Click here to join our channel and stay updated with the latest news.

Next