Advertisement

Dubai ಕನ್ನಡ ಸಂಘ: ಹಾದಿಯ ಮಂಡ್ಯ ಅಧ್ಯಕ್ಷೆ, ವರದರಾಜ್‌ ಕೋಲಾರ ಪ್ರ.ಕಾರ್ಯದರ್ಶಿ

01:07 PM Jun 15, 2024 | Team Udayavani |

ಅಬುಧಾಬಿ: ಸಂಯುಕ್ತ ಅರಬ್‌ ಸಂಸ್ಥಾನದ ಅನಿವಾಸಿ ಕನ್ನಡಿಗರೆಲ್ಲರನ್ನು ಪ್ರತಿನಿಧಿಸಿ ದುಬೈ ಕೇಂದ್ರವಾಗಿ ಕಳೆದ ಒಂಬತ್ತು ವರ್ಷಗಳಿಂದ ಸಾಂಸ್ಕೃತಿಕವಾಗಿ, ಸಾಮಾಜಿಕವಾಗಿ ಮತ್ತು ಕ್ರೀಡಾ ವಿಭಾಗದಲ್ಲಿ ಕಾರ್ಯಾಚರಿಸುತ್ತಿರುವ ಹೆಮ್ಮೆಯ ದುಬೈ ಕನ್ನಡ ಸಂಘ,ಯುಎಇ ಇದರ 2024-25ನೇ ಸಾಲಿನ ಅಧ್ಯಕ್ಷರಾಗಿ ಹಾದಿಯ ಮಂಡ್ಯ ಅವರು ನೇಮಕಗೊಂಡಿದ್ದಾರೆ.

Advertisement

ಮುಖ್ಯ ಕಾರ್ಯದರ್ಶಿಯಾಗಿ ವರದರಾಜ್‌ ಕೋಲಾರ ಅವರು ನೇಮಕಗೊಂಡಿದ್ದಾರೆ. ಜೂ.8ರಂದು ನಡೆದ ಸಭೆಯಲ್ಲಿ ಆಯ್ಕೆ ಮಾಡಲಾಗಿದೆ. ಇವರು ಕಳೆದ ಹಲವು ವರ್ಷಗಳಿಂದ ಸಂಘದಲ್ಲಿದ್ದು ಸಂಘದ ವತಿಯಿಂದ ನಡೆಯುವ ಅನೇಕ ಕಾರ್ಯಕ್ರಮಗಳಿಗೆ ಬಹಳ ಶ್ರಮ ವಹಿಸಿದ್ದಾರೆ.

ಕಳೆದ ಸಾಲಿನ ಅಧ್ಯಕ್ಷರಾದ ಮಧು ದಾವಣಗೆರೆ ಅವರಿಂದ ವಾರ್ಷಿಕ ಸಭೆಯಲ್ಲಿ ಸಂಘದ ಧ್ವಜ ಹಸ್ತಾಂತರ ಮೂಲಕ ಅಧಿಕಾರ ಸ್ವೀಕರಿಸಿದರು, ಸಭೆಯಲ್ಲಿ ಕಳೆದ ವರ್ಷದ ಕಾರ್ಯಕ್ರಮಗಳ ವರದಿಗಳನ್ನು ಹಾಗೂ ಒಳಿತು ಕೆಡುಕು ಬಗ್ಗೆ ವಿಶ್ಲೇಷಿಸಲಾಯಿತು, ಕಳೆದ ವರ್ಷಗಳ ಖರ್ಚು ವೆಚ್ಚದ ಮಾಹಿತಿ ಪಡೆಯೆಲಾಯಿತು. ಮುಂದಿನ ದಿನಗಳಲ್ಲಿ ಸಂಘದ ಕಾರ್ಯಚಟುವಟಿಕೆ ರೂಪುರೇಷಗಳ ಬಗ್ಗೆ ಚರ್ಚಿಸಲಾಯಿತು. 2024-25ನೇ ಸಾಲಿನ ಸಂಘದ ಸಮಿತಿಗೆ ನೂತನ ಸದಸ್ಯರನ್ನು ಆಯ್ಕೆ ಮಾಡಿಕೊಳ್ಳಲಾಯಿತು.

ಸಂಘದ 2024-25ನೇ ಸಾಲಿನ ಪದಾಧಿಕಾರಿಗಳು:
ಹಾದಿಯ ಮಂಡ್ಯ – ಅಧ್ಯಕ್ಷರು, ವರದರಾಜ್‌ ಕೋಲಾರ – ಪ್ರ.ಕಾರ್ಯದರ್ಶಿ, ಸುದೀಪ್‌ ದಾವಣಗೆರೆ, ಮಮತಾ ಮೈಸೂರು ಹಾಗೂ ಮಧು ದಾವಣಗೆರೆ – ಮಾಜಿ ಅಧ್ಯಕ್ಷರುಗಳು, ರಫೀಕಲಿ ಕೊಡಗು – ಉದ್ಯೋಗ ಸಹಾಯ ವಿಭಾಗ, ಪಲ್ಲವಿ ದಾವಣಗೆರೆ – ಮಹಿಳಾ ಘಟಕ, ಅನಿತಾ ಬೆಂಗಳೂರು – ಮಕ್ಕಳ ಘಟಕ, ಡಾ| ಸವಿತಾ ಮೈಸೂರು – ಆರೋಗ್ಯ ವಿಭಾಗ, ವಿಷ್ಣುಮೂರ್ತಿ ಮೈಸೂರು – ಸಾಹಿತ್ಯ ಘಟಕ, ಅಕ್ರಮ್‌ ಕೊಡಗು – ವ್ಯವಹಾರ ಘಟಕ, ಶಂಕರ್‌ ಬೆಳಗಾವಿ – ಸಹಾಯ ಹಸ್ತ ವಿಭಾಗ, ಮೊಹಿನುದ್ದೀನ್‌ ಹುಬ್ಬಳ್ಳಿ – ಕ್ರೀಡಾ ವಿಭಾಗ.

ಸಮಿತಿ ಸದಸ್ಯರುಗಳು: ಅಬ್ದುಲ್‌ ಹಾದಿ ಕುಂದಾಪುರ, ನಝೀರ ಮಂಡ್ಯ, ಪ್ರತಾಪ್‌ ಮಡಿಕೇರಿ, ಚೇತನ್‌ ಬೆಂಗಳೂರು, ಸ್ವಾತಿ ಚಿತ್ರದುರ್ಗ ಹಾಗೂ ರಜನಿ ಬೆಂಗಳೂರು.

Advertisement
Advertisement

Udayavani is now on Telegram. Click here to join our channel and stay updated with the latest news.

Next