Advertisement
1. ಬಾಳೆಹಣ್ಣಿನ ಮಿಲ್ಕ್ಶೇಕ್ಬೇಕಾಗುವ ಸಾಮಗ್ರಿ: ಬಾಳೆಹಣ್ಣು – 2, ಸಕ್ಕರೆ- ಅರ್ಧ ಕಪ್, ಏಲಕ್ಕಿ ಪುಡಿ ಅರ್ಧ ಚಮಚ, ಹಾಲು- 3 ಕಪ್
ಬೇಕಾಗುವ ಸಾಮಗ್ರಿ: ರವೆ- 1 ಕಪ್, ಬಾಳೆಹಣ್ಣು- 2, ಸಕ್ಕರೆ- 1 ಕಪ್, ದ್ರಾಕ್ಷಿ, ಗೋಡಂಬಿ-2 ಚಮಚ, ಬಾದಾಮಿ- 10, ಕೇಸರಿ ಬಣ್ಣ- 2 ಚಿಟಿಕೆ, ತುಪ್ಪ- 2 ಕಪ್, ಏಲಕ್ಕಿಪುಡಿ- ಅರ್ಧ ಚಮಚ.
Related Articles
Advertisement
3. ಬಾಳೆಹಣ್ಣಿನ ರಸಾಯನಬೇಕಾಗುವ ಸಾಮಗ್ರಿ: ಬಾಳೆಹಣ್ಣು -2, ಬೆಲ್ಲ-1 ಕಪ್, ಏಲಕ್ಕಿಪುಡಿ- ಅರ್ಧ ಚಮಚ, ಕಾಯಿತುರಿ- 1 ಕಪ್. ಮಾಡುವ ವಿಧಾನ: ಬಾಳೆಹಣ್ಣನ್ನು ಸಣ್ಣಗೆ ಹೆಚ್ಚಿಕೊಳ್ಳಿ. ಅದಕ್ಕೆ ಬೆಲ್ಲದ ಪುಡಿ, ಏಲಕ್ಕಿಪುಡಿ ಸೇರಿಸಿ ಕೂಡಿಸಿ. ನಂತರ ಅದಕ್ಕೆ ಕಾಯಿತುರಿಯನ್ನು ಸೇರಿಸಿ ಸವಿಯಿರಿ. ಬೇಕಿದ್ದರೆ ಇದಕ್ಕೆ ಗೋಡಂಬಿ, ಬಾದಾಮಿಯನ್ನು ಹಾಕಬಹುದು. 4. ಬನಾನಾ ಪೂರಿ
ಬೇಕಾಗುವ ಸಾಮಗ್ರಿ: ಬಾಳೆಹಣ್ಣು – 2, ಸಕ್ಕರೆ- ಅರ್ಧ ಕಪ್, ಗೋಧಿ ಹಿಟ್ಟು- 1 ಕಪ್, ಮೈದಾಹಿಟ್ಟು- 1 ಕಪ್, ತುಪ್ಪ- 2 ಚಮಚ, ಗಟ್ಟಿ ಮೊಸರು- ಅರ್ಧ ಕಪ್, ಉಪ್ಪು ಚಿಟಿಕೆ, ಕರಿಯಲು ಎಣ್ಣೆ ಮಾಡುವ ವಿಧಾನ: ಮೊದಲು ಬಾಳೆಹಣ್ಣಿನ ತುಂಡುಗಳನ್ನು ಸಕ್ಕರೆಯೊಂದಿಗೆ ಚೆನ್ನಾಗಿ ಬೆರೆಸಿ. ಇದಕ್ಕೆ ಮೈದಾ- ಗೋಧಿಹಿಟ್ಟು, ಮೊಸರು, ತುಪ್ಪ, ಉಪ್ಪು ಹಾಕಿ ಚೆನ್ನಾಗಿ ಕಲಸಿ ನಾದಿಕೊಳ್ಳಿ. ಈ ಹಿಟ್ಟನ್ನು 2 ಗಂಟೆಗಳ ಕಾಲ ಹಾಗೇ ಬಿಡಿ. ನಂತರ ಮತ್ತೆ ಚೆನ್ನಾಗಿ ನಾದಿಕೊಳ್ಳಿ. ಸಣ್ಣ ಸಣ್ಣ ಉಂಡೆಗಳನ್ನಾಗಿ ಮಾಡಿಕೊಳ್ಳಿ. ಒಂದೊಂದೇ ಹಿಟ್ಟಿನ ಉಂಡೆಯನ್ನು ಪೂರಿ ಹಾಳೆಯಂತೆ ಲಟ್ಟಿಸಿ, ಕಾದ ಎಣ್ಣೆಯಲ್ಲಿ ಕೆಂಪಗೆ ಗರಿಗರಿಯಾಗಿ ಕರಿಯಿರಿ. – ಶ್ರುತಿ ಕೆ.ಎಸ್., ತುರುವೇಕೆರೆ