Advertisement

ಚೆಂಡಿಗೆ ಉಗುಳು ನಿಷೇಧ ಕೇವಲ ತಾತ್ಕಾಲಿಕ ಕ್ರಮ: ಅನಿಲ್‌ ಕುಂಬ್ಳೆ

10:08 PM May 24, 2020 | Sriram |

ಹೊಸದಿಲ್ಲಿ: ಕ್ರಿಕೆಟ್‌ ಪಂದ್ಯಗಳ ವೇಳೆ ಚೆಂಡಿಗೆ ಹೊಳಪು ಮೂಡಿಸಲು ಉಗುಳು ಹಚ್ಚುವುದನ್ನು ನಿಷೇಧಿಸುವುದು ಕೇವಲ ತಾತ್ಕಾಲಿಕ ಕ್ರಮವಾಗಿದ್ದು, ಕೋವಿಡ್‌-19 ಸಂಪೂರ್ಣ ನಿಯಂತ್ರಣಕ್ಕೆ ಬಂದ ಬಳಿಕ ಪರಿಸ್ಥಿತಿ ಸಹಜಗೊಳ್ಳಲಿದೆ ಎಂದು ಐಸಿಸಿ ಕ್ರಿಕೆಟ್‌ ಕಮಿಟಿಯ ಅಧ್ಯಕ್ಷ ಅನಿಲ್‌ ಕುಂಬ್ಳೆ ಹೇಳಿದ್ದಾರೆ.

Advertisement

ಎಂಜಲಿನಿಂದಲೂ ಕೋವಿಡ್‌-19 ಹಬ್ಬುವ ಸಾಧ್ಯತೆ ಇರುವುದರಿಂದ ಚೆಂಡಿಗೆ ಉಗುಳು ಹಚ್ಚುವುದನ್ನು ನಿಷೇಧಿಸಬೇಕೆಂದು ಕಳೆದ ಐಸಿಸಿ ಕಮಿಟಿ ಸಭೆಯಲ್ಲಿ ನಿರ್ಧಾರಕ್ಕೆ ಬರಲಾಗಿತ್ತು. ಇದಕ್ಕೆ ಮಿಶ್ರ ಪ್ರತಿಕ್ರಿಯೆಗಳು ಬಂದಿದ್ದವು.

“ಇದು ಕೇವಲ ತಾತ್ಕಾಲಿಕ ಕ್ರಮ. ಇನ್ನು ಕೆಲವು ತಿಂಗಳಲ್ಲೋ, ವರ್ಷದ ಬಳಿಕವೋ ಕೋವಿಡ್‌-19 ನಿರ್ಮೂಲನೆಗೊಂಡ ಬಳಿಕ ಮತ್ತೆ ಈ ವಿಧಾನ ಮುಂದುವರಿಯಬಹುದು’ ಎಂದು “ಕ್ರಿಕೆಟ್‌ ಕನೆಕ್ಟೆಡ್‌’ ಕಾರ್ಯಕ್ರಮದಲ್ಲಿ ಅನಿಲ್‌ ಕುಂಬ್ಳೆ ಹೇಳಿದರು.

ಉಗುಳಿಗೆ ಪರ್ಯಾಯ ಏನು?
ಉಗುಳಿಗೆ ಪರ್ಯಾಯವಾಗಿ ವ್ಯಾಕ್ಸ್‌ ಅಥವಾ ಇತರ ಪದಾರ್ಥಗಳನ್ನು ಬಳಸಲು ಐಸಿಸಿ ಸೂಚಿಸಬಹುದೇ ಎಂಬ ಪ್ರಶ್ನೆಯೂ ಈ ಸಂದರ್ಭದಲ್ಲಿ ತೂರಿ ಬಂತು. ಇದಕ್ಕೆ ಪ್ರತಿಕ್ರಿಯಿಸಿದ ಅನಿಲ್‌ ಕುಂಬ್ಳೆ, “ಈ ಬಗ್ಗೆ ಚರ್ಚೆ ನಡೆಯಬಹುದು. ಆದರೆ ಕ್ರಿಕೆಟ್‌ ಇತಿಹಾಸವನ್ನು ಗಮನಿಸಿದರೆ ಚೆಂಡಿಗೆ ಯಾವುದೇ ಹೊರಗಿನ ಪದಾರ್ಥವನ್ನು ಹಚ್ಚಲು ನಿಷೇಧವಿದೆ. ಆಗ ಇದರಿಂದ ಬಾಲ್‌ ಟ್ಯಾಂಪರಿಂಗ್‌ನಂಥ ವಿವಾದಗಳು ಹುಟ್ಟಿಕೊಳ್ಳಬಹುದು…’ ಎಂಬುದಾಗಿ ಹೇಳಿದರು.

Advertisement

Udayavani is now on Telegram. Click here to join our channel and stay updated with the latest news.

Next