Advertisement

Desi Swara: ಬಹ್ರೈನ್‌-ವಿದ್ಯಾರ್ಥಿಗಳಿಂದ ಯಶಸ್ವಿ ಯಕ್ಷಗಾನ ಅಸಿಕಾ ಪರಿಣಯ-ಜಾಂಬವತಿ ಕಲ್ಯಾಣ

12:34 PM Jun 08, 2024 | Team Udayavani |

ಬಹ್ರೈನ್‌: ಇಲ್ಲಿನ ಕನ್ನಡ ಭವನ ಸಭಾಂಗಣದಲ್ಲಿ ಕನ್ನಡ ಸಂಘ ಬಹ್ರೈನ್‌ ವತಿಯಿಂದ ಮೇ 31ರಂದು ಯಕ್ಷೋಪಾಸನ ಯಕ್ಷಗಾನ ಅಧ್ಯಯನ ಕೇಂದ್ರದ ವಿದ್ಯಾರ್ಥಿಗಳಿಂದ ಅಸಿಕಾ ಪರಿಣಯ – ಜಾಂಬವತಿ ಕಲ್ಯಾಣ ಎಂಬ ಯಕ್ಷಗಾನ ಪ್ರದರ್ಶನವು ನೆರೆದಿದ್ದ ನೂರಾರು ಕಲಾರಸಿಕರ ಮನರಂಜಿಸಿತು.ಈ ಪ್ರಸಂಗವನ್ನು ಯಕ್ಷೋಪಾಸನ ಅಧ್ಯಯನ ಕೇಂದ್ರದ ನಾಟ್ಯಗುರು ದೀಪಕ್‌ ರಾವ್‌ ಪೇಜಾವರ ಅವರು ನಿರ್ದೇಶಿಸಿದ್ದರು. ಅತಿಥಿ ಭಾಗವತರಾಗಿ ರೋಶನ್‌ ಎಸ್‌.ಕೋಟ್ಯಾನ್‌, ಅತಿಥಿ ಹಿಮ್ಮೇಳ ವಾದಕರಾಗಿ ಹರೀಶ್‌ ಸಾಲ್ಯಾನ್‌ ಮುಂಬಯಿ ಭಾಗವಹಿಸಿದ್ದರು.

Advertisement

ಇದೇ ವೇದಿಕೆಯಲ್ಲಿ ತಾಯ್ನಾಡ ಹಿರಿಯ ಯಕ್ಷಗಾನ ಗುರುಗಳಾದ ಕೆ. ಮೋಹನ್‌ ಬೈಪಡಿತ್ತಾಯ ಇವರನ್ನು ಗಣ್ಯರ ಸಮಕ್ಷಮದಲ್ಲಿ ಗೌರವ ಸಮ್ಮಾನದೊಂದಿಗೆ ಗೌರವಿಸಲಾಯಿತು. ಸಮ್ಮಾನಕ್ಕೆ ಉತ್ತಮವಾಗಿ ತಾಯ್ನಾಡಿಂದ ಕರೆಸಿ ಗೌರವಿಸಿದ ಸಂಸ್ಥೆ ಕನ್ನಡ ಸಂಘವು ಕಲಾ ಕಾಳಜಿಯ ಮೂಲಕ ಯಕ್ಷಗಾನ ಬೆಳೆಸುವಲ್ಲಿ ಮಹತ್ವದ ಕೊಡುಗೆ ನೀಡಿರುವುದನ್ನು ಶ್ಲಾಘಿಸಿದರು.

ಸಂಘದ ಅಧ್ಯಕ್ಷ ಅಮರನಾಥ್‌ ರೈ ಪ್ರಾಸ್ತಾವಿಕವಾಗಿ ಮಾತನಾಡಿದರು. ವೇದಿಕೆಯಲ್ಲಿ ಆಭ್ಯಾಗತರಾದ ಸುದರ್ಶನ ಬೈಪಡಿತ್ತಾಯ, ಕನ್ನಡ ಭವನ ಯಕ್ಷಗಾನ ಕೇಂದ್ರದ ಕೊಠಡಿಯ ದಾನಿ ನವೀನ್‌ ಶೆಟ್ಟಿ ರಿಫ, ಯಕ್ಷಧ್ರುವ ಪಟ್ಲ ಫೌಂಡೇಶನ್‌ ಬಹ್ರೈನ್‌ ಸೌದಿ ಘಟಕದ ಗೌರವಾಧ್ಯಕ್ಷ ಸುಭಾಶ್ಚಂದ್ರ, ಕಲಾಪೋಷಕ ನವೀನ್‌ ಭಂಡಾರಿ, ಸೌದಿ ಅರೇಬಿಯ, ಉಪಾಧ್ಯಕ್ಷ ಮಹೇಶ್‌ ಕುಮಾರ್‌, ಯಕ್ಷಗಾನ ಕೇಂದ್ರದ ನಾಟ್ಯಗುರು ದೀಪಕ್‌ ರಾವ್‌ ಪೇಜಾವರ ಮೊದಲಾದವರು ಉಪಸ್ಥಿತರಿದ್ದರು.

ಭಾಗವಹಿಸಿದ ಎಲ್ಲ ಹಿಮ್ಮೇಳ, ಮುಮ್ಮೇಳ ಕಲಾವಿದರಿಗೆ, ಸ್ವಯಂ ಸೇವಕರಿಗೆ ಪ್ರಶಸ್ತಿ ಪತ್ರ, ಸ್ಮರಣಿಕೆ ಹಾಗೂ ಪ್ರಾಯೋಜಕರಿಗೆ ನೆನಪಿನ ಕಾಣಿಕೆ ನೀಡಲಾಯಿತು. ಸಾಂಸ್ಕೃತಿಕ ಕಾರ್ಯದರ್ಶಿ ಹಿರಿಯ ಕಲಾವಿದ ಮೋಹನ್‌ ಎಡನೀರು ನಿರ್ವಹಣೆ ಸಹಕಾರ ನೀಡಿದ್ದರು. ಪ್ರಧಾನ ಕಾರ್ಯದರ್ಶಿ ರಾಮಪ್ರಸಾದ್‌ ಅಮ್ಮೆನಡ್ಕ ಕಾರ್ಯಕ್ರಮ ನಿರೂಪಿಸಿದರು. ಕಾರ್ಯಕ್ರಮದ ಕೊನೆಯಲ್ಲಿ ಭೋಜನದ ವ್ಯವಸ್ಥೆ ಮಾಡಲಾಗಿತ್ತು.

Advertisement
Advertisement

Udayavani is now on Telegram. Click here to join our channel and stay updated with the latest news.

Next