Advertisement

ಮರಾಠಾ ಸಮುದಾಯಕ್ಕೂ ಸಚಿವ ಸ್ಥಾನ ಕೊಡಿ

06:32 PM Aug 13, 2021 | Team Udayavani |

ಬಳ್ಳಾರಿ: ನೂತನ ಸಿಎಂ ಬಸವರಾಜ ಬೊಮ್ಮಾಯಿ ಅವರ ಸಚಿವ ಸಂಪುಟದಲ್ಲಿ ಮರಾಠ ಸಮುದಾಯದ ಶ್ರೀಮಂತ ಪಾಟೀಲ್‌ ಅವರಿಗೆ ಸಚಿವ ಸ್ಥಾನ ನೀಡಬೇಕು ಎಂದು ಕರ್ನಾಟಕ ಛತ್ರಪತಿ ಶಿವಾಜಿ ಮಹಾರಾಜ್‌ ಸೇನೆಯ ರಾಜ್ಯ ಯುವ ಘಟಕದ ಅಧ್ಯಕ್ಷ ಎಂ.ವಿನೋದ್‌ ಚವ್ಹಾಣ್‌ ಒತ್ತಾಯಿಸಿದರು.

Advertisement

ನಗರದಲ್ಲಿ ಗುರುವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಮರಾಠಿಗರು ಕಟ್ಟರ್‌ ಹಿಂದುತ್ವವಾದಿಗಳು. ನಮ್ಮ ಸಮುದಾಯ ಸಂಪೂರ್ಣವಾಗಿ ಬಿಜೆಪಿಯನ್ನೇ ಬೆಂಬಲಿಸುತ್ತಾ ಬಂದಿದೆ. ಅಂತಹ ಮರಾಠ ಸಮುದಾಯಕ್ಕೆ ಬಿಜೆಪಿಯಿಂದಲೇ ಅನ್ಯಾಯವಾಗಿದ್ದು, ಸಿಎಂ ಬಸವರಾಜ ಬೊಮ್ಮಾಯಿ ಸಂಪುಟದಲ್ಲಿ ಸ್ಥಾನಮಾನ ದೊರೆಯದಿರುವುದು ದುರದೃಷ್ಟಕರ ಸಂಗತಿ ಎಂದು ಅಸಮಾಧಾನ ವ್ಯಕ್ತಪಡಿಸಿದರು. ರಾಜ್ಯದಲ್ಲಿ ಬಿಜೆಪಿ ಸರ್ಕಾರ ಅಸ್ವಿತ್ವಕ್ಕೆ ಬರಲು ಪ್ರಮುಖ ಪಾತ್ರ ವಹಿಸಿದವರಲ್ಲಿ ಕಾಗವಾಡ ವಿಧಾನಸಭಾ ಕ್ಷೇತ್ರದ ಶಾಸಕ, ಮಾಜಿ ಸಚಿವ ಶ್ರೀಮಂತ ಬಾಳಸಾಹೇಬ್‌ ಪಾಟೀಲ್‌ ಅವರೂ ಸಹ ಒಬ್ಬರಾಗಿದ್ದಾರೆ.

ರಾಜ್ಯದಲ್ಲಿ ಮರಾಠ ಸಮುದಾಯ 40 ಲಕ್ಷಕ್ಕೂ ಹೆಚ್ಚು ಜನಸಂಖ್ಯೆಯನ್ನು ಹೊಂದಿದೆ. ಅದರಲ್ಲೂ ಉತ್ತರ ಕರ್ನಾಟಕದಲ್ಲಿ ಹೆಚ್ಚಿನ ಸಂಖ್ಯೆಯಲ್ಲಿದ್ದಾರೆ. ಸದಾ ಬಿಜೆಪಿ ಪಕ್ಷದ ಬೆಂಬಲಕ್ಕೆ ನಿಲ್ಲುವ ಮರಾಠ ಸಮುದಾಯದ ಶ್ರೀಮಂತ್‌ ಪಾಟೀಲ್‌ ಅವರಿಗೆ ಕೂಡಲೇ ಸಚಿವ ಸ್ಥಾನವನ್ನು ನೀಡಬೇಕು. ಇಲ್ಲದಿದ್ದಲ್ಲಿ ಹೋರಾಟ ರೂಪಿಸುವುದರ ಜತೆಗೆ ಮುಂದಿನ ಚುನಾವಣೆಗಳಲ್ಲಿ ನಮ್ಮ ನಿಲುವನ್ನು ಸ್ಪಷ್ಟಪಡಿಸುತ್ತೇವೆ ಎಂದು ಎಚ್ಚರಿಸಿದರು.

ಛತ್ರಪತಿ ಶಾಹು ಮಹಾರಾಜ್‌ ಅವರು 1902ರಲ್ಲೇ ತಮ್ಮ ರಾಜ್ಯದಲ್ಲಿ ಮೀಸಲಾತಿಯನ್ನು ನೀಡಿದ್ದರು. ಅಂತಹ ಸಮುದಾಯ ಇಂದು ಮೀಸಲಾತಿ ಕೇಳುವ ಪರಿಸ್ಥಿತಿ ಬಂದಿದೆ. ಕಳೆದ ವಿಧಾನಸಭೆ ಚುನಾವಣೆಯಲ್ಲಿ ಮಾಜಿ ಸಿಎಂ ಯಡಿಯೂರಪ್ಪನವರು, ಕಠuರ್‌ ಹಿಂದುತ್ವವಾದಿಗಳು ಎಂದರೆ ಮರಾಠ ಜನಾಂಗವಾಗಿದೆ. ರಾಜ್ಯದಲ್ಲಿ ಬಿಜೆಪಿ ಅ ಧಿಕಾರಕ್ಕೆ ಬಂದರೆ 24 ಗಂಟೆಯೊಳಗೆ 3ಬಿ ಮೀಸಲಾತಿಯಲ್ಲಿನ ಮರಾಠ ಸಮುದಾಯವನ್ನು 2ಎಗೆ ಸೇರಿಸಲಾಗುವುದಾಗಿ ಭರವಸೆ ನೀಡಿದ್ದರು.

ಆದರೆ, ಯಡಿಯೂರಪ್ಪನವರು 24 ತಿಂಗಳು ಕಳೆದರೂ ಮರಾಠ ಸಮುದಾಯವನ್ನು 2ಎಗೆ ಸೇರಿಸಲಿಲ್ಲ. ಬಿಜೆಪಿಯವರು ಮರಾಠ ಸಮುದಾಯವನ್ನು ಚುನಾವಣೆಗೆ ಮಾತ್ರ ಬಳಸಿಕೊಳ್ಳುತ್ತಿದೆ. ಸಮುದಾಯವೂ ಮತನೀಡಿ ಗೆಲ್ಲಿಸಿದ್ದರೂ ಅನ್ಯಾಯವೆಸಗಿದೆ ಎಂದರು. 9ನೇ ಹಿಂದುಳಿದ ಆಯೋಗದ ಅಧ್ಯಕ್ಷರಾಗಿದ್ದ ಶಂಕ್ರಪ್ಪ ಅವರು ರಾಜ್ಯಾದ್ಯಂತ ಸಮೀಕ್ಷೆ ನಡೆಸಿ ಮರಾಠ ಸಮುದಾಯಕ್ಕೆ 2ಎ ಮೀಸಲಾತಿ ನೀಡಬೇಕು ಎಂದು 2012 ಡಿಸೆಂಬರ್‌ ತಿಂಗಳಲ್ಲಿ ಸರ್ಕಾರಕ್ಕೆ ವರದಿ ಸಲ್ಲಿಸಿ ಶಿಫಾರಸ್ಸು ಮಾಡಿದ್ದರೂ ಈವರೆಗೂ ಮೀಸಲಾತಿ ನೀಡಿಲ್ಲ.

Advertisement

ಇದೀಗ ಕೇಂದ್ರ ಸರ್ಕಾರದಲ್ಲಿ ಸಂವಿಧಾನ ತಿದ್ದುಪಡಿಗೆ ಚರ್ಚೆಗಳು ನಡೆಯುತ್ತಿವೆ ಎಂದರು. ಸುದ್ದಿಗೋಷ್ಠಿಯಲ್ಲಿ ಮರಾಠ ಮುಖಂಡರಾದ ಮುರಾರಿರಾವ್‌ ಜಾಧವ್‌, ಯಶ್ವಂತ್‌ರಾವ್‌ ಜಗತಾಪ್‌, ನಾಗರಾಜರಾವ್‌ ಚವ್ಹಾಣ್‌, ಶರದ್‌ ಶಿಂಧೆ, ವಸಂತರಾವ್‌, ಲಕ್ಷ ¾ಣರಾವ್‌ ಬಾಬರ್‌, ಅಮರೇಶ್‌ ಘೋರ್ಪಡೆ, ದಿನೇಶ್‌ ನಲವಡೆ, ರುದ್ರೋಜಿರಾವ್‌ ಶಿಂಧೆ ಮತ್ತಿತರ ಮರಾಠ ಸಮುದಾಯದ ಹಲವಾರು ಮುಖಂಡರು ಇದ್ದರು.

Advertisement

Udayavani is now on Telegram. Click here to join our channel and stay updated with the latest news.

Next