ಜೀವನ ವಿಧಾನ ಬದಲಾದಂತೆಲ್ಲ ಮನೆಯಲ್ಲಿ ನಾವು ಬಳಸುವ ವಸ್ತುಗಳಲ್ಲಿಯೂ ಕೂಡ ಅಷ್ಟೇ ಬದಲಾವಣೆಯನ್ನು ತಂದುಕೊಂಡಿದ್ದೇವೆ. ಊಟದ ವಿಷಯಕ್ಕೆ ಬಂದಾಗ ವಿವಿಧ ಚಿತ್ತಾರದ, ವೈವಿಧ್ಯಮಯವಾದ ಹಾಗೂ ವಿವಿಧ ಲೋಹದ ಪಾತ್ರೆಗಳನ್ನು ನಾವಿಂದು ಬಳಸುತ್ತಿದ್ದೇವೆ. ಆದರೆ, ನಿಸರ್ಗದತ್ತವಾಗಿ ದೊರೆಯುವ ಬಾಳೆಎಲೆಯ ಊಟ ಮಾತ್ರ ಎಲ್ಲ ವೈಭೋಗವನ್ನೂ ಮೀರಿಸುವಂಥದ್ದು. ಬಾಳೆಎಲೆಯ ಊಟ ಈ ಕೆಳಗಿನಂತೆ ಹಲವು ರೀತಿಗಳಲ್ಲಿ ಉಪಯುಕ್ತವಾಗಿದೆ.
.ಬಾಳೆಎಲೆಯಲ್ಲಿ ಬ್ಯಾಕ್ಟೇರಿಯಾಗಳನ್ನು ಕೊಲ್ಲುವ ಅಂಶವಿರುತ್ತದೆ. ಇದು ವಿಶೇಷವಾಗಿ ಫ್ರೀ ರಾಡಿಕಲ್ ಎಂಬ ಜೈವಿಕ ರಾಸಾಯನಿಕಗಳನ್ನು ಕೊಲ್ಲುವ ಮೂಲಕ ಕ್ಯಾನ್ಸರ್ ರೋಗವನ್ನು ತಡೆಗಟ್ಟುತ್ತದೆ.
.ಬಾಳೆಎಲೆಯ ಮೇಲ್ಪದರದಲ್ಲಿ ನೈಸರ್ಗಿಕವಾದ ಎಪಿಗಾಲ್ಲೋ ಕ್ಯಾಟೆಚಿನ್ ಗ್ಯಾಲೆಟ್ ಎಂಬ ಪಾಲಿಫಿನಾಲ್ ಅಂಶ ಆವರಿಸಿಕೊಂಡಿರುತ್ತದೆ. ಬಿಸಿಯಾದ ಆಹಾರವನ್ನು ಇದರ ಮೇಲೆ ಹಾಕಿದಾಗ ಇದು ಆಹಾರದೊಂದಿಗೆ ಬೆರೆತು ನಮ್ಮ ಹೊಟ್ಟೆ ಸೇರುತ್ತದೆ. ಇದರಿಂದ ಜೀರ್ಣಕ್ರಿಯೆ ಸುಲಭವಾಗುತ್ತದೆ.
.ಬಾಳೆಎಲೆಯ ಊಟದಿಂದ ದೇಹ ತಂಪುಗೊಳ್ಳುತ್ತದೆ. ಊಟದ ಪದಾರ್ಥದ ಮೂಲಕ ನಮ್ಮ ದೇಹಕ್ಕೆ ಉಂಟಾಗ ಬಹುದಾದ ಕೃತಕ ಉಷ್ಣತೆಯನ್ನು ಬಾಳೆಎಲೆ ತಂಪು ಮಾಡುತ್ತದೆ.
.ವಯಸ್ಸಾದಂತೆಲ್ಲ ಕೂದಲುಗಳು ಬೆಳ್ಳಗಾಗುವುದು ಸಹಜ. ಆದರೆ ಸಣ್ಣ ವಯಸ್ಸಿನಲ್ಲೇ ಬಿಳಿ ಕೂದಲು ಸಮಸ್ಯೆ ಕಾಣಿಸಿಕೊಳ್ಳುವುದು ಪೋಷಕಾಂಶಗಳ ಕೊರತೆಯ ಸಂಕೇತ. ಬಾಳೆಎಲೆಯಲ್ಲಿ ಇಂತಹ ಪೋಷಕಾಂಶಗಳು ದಟ್ಟವಾಗಿದ್ದು, ಚಿಕ್ಕ ವಯಸ್ಸಿನಲ್ಲೇ ಬಿಳಿ ಕೂದಲ ಸಮಸ್ಯೆಯನ್ನು ನಿವಾರಿಸುತ್ತದೆ.
.ಬಾಳೆಎಲೆಗೆ ತೆಂಗಿನ ಎಣ್ಣೆಯನ್ನು ಲೇಪಿಸಿ ಸುಕ್ಕುಗಟ್ಟಿದ ಚರ್ಮಕ್ಕೆ ಸುತ್ತಿದರೆ ಚರ್ಮ ಹೊಳಪುಗೊಳ್ಳುತ್ತದೆ.
.ಮಣ್ಣಿನ ಅಥವಾ ಲೋಹದ ಪಾತ್ರೆಯಲ್ಲಿ ಊಟ ಮಾಡುವುದರಿಂದ ಕೆಲವು ಸೂಕ್ಷ್ಮ ಮಾರ್ಜಕದ ಕಣಗಳು ದೇಹ ಸೇರುವ ಅಪಾಯವಿರುತ್ತದೆ. ಆದರೆ ಬಾಳೆಎಲೆಯ ಊಟ ಈ ಸಮಸ್ಯೆಯನ್ನು ತಡೆಗಟ್ಟುತ್ತದೆ.
.ಬಾಳೆಎಲೆಯಲ್ಲಿ ವಿಟಮಿನ್ “ಡಿ’ ಅಂಶ ವಿಫುಲವಾಗಿರುತ್ತದೆ. ಇದರಿಂದ ಚರ್ಮಕ್ಕೆ ಸಂಬಂಧಿಸಿದ ಕಾಯಿಲೆಗಳು ದೂರವಾಗುತ್ತವೆ. ಆದ್ದರಿಂದಲೇ ಹಸುಗೂಸನ್ನು ಶುಠಿ ಎಲೆಲೇಪಿತ ಬಾಳೆಎಲೆಯಿಂದ ಸುತ್ತಿ ಸೂರ್ಯನ ಕಿರಣಗಳಿಗೆ ಒಡ್ಡುತ್ತಾರೆ. ಇದರಿಂದ ಹಸುಗೂಸಿನ ದೇಹದಲ್ಲಿ “ಡಿ’ ವಿಟಮಿನ್ ಅಂಶ ಹೆಚ್ಚಾಗುತ್ತದೆ.
ಸೋಮಲಿಂಗಪ್ಪ ಬೆಣ್ಣಿ , ಗುಳದಳ್ಳಿ