Advertisement
ರಾಜ್ಯ ಹೆದ್ದಾರಿ 67ರ ಬ್ಯಾಂಕ್ ಆಫ್ ಬರೋಡದ ಎದುರಿನಿಂದ ಚರ್ಚ್‌ನ ಸರ್ಕಲ್ ತನಕ ಸಮರ್ಪಕ ಚರಂಡಿ ವ್ಯವಸ್ಥೆ ಇಲ್ಲ. ಚರಂಡಿ ಇದ್ದರೂ ಅದಕ್ಕೆ ಹಾಸಲಾದ ಹಾಸುಗಲ್ಲುಗಳು ತುಂಡಾಗಿ ಬಿದ್ದಿವೆ. ಕೆಲವೆಡೆ ಹೂಳು ತುಂಬಿದ ಕಾರಣ ನೀರು ಹರಿಯಲು ತಡೆಯಾಗಿದೆ. ಇನ್ನೂ ಕೆಲವೆಡೆ ಚರಂಡಿಯೇ ಇಲ್ಲ.
ನಿಂತು ಹೊಂಡ, ಮಣ್ಣುದಿಬ್ಬ
ಚರ್ಚ್ ಸರ್ಕಲ್‌ನ ಸಮೀಪದ ಚರಂಡಿಯೂ ಸಮರ್ಪಕವಾಗಿಲ್ಲ. ರಸ್ತೆಯ ಕೆಳ ಭಾಗದಲ್ಲಿ ಸಾಗುವ ಚರಂಡಿಯಲ್ಲಿ ಹೂಳು ತುಂಬಿದೆ. ಇದರಿಂದ ಮಳೆಯ ನೀರು ರಸ್ತೆ ಮೇಲಿನಿಂದಲೇ ಹರಿಯುತ್ತಿದೆ. ರಸ್ತೆಯಲ್ಲಿ ಮಳೆಯ ನೀರು ಹಾಗೂ ಹೂಳು ತುಂಬಿದ ಕಾರಣ ಹೂಳಿನ ದಿಬ್ಬ ಹಾಗೂ ಹೊಂಡ ನಿರ್ಮಾಣವಾಗಿದೆ. ಇಲ್ಲಿ ಪ್ರತಿ ವರ್ಷ ಮಳೆಗಾಲದಲ್ಲಿ ರಸ್ತೆ ಹೊಂಡ ಗುಂಡಿಯಿಂದಾಗಿ ವಾಹನ ಸಂಚಾರಕ್ಕೆ, ಪಾದಚಾರಿಗಳಿಗೆ ಸಮಸ್ಯೆ ಉಂಟಾಗುತ್ತಿದೆ. ಚರಂಡಿ ವ್ಯವಸ್ಥೆ ಸಮರ್ಪಕವಿಲ್ಲದೇ ಅಲ್ಲಿನ ಅಂಗಡಿಗಳಿಗೆ ವ್ಯಾಪಾರ ಹಾಗೂ ವಾಹನ ಪಾರ್ಕಿಂಗ್‌ಗೂ ತೊಂದರೆಯಾಗುತ್ತಿದೆ. ಬೆಳಗ್ಗೆ ಆರಂಭ ಹಾಗೂ ಸಂಜೆ ಶಾಲೆ ಬಿಡುವ ಸಮಯದಲ್ಲಿ ಮಕ್ಕಳಿಗೆ ತೊಂದರೆಯಾಗುತ್ತಿದೆ.