ಮಲ್ಪೆ: ಬಜೆ ಮೊಗವೀರ ಸುವರ್ಣ ನಾಗಬ್ರಹ್ಮ ಮೂಲಸ್ಥಾನದ ವಾರ್ಷಿಕ ಮಹಾಸಭೆಯು ಕಿದಿಯೂರು ಹೊಟೇಲಿನ ಸಭಾಂಗಣದಲ್ಲಿ ಜು. 30ರಂದು ಜರಗಿತು.
ಅಧ್ಯಕ್ಷತೆಯನ್ನು ಮೂಲಸ್ಥಾನ ಸಮಿತಿಯ ಅಧ್ಯಕ್ಷ ವೆಂಕಟರಮಣ ಕಿದಿಯೂರು ವಹಿಸಿದ್ದರು.ಈ ಸಂದರ್ಭದಲ್ಲಿ ಮಾತನಾಡಿದ ಅವರು ಮೂಲಸ್ಥಾನದಲ್ಲಿ ಪ್ರತಿಯೊಬ್ಬ ಸದಸ್ಯರು ಅತಿಥಿ ನೆಲೆಯಲ್ಲಿ ಬರದೆ ಸ್ವಯಂ ಸೇವೆಕರಾಗಿ ಬಂದು ಕೆಲಸ ಮಾಡುವ ಮೂಲಕ ಶ್ರೀ ದೇವರ ಅನುಗ್ರಹಕ್ಕೆ ಪಾತ್ರರಾಗಬೇಕು ಎಂದರು. ಮೂಲಸ್ಥಾನಕ್ಕೆ ಸಂಪರ್ಕ ರಸ್ತೆಯ ಅಭಿವೃದ್ಧಿ ಮತ್ತು ಸ್ವಾಗತ ಗೋಪುರ ರಚಿಸುವ ಯೋಜನೆ ಇದ್ದು ಎಲ್ಲರ ಸಹಕಾರ ಅಗತ್ಯವಿದೆ ಎಂದು ತಿಳಿಸಿದರು.
ದ.ಕ. ಮತ್ತು ಉಡುಪಿ ಜಿಲ್ಲಾ ಮೀನು ಮಾರಾಟ ಫೆಡರೇಶನ್‌ನ ಅಧ್ಯಕ್ಷ ಯಶ್‌ಪಾಲ್ ಎ. ಸುವರ್ಣ ವಿದ್ಯಾರ್ಥಿಗಳಿಗೆ ಹಿತವಚನ ನೀಡಿದರು.
ಎಸ್‌ಎಸ್‌ಎಲ್‌ಸಿ ಮತ್ತು ಪಿಯುಸಿಯಲ್ಲಿ ಅತ್ಯಧಿಕ ಅಂಕ ಗಳಿಸಿ ಉತ್ತೀರ್ಣರಾದ ಕುಟುಂಬಸ್ಥರ 52 ಪ್ರತಿಭಾವಂತ ಮಕ್ಕಳಿಗೆ ಪ್ರತಿಭಾ ಪುರಸ್ಕಾರವನ್ನು ನೀಡಲಾಯಿತು. ಕುಟುಂಬದ ಹಿರಿಯ ಸದಸ್ಯರಾದ ಮೋಹನ ಕೆ. ಸುವರ್ಣ, ತುಕ್ರ ಸುವರ್ಣ, ಸೂರಪ್ಪ ಸುವರ್ಣ, ಚಲ್ಲಯ್ಯ ಕೆ. ಸುವರ್ಣ, ಯು. ರತ್ನಾಕರ ಸುವರ್ಣ ಮಲ್ಪೆ ಅವರನ್ನು ಸಮ್ಮಾನಿಸಿ ಗೌರವಿಸಲಾಯಿತು.
ವೇದಿಕೆಯಲ್ಲಿ ಮೂಲಸ್ಥಾನದ ಉಪಾಧ್ಯಕ್ಷರಾದ ಗೋವಿಂದದಾಸ್ ಕೆ. ಸುವರ್ಣ, ಧುರೀಣ್ ಕೆ. ಸುವರ್ಣ, ವಿಜಯ ಡಿ. ಸುವರ್ಣ, ಸಲಹೆಗಾರರಾದ ಎಸ್.ಎಂ. ಸುವರ್ಣ, ಎಚ್.ಟಿ. ಕಿದಿಯೂರು, ಮಹಿಳಾ ಸಮಿತಿಯ ಅಧ್ಯಕ್ಷೆ ರಾಧಾ ಸುವರ್ಣ ಉಪಸ್ಥಿತರಿದ್ದರು.
ಪ್ರಧಾನ ಕಾರ್ಯದರ್ಶಿ ಮುರಳೀಧರ ಸುವರ್ಣ ವರದಿ ವಾಚಿಸಿದರು. ಕೋಶಾಧಿಕಾರಿ ರಾಮ ಸುವರ್ಣ ಲೆಕ್ಕಪತ್ರ ಮಂಡಿಸಿದರು. ಅಧ್ಯಕ್ಷ ವೆಂಕಟರಮಣ ಕಿದಿಯೂರು ಸ್ವಾಗತಿಸಿ ದರು. ಜತೆಕಾರ್ಯದರ್ಶಿ ಸುರೇಶ್ ಸುವರ್ಣ ವಂದಿಸಿದರು.