Advertisement
ಹೀಗೆ ಮಾಡಬಹುದು…ವಾರಾಹಿ ಕಾಲುವೆ ನೀರನ್ನು ಐರಬೈಲುವಿನಿಂದ ಪೈಪ್‌ಲೈನ್ ಮೂಲಕ ಬಾಳ್ಕಟ್ ನದಿಯ ಮೂಲವಾದ ಕಾಶಿಕಾಲು ಕೆರೆಗೆ ಹಾಯಿಸಬೇಕು. ಆಗ ನೈಸರ್ಗಿಕ ನಾಲೆಗಳಲ್ಲಿ ನೀರು ಹರಿಯುತ್ತದೆ. ಇದರಿಂದ ಸಿದ್ದಾಪುರ, ಅಂಪಾರು, ಆಜ್ರಿ ಮತ್ತು ಕೊಡ್ಲಾಡಿ ಹೀಗೆ ಹತ್ತಾರು ಗ್ರಾಮದ ಹಳ್ಳಿಗಳ ಕೃಷಿ ಭೂಮಿಗೆ ಹಾಗೂ ಕುಡಿಯುವ ನೀರಿನ ಮೂಲಕ್ಕೆ ಅನುಕೂಲವಾಗುತ್ತದೆ. ಇದಕ್ಕೆ ಕಡಿಮೆ ಮೊತ್ತದ ಹಣ ಬೇಕಿದ್ದು, ಯೋಜನೆಯಿಂದ ಎಲ್ಲೂ ಪರಿಸರ ನಾಶ ಅಥವಾ ಭೂಮಿ ಒತ್ತುವರಿ ಅಗತ್ಯ ಇರುವುದಿಲ್ಲ ಎನ್ನುವುದು ಬಾಳ್ಕಟ್ಟು ನದಿ ನೀರು ಬಳಕೆದಾರರ ಅಭಿಪ್ರಾಯವಾಗಿದೆ.
ವಾರಾಹಿ ನೀರನ್ನು ಬಾಳ್ಕಟ್ ನಾಲೆಯಲ್ಲಿ 20ಕಿ. ಮೀ. ದೂರ ಹರಿಯಲು ಅನುಕೂಲ ಕಲ್ಪಿಸಿದಲ್ಲಿ ಸುಮಾರು 410 ಹೆಕ್ಟೇರ್ ಕೃಷಿ ಭೂಮಿಗೆ ಅನುಕೂಲವಾಗುತ್ತದೆ. ಜತೆಗೆ ಕುಡಿಯುವ ನೀರಿನ ಮೂಲವೂ ವೃದ್ಧಿಸುತ್ತದೆ. ಯಾರಿಗೆಲ್ಲ ಉಪಯೋಗ?
ಕೊಳ್ಕೆಬೈಲು, ಜಡ್ಡಿನಬೈಲು, ಅಕ್ಕುಂಜೆ, ಕೊಡ್ಗಿ, ಗುಳಿಗದ್ದೆ, ಹೆಗ್ಗೇರಿ, ಮಣಿಗಾರಡಿ, ಚೋನಾಳಿ, ಹೆರಬೈಲು, ಅಂಪಾರು ಗ್ರಾಮದ ಶ್ಯಾನ್ಕಟ್ಟು, ಬಾಳ್ಕಟ್, ಆಜ್ರಿ ಗ್ರಾಮದ ಕನ್ನಾಲಿ, ಮಾರ್ಡಿ, ಗಂಗಾಡಿ, ಹೊಲದಮನೆ, ಮೂರು ಸಾಲು ಪ್ರದೇಶಕ್ಕೂ ಅನುಕೂಲವಾಗುತ್ತದೆ. ಈ ನಾಲೆಯು ಕನ್ನಾಲಿ ಮಾರ್ಗವಾಗಿ ಕೊಡ್ಲಾಡಿ ಗ್ರಾಮದಲ್ಲಿ ಕುಬಾj ನದಿಗೆ ಜೋಡಣೆಯಾಗುತ್ತದೆ. ಕುಬಾj ನದಿಯ ಮೂಲಕ ನೀರು ಮುಂದುವರಿದಲ್ಲಿ ಮುಂದಿನ ಭೂ ಪ್ರದೇಶಗಳಿಗೂ ನೀರಿನ ಸೌಲಭ್ಯ ಕಲ್ಪಿಸಿದಂತಾಗುತ್ತದೆ.
Related Articles
ಬಾಳ್ಕಟ್ ಅಚ್ಚುಕಟ್ಟು ಪ್ರದೇಶಗಳಿಗೆ ವಾರಾಹಿ ಕಾಲುವೆ ನೀರು ಏತ ನೀರಾವರಿ ಮೂಲಕ ಹರಿಸುವುದರಿಂದ ನೈಸರ್ಗಿಕ ತೋಡುಗಳ ಮೂಲಕ ಕೃಷಿ, ಕುಡಿಯುವ ನೀರಿಗೆ ಅನುಕೂಲ. ಈ ಯೋಜನೆಯಿಂದ ಸಿದ್ದಾಪುರ ಅಲ್ಲದೇ ಪಕ್ಕದ ಗ್ರಾಮಗಳಿಗೂ ಉಪಯೋಗವಾಗುತ್ತದೆ.
– ಎಸ್. ರಾಜೀವ ಶೆಟ್ಟಿ ಶಾನ್ಕಟ್ಟು,
ಕಾರ್ಯದರ್ಶಿ, ಬಾಳ್ಕಟ್ಟು ನದಿ ನೀರು ಬಳಕೆದಾರರ ವೇದಿಕೆ
Advertisement
– ಸತೀಶ ಆಚಾರ್ ಉಳ್ಳೂರು