Advertisement

ಬಜೆಯಲ್ಲಿ ನೀರಿನ ಮಟ್ಟ ಕುಸಿತ: ಉಡುಪಿಗೆ 2 ದಿನಕ್ಕೊಮ್ಮೆ ನೀರು

03:50 AM Mar 22, 2017 | Team Udayavani |

ಉಡುಪಿ: ನಗರಸಭಾ ವ್ಯಾಪ್ತಿಗೆ ಕುಡಿಯುವ ನೀರು ಸರಬರಾಜು ಮಾಡುವ ಬಜೆ ಅಣೆಕಟ್ಟಿನಲ್ಲಿ ನೀರಿನ ಸಂಗ್ರಹದ ಮಟ್ಟ ದಿನೇ ದಿನೇ ಕುಸಿಯುತ್ತಿದ್ದು, ಮಾ. 23ರಿಂದ ನಗರಸಭೆಯ ಒಟ್ಟು 35 ವಾರ್ಡ್‌ಗಳನ್ನು 2 ವಿಭಾಗಳಾಗಿ ವಿಂಗಡಿಸಿ ಪ್ರತೀ ವಾರ್ಡ್‌ಗೆ ಎರಡು ದಿನಕ್ಕೊಮ್ಮೆ ನೀರು ಪೂರೈಕೆ ಮಾಡುವ ನಿರ್ಧಾರಕ್ಕೆ ನಗರಸಭೆ ಬಂದಿದೆ. 

Advertisement

ಮಾ. 23ರಿಂದ ಈ ಪ್ರಕ್ರಿಯೆ ಅಧಿಕೃತವಾಗಿ ಆರಂಭವಾಗಲಿದ್ದು, ಮೊದಲ ಕಂತಿನಲ್ಲಿ 21 ವಾರ್ಡ್‌ಗಳಾದ ಕುಂಜಿಬೆಟ್ಟು, ತೆಂಕಪೇಟೆ, ಒಳಕಾಡು, ಬೈಲೂರು, ಕಿನ್ನಿಮೂಲ್ಕಿ, ಅಜ್ಜರಕಾಡು, ಅಂಬಲಪಾಡಿ, ಬನ್ನಂಜೆ, ಶಿರಿಬೀಡು, ಕೊಳ, ವಡಭಾಂಡೇಶ್ವರ, ಕಲ್ಮಾಡಿ, ಇಂದಿರಾನಗರ, ಚಿಟಾ³ಡಿ, ಬಡಗುಬೆಟ್ಟು, ಕೊಡವೂರು, ಕಸ್ತೂರ್ಬಾನಗರ, ಮಲ್ಪೆ ಸೆಂಟ್ರಲ್‌, ಇಂದ್ರಾಳಿ, ಸಗ್ರಿ ಹಾಗೂ ಮೂಡುಪೆರಂಪಳ್ಳಿಗೆ ನೀರು ಪೂರೈಕೆ ಮಾಡಲಾಗುವುದು. 

2ನೇ ಕಂತಿನಲ್ಲಿ ಮಾ. 24ರಂದು 14 ವಾರ್ಡ್‌ಗಳಾದ ಸರಳೇಬೆಟ್ಟು, ಈಶ್ವರನಗರ, ಮಣಿಪಾಲ, ಕಕ್ಕುಂಜೆ, ಕರಂಬಳ್ಳಿ, ಮೂಡುಧಿಬೈಲು, ಕೊಡಂಕೂರು, ನಿಟ್ಟೂರು, ಸುಬ್ರಹ್ಮಣ್ಯಧಿನಗರ, ಗೋಪಾಲಪುರ, ಕಡಿಧಿಯಾಳಿ, ಗುಂಡಿಬೈಲು, ಸೆಟ್ಟಿಬೆಟ್ಟು ಹಾಗೂ ಪರ್ಕಳಕ್ಕೆ ನೀರು ಪೂರೈಕೆ ಮಾಡಲಾಗುವುದು. ಇದೇ ಮಾದರಿಯಲ್ಲಿ ಎರಡು ದಿನಕ್ಕೊಮ್ಮೆ ನೀರು ಸರಬರಾಜು ಪ್ರಕ್ರಿಯೆ ನಡೆಯಲಿದೆ. 

ನಗರಸಭಾ ವ್ಯಾಪ್ತಿಯ ನಳ್ಳಿ ನೀರು ಪೂರೈಕೆಧಿಯಲ್ಲಿ ವ್ಯತ್ಯಯ ಉಂಟಾದರೆ ಟ್ಯಾಂಕರ್‌ ಮೂಲಕ ಪ್ರತಿ ಮನೆಗೆ ತಲಾ 500 ಲೀ. ನೀರು ಸರಬರಾಜು ಮಾಡಲಿದ್ದಾರೆ. 

ಸಹಾಯವಾಣಿ ಸಂಖ್ಯೆ
ದೂರುಗಳಿದ್ದಲ್ಲಿ 8496989248, 8496989166, 8496989184, 8496989122 ಮೊಬೈಲ್‌ ನಂಬರ್‌ಗೆ
ಕರೆ ಮಾಡಿ ತಿಳಿಸಬಹುದು. ಅದಲ್ಲದೆ ನಗರಸಭೆಯ ಕಾರ್ಯಪಾಲಕ ಅಭಿಯಂತ ಕೆ. ಗಣೇಶ್‌ (8496989759) ಹಾಗೂ ಪರಿಸರ ಅಭಿಯಂತ ರಾಘವೇಂದ್ರ ಬಿ. ಎಸ್‌.(9448507244) ಅವರಿಗೆ ತಿಳಿಸಬಹುದು.

Advertisement
Advertisement

Udayavani is now on Telegram. Click here to join our channel and stay updated with the latest news.

Next