ಕಟೀಲು ಸಮೀಪದ ಬಲ್ಲಾಣದಲ್ಲಿ 132/1 ಸರ್ವೆ ನಂಬರ್ ನಲ್ಲಿ ಸುಮಾರು 19.80 ಎಕರೆ ಜಮೀನಿನಲ್ಲಿ 7 ಎಕರೆ ಜಮೀನು ತ್ಯಾಜ್ಯ ಘಟಕಕ್ಕೆ ಮೀಸಲಿರಿಸಿದ್ದು ಸರ್ವೇ ಕಾರ್ಯ ನಡೆಯುತ್ತಿದೆ.
Advertisement
ಕಿನ್ನಿಗೋಳಿ ಮತ್ತು ಬಜಪೆ ಕಳೆದ ಎರಡು ವರ್ಷದ ಹಿಂದೆ ಪಟ್ಟಣ ಪಂಚಾಯತ್ ಆಗಿ ಮೇಲ್ದರ್ಜೆಗೆ ಏರಿದ್ದು, ದಿನದಿಂದ ದಿನಕ್ಕೆ ಜನಸಂಖ್ಯೆಯೂ ಹೆಚ್ಚುತ್ತಿದೆ, ಎರಡೂ ಪಟ್ಟಣ ಪಂಚಾಯತ್ ಗೆ ತ್ಯಾಜ್ಯ ಘಟಕ ಅನಿವಾರ್ಯವಾಗಿದ್ದು, ಕಿನ್ನಿಗೋಳಿಯಲ್ಲಿ ಪ್ರಸ್ತುತ ಒಂದು ಎಕರೆ ಪ್ರದೇಶದಲ್ಲಿ ಒಂದು ತ್ಯಾಜ್ಯ ಘಟಕ ಇದ್ದು, ಭವಿಷ್ಯದ ಯೋಚನೆ ಯೋಜನೆಯಿಂದ, ಪಟ್ಟಣ ಪಂಚಾಯತ್ ನಿಂದ ಈ ಹಿಂದಿನ ಮುಖ್ಯಾಧಿಕಾರಿಯಾಗಿದ್ದ ಸಾಯೀಶ್ ಚೌಟ ಅವರು ಪಟ್ಟಣ ಪಂಚಾಯತ್ ವ್ಯಾಪ್ತಿಯ ನರ್ತಿಕಲ್ ನಲ್ಲಿ ಸುಮಾರು 2 ಎಕರೆ ಜಮೀನು ಗುರುತಿಸಿ ಅದನ್ನು ಘನ ತ್ಯಾಜ್ಯಕ್ಕೆ ಮೀಸಲಿರಿಸಿ ಕಾಮಗಾರಿಗೆ ಗುದ್ದಲಿ ಪೂಜೆಯೂ ನಡೆದಿತ್ತು. ಕಿನ್ನಿಗೋಳಿ ಪಟ್ಟಣ ಪಂಚಾಯತ್ ನಲ್ಲಿ ಪ್ರಸ್ತುತ ಎರಡು ಕಡೆಗಳಲ್ಲಿ ತ್ಯಾಜ್ಯ ನಿರ್ವಹಣೆಗೆ ಅವಕಾಶವಿದ್ದು ಮುಂದಿನ ಸುಮಾರು 50 ವರ್ಷಕ್ಕಾಗುವಷ್ಟು ತ್ಯಾಜ್ಯ ನಿರ್ವಹಣೆಗೆ ಈ ಜಮೀನು ಸಾಕಾಗಬಹುದಾಗಿದೆ.
ಬಜಪೆ ಪಟ್ಟಣ ಪಂಚಾಯತ್ ಘನ ತ್ಯಾಜ್ಯ ಘಟಕ್ಕಾಗಿ ಈ ಹಿಂದೆ ಎರಡು ಮೂರು ಕಡೆಗಳಲ್ಲಿ ಜಮೀನು ಗುರುತಿಸಲಾಗಿದ್ದು ಎಲ್ಲ ಕಡೆಗಳಲ್ಲಿ ಸ್ಥಳೀಯರ ವಿರೋಧ ವ್ಯಕ್ತವಾಗಿದೆ. ಈ ಕಾರಣದಿಂದ ಇದೀಗ ಕಿನ್ನಿಗೋಳಿ ಪಟ್ಟಣ ಪಂಚಾಯತ್ ವ್ಯಾಪ್ತಿಯ ಕಟೀಲು ಸಮೀಪದಲ್ಲಿ ಎರಡೂ ಪಟ್ಟಣ ಪಂಚಾಯತ್ ಜಂಟಿಯಾಗಿ ತ್ಯಾಜ್ಯ ಘಟಕ ನಿರ್ಮಾಣಕ್ಕೆ ಚಾಲನೆ ಸಿಕ್ಕಿದ್ದು ಸ್ಥಳೀಯರು ಸಾಕಷ್ಟು ವಿರೋಧ ವ್ಯಕ್ತಪಡಿಸಿದ್ದು ಪ್ರತಿಭಟನೆಗೆ ಮುಂದಾಗಿದ್ದಾರೆ. ಕಟೀಲು ದೇವಸ್ಥಾನದಲ್ಲಿ ಇದೀಗ ದ್ರವ ತ್ಯಾಜ್ಯ ಘಟಕ ಉತ್ತಮ ರೀತಿಯಲ್ಲಿ ಕಾರ್ಯನಿರ್ವಹಿಸುತ್ತಿದೆ.
Related Articles
Advertisement