Advertisement
ಕಡಂಬ ಅವರು ಶಿರ್ಲಾಲುವಿನಲ್ಲಿ ಡಿ. 6ರಂದು ನಡೆಯಲಿರುವ 21ನೇ ಕಾರ್ಕಳ ತಾಲೂಕು ಕನ್ನಡ ಸಾಹಿತ್ಯ ಸಮ್ಮೇಳನದ ಸರ್ವಾಧ್ಯಕ್ಷರು. ಇರ್ವತ್ತೂರಿನ ನಾಗರಾಜ್ ಕಡಂಬ, ಜಯಾವತಿ ದಂಪತಿ ಪುತ್ರರಾದ ಇವರು ಮೂಡುಬಿದಿರೆ ಜೈನ್ ಪ.ಪೂ. ಕಾಲೇಜಿನಲ್ಲಿ 27 ವರ್ಷ ಪ್ರಾಧ್ಯಾಪಕರಾಗಿ, 5 ವರ್ಷ ಪ್ರಾಂಶುಪಾಲರಾಗಿ ಸೇವೆ ಸಲ್ಲಿಸಿದ್ದಾರೆ. ಕಂಬಳ ಮತ್ತು ತುಳುನಾಡು ಜಾನಪದ ಬಗ್ಗೆ ಲೇಖನ ಮತ್ತು ಸಂಶೋಧನಾ ಬರಹಗಳನ್ನು ಬರೆದಿದ್ದಾರೆ. ರಾಜ್ಯಮಟ್ಟದ ರಾಜೋತ್ಸವ ಪ್ರಶಸ್ತಿ ಪುರಸ್ಕೃತರು. ಕೃಷಿ ಕ್ಷೇತ್ರದಲ್ಲಿಯೂ ವಿಶೇಷ ಸಾಧನೆ ಜತೆಗೆ ಹಲವು ಪುರಸ್ಕಾರಗಳು ಇವರಿಗೆ ದೊರೆತಿದೆ. ಕರ್ನಾಟಕ ತುಳು ಸಾಹಿತ್ಯ ಆಕಾಡೆಮಿ ಸದಸ್ಯರಾಗಿಯೂ ಸೇವೆ ಸಲ್ಲಿಸಿದ್ದಾರೆ. ಅವರ ಜತೆಗಿನ ಸಂದರ್ಶನದ ವಿವರ ಇಲ್ಲಿದೆ.
ಸರಕಾರಿ ಕನ್ನಡ ಮಾಧ್ಯಮ ಶಾಲೆಗಳು ಮುಚ್ಚುತ್ತಿರುವುದನ್ನು ನೋಡುವಾಗ ಮನಸ್ಸಿಗೆ ನೋವಾಗುತ್ತಿದೆ. ಕೆಲವು ಊರಿನಲ್ಲಿ ಶಾಲೆಗಳ ಕಿಟಕಿ, ಬಾಗಿಲುಗಳು ಮುರಿದು ವಿದ್ಯಾರ್ಥಿಗಳಿಲ್ಲದೆ ಬಾಗಿಲು ಮುಚ್ಚುವ ಸ್ಥಿತಿಯಲ್ಲಿದೆ. ಕೆಲವು ಶಾಲೆಗಳಲ್ಲಿ ಹಳೆ ವಿದ್ಯಾರ್ಥಿಗಳು, ಊರಿನ ಜನರ ಸಹಕಾರದಿಂದ ಉತ್ತಮ ಶಿಕ್ಷಣದ ಜತೆಗೆ, ಹಾಜರಾತಿಯೂ ಇದೆ. ಸರಕಾರದ ಜತೆಗೆ ಊರಿನ ಜನರು ಶಾಲೆಯ ಉಳಿವಿಗೆ ಕೊಡುಗೆ ನೀಡಬೇಕು. ಹಳೆ ವಿದ್ಯಾರ್ಥಿಗಳು ಶಾಲೆಯನ್ನು ಉಳಿಸಲು, ಮೂಲಸೌಕರ್ಯದ ಅಭಿವೃದ್ಧಿಗೆ ಹೆಚ್ಚಿನ ಸಹಕಾರ ನೀಡಬೇಕು. ಸರಕಾರವು ಗ್ರಾಮೀಣ ಶಾಲೆಗಳ ಸುಧಾರಣೆಗೆ ಹೆಚ್ಚಿನ ಒತ್ತು ನೀಡಬೇಕು. -ಮಕ್ಕಳಿಗೆ ಭಾಷಾಭಿಮಾನ ಮೂಡಿಸುವಲ್ಲಿ ಪೋಷಕರ ಪಾತ್ರ ಹೇಗಿರಬೇಕು?
ಇಂಗ್ಲಿಷ್ ವ್ಯಾಮೋಹದಿಂದ ಹೊರಬರಬೇಕು. ಮಕ್ಕಳ ಸರ್ವಂಗೀಣ ಬೆಳವಣಿಗೆಗೆ ಇಂಗ್ಲಿಷ್, ಹಿಂದಿ ಸಹಿತ ಎಲ್ಲ ಭಾಷೆಗಳೂ ಬೇಕು.
Related Articles
Advertisement
-ನಾಡು ನುಡಿಗಾಗಿ ಕನ್ನಡಪರ ಸಂಘಟನೆ ಕೊಡುಗೆ ಯಾವ ರೀತಿ ಅನುಕೂಲವಾಗುತ್ತಿದೆ ?ಭಾಷೆಯ ವಿಚಾರವಾಗಿ ಕನ್ನಡಪರ ಸಂಘಟನೆ, ಒಕ್ಕೂಟಗಳ ಹೋರಾಟ, ಅಭಿಮಾನ ಒಪ್ಪುವಂತದ್ದೆ. ಆದರೆ ರಾಜಕೀಯ ಹಿನ್ನೆಲೆ ಮತ್ತು ಬೇರೊಂದು ಲಾಭದ ದೃಷ್ಟಿಕೋನದ ಉದ್ದೇಶದಿಂದ ಭಾಷೆಯ ವಿಷಯ ಸಹಿತ ಯಾವ ವಿಚಾರದಲ್ಲಿಯೂ ಹೋರಾಟ, ಪ್ರತಿಭಟನೆಗಳು ನಡೆಯಬಾರದು. ಕನ್ನಡದ ಮನಸ್ಸುಗಳನ್ನು ಒಂದುಗೂಡಿಸುವ, ಉತ್ತಮ ಸಮಾಜ ನಿರ್ಮಾಣಕ್ಕೆ ಕೆಲಸ ಮಾಡಬೇಕು. -ಸಾಹಿತ್ಯ ಸಮ್ಮೇಳನ ಜನರಿಗೆ ಹತ್ತಿರ ವಾಗುತ್ತಿದೆಯಾ?
ಸಾಹಿತ್ಯ ಸಮ್ಮೇಳನವು ಜನರಿಗೆ ಹತ್ತಿರವಾಗುವ ರೀತಿಯಲ್ಲಿಯೇ ಇತ್ತೀಚಿನ ವರ್ಷಗಳಲ್ಲಿ ಆಚರಿಸಲ್ಪಡುತ್ತಿವೆ. ಕನ್ನಡದ ಹಬ್ಬವಾಗಿ ಮನೆ, ಮನಗಳಲ್ಲಿ ಸಾಹಿತ್ಯ ಸಮ್ಮೇಳನ ರಾರಾಜಿಸಬೇಕು. ಆದರೆ ಗೋಷ್ಠಿ ಮತ್ತು ವಿಚಾರ ಮಂಥನಗಳಲ್ಲಿ ಜನರ ಕೊರತೆ ಕಾಣುತ್ತದೆ. ಬೆರಣಿಕೆಯಷ್ಟು ಮಂದಿ ಮಾತ್ರ ಭಾಗವಹಿಸುತ್ತಾರೆ. ಎಲ್ಲ ಸಾರ್ವಜನಿಕರೂ ಸಮ್ಮೇಳನದಲ್ಲಿ ಭಾಗವಹಿಸಬೇಕು.
ಎಂಜಿನಿಯರಿಂಗ್, ವೈದ್ಯಕೀಯ ಮುಂತಾದ ಶಿಕ್ಷಣವನ್ನು ಪಡೆಯುವುದು, ಅಂಕಗಳಿಕೆ ಶಿಕ್ಷಣವೇ ಜೀವನದಲ್ಲಿ ಸಾಧನೆ ಎಂಬಂತೆ ಸಮಾಜದಲ್ಲಿ ಬಿಂಬಿತವಾದ ಪರಿಣಾಮ ಸಾಹಿತ್ಯದಲ್ಲಿ ಯುವಜನರ ಆಸಕ್ತಿ ಕಡಿಮೆಯಾಗುತ್ತಿದೆ. ಮೊಬೈಲ್‌ನಲ್ಲಿಯೂ ಹೆಚ್ಚಿನ ಸಮಯವನ್ನು ಕಳೆಯುತ್ತ ಸಾಹಿತ್ಯ, ಸಾಂಸ್ಕೃತಿಕ ಮೌಲ್ಯಗಳಿಂದ ವಂಚಿತರಾಗುತ್ತಿದ್ದಾರೆ.
ಪ್ರೊ| ಕೆ. ಗುಣಪಾಲ ಕಡಂಬ -ಅವಿನ್ ಶೆಟ್ಟಿ