ಢಾಕಾ: ಮೀಸಲಾತಿ ವಿಚಾರದ ಹಿಂಸಾಚಾರದಲ್ಲಿ ನಲುಗಿ ಹೋಗಿರುವ ಬಾಂಗ್ಲಾದೇಶದಲ್ಲಿ ಪ್ರಧಾನಮಂತ್ರಿ ಶೇಖ್ ಹಸೀನಾ ಅವರು ದೇಶಾದ್ಯಂತ ಕರ್ಫ್ಯೂ ಜಾರಿಗೊಳಿಸಿರುವುದಾಗಿ ಘೋಷಿಸಿದ್ದಾರೆ.
ಸರ್ಕಾರಿ ಉದ್ಯೋಗಿದಲ್ಲಿ 1971ರ ಸ್ವಾತಂತ್ರ್ಯ ಹೋರಾಟದಲ್ಲಿ ಭಾಗವಹಿಸಿದ್ದ ಕುಟುಂಬದವರಿಗೆ ಶೇ.30ರಷ್ಟು ಮೀಸಲು ನೀಡುವ ನೀತಿ ವಿರೋಧಿಸಿ ಬಾಂಗ್ಲಾದೇಶದ ವಿದ್ಯಾರ್ಥಿಗಳು ಕಳೆದ ಮೂರು ದಿನಗಳಿಂದ ನಡೆಸುತ್ತಿದ್ದ ಪ್ರತಿಭಟನೆ ಶುಕ್ರವಾರ (ಜುಲೈ 19) ತೀವ್ರ ಸ್ವರೂಪ ಪಡೆದುಕೊಂಡು, ಹಿಂಸಾಚಾರ ನಡೆದಿತ್ತು.
ವರದಿಯ ಪ್ರಕಾರ, ಹಿಂಸಾಚಾರದಲ್ಲಿ ಕನಿಷ್ಠ 105 ಮಂದಿ ಸಾವನ್ನಪ್ಪಿದ್ದು, 1,500ಕ್ಕೂ ಅಧಿಕ ಜನರು ಗಾಯಗೊಂಡಿರುವುದಾಗಿ ತಿಳಿಸಿದೆ. ಹಿಂಸಾಚಾರದಿಂದಾಗಿ 125 ವಿದ್ಯಾರ್ಥಿಗಳು ಸೇರಿದಂತೆ 245 ಭಾರತೀಯರು ಭಾರತಕ್ಕೆ ಮರಳಿರುವುದಾಗಿ ವರದಿ ವಿವರಿಸಿದೆ.
30ರಷ್ಟು ಮೀಸಲು ನೀಡುವ ನೀತಿಯನ್ನು ಕೈಬಿಡುವಂತೆ ಪ್ರತಿಭಟನಾಕಾರರು ಆಗ್ರಹಿಸಿದ್ದಾರೆ. ದೇಶದಲ್ಲಿ ಕಾನೂನು ಸುವ್ಯವಸ್ಥೆ ಕಾಪಾಡುವ ನಿಟ್ಟಿನಲ್ಲಿ ಕರ್ಫ್ಯೂ ಜಾರಿಗೊಳಿಸಿರುವುದಾಗಿ ಪ್ರಧಾನಿ ಶೇಖ್ ಹಸೀನಾ ತಿಳಿಸಿದ್ದಾರೆ.
ಶುಕ್ರವಾರ ಪ್ರತಿಭಟನಾಕಾರರು ನ್ಯಾಷನಲ್ ಟೆಲಿವಿಷನ್ ಬ್ರಾಡ್ ಕಾಸ್ಟರ್ ಕಚೇರಿಗೆ ಬೆಂಕಿ ಹಚ್ಚಿದ್ದರು. ಈ ಸಂದರ್ಭದಲ್ಲಿ ಬಾರ್ಡರ್ ಗಾರ್ಡ್ ಅಧಿಕಾರಿಗಳು ಗುಂಡಿನ ದಾಳಿ ನಡೆಸಿರುವುದಾಗಿ ಅಸೋಸಿಯೇಟೆಡ್ ಪ್ರೆಸ್ ವರದಿ ಮಾಡಿದೆ.
ಇದನ್ನೂ ಓದಿ:Onion Manchurian ಅಬ್ಬಬ್ಬಾ ಎಂಥಾ ರುಚಿ ತಪ್ಪದೇ ಈ ರೆಸಿಪಿ ಟ್ರೈ ಮಾಡಿ…