Advertisement

Desi Swara: ಏಷ್ಯಾ ಹೆರಿಟೇಜ್‌ ಫೆಸ್ಟ್‌: ಮಹಿಷ ಮರ್ದಿನಿ ಯಕ್ಷಗಾನ

01:09 PM Jun 08, 2024 | Team Udayavani |

ಡಲ್ಲಾಸ್‌: ಏಷ್ಯಾಟೈಮ್ಸ್‌ ಸ್ಕ್ವೇ ರ್‌ ಅರ್ಪಿಸುವ ಏಷ್ಯನ್‌ ಹೆರಿಟೇಜ್‌ ಫೆಸ್ಟ್‌ ಒಂದು ವಾರ್ಷಿಕ ಕಾರ್ಯಕ್ರಮ ಆಗಿದೆ. ಇದು ಮೇ ತಿಂಗಳಲ್ಲಿ ಏಷ್ಯಾ ಅಮೆರಿಕನ್‌, ನೇಟಿವ್‌ ಹವಾಯಿಯನ್‌ ಮತ್ತು ಪ್ಯಾಸಿಫಿಕ್‌ ಐಲ್ಯಾಂಡರ್‌ (AANHPI) ಹೆರಿಟೇಜ್‌ ಮಾಸವನ್ನು ನೆಚ್ಚಿನ ರೀತಿಯಲ್ಲಿ ಆಚರಿಸುವ ಒಂದು ಅದ್ಭುತ ಮಾರ್ಗ. ಇಂತಹ ಕಾರ್ಯಕ್ರಮದಲ್ಲಿ ವಿವಿಧ ಸಂಪ್ರದಾಯಗಳು, ಸಂಸ್ಕೃತಿಗಳು ಮತ್ತು ಈ ಸಮುದಾಯಗಳ ಕೊಡುಗೆಗಳ ವಿವಿಧ ಕಾರ್ಯಕ್ರಮಗಳು ನಡೆಯಬಹುದು. ಇಲ್ಲಿ ವಿವಿಧ ಏಷ್ಯಾ ದೇಶಗಳ ಆಹಾರಗಳ ರುಚಿ ನೋಡಲು, ಅಲ್ಲಿನ ಕಲೆ ಮತ್ತು ಕರಕುಶಲಗಳನ್ನು ನೋಡಿ ಅನುಭವಿಸಲೂ, ಏಷ್ಯಾನ್‌ ದೇಶಗಳ ಇತಿಹಾಸಗಳ ಬಗ್ಗೆ ಕಲಿಯಲೂ ಅವಕಾಶಗಳಿರುತ್ತವೆ.

Advertisement

ಈ ವರ್ಷ DFW ಯಕ್ಷಗಾನ ಹವ್ಯಾಸಿಗಳು “ಮಹಿಷ ಮರ್ದಿನಿ’ ಎಂಬ ಇಂಗ್ಲಿಷ್‌ ಯಕ್ಷಗಾನ ಪ್ರಸಂಗವನ್ನು ಪ್ರದರ್ಶಿಸಿದರು. ಈ ಪ್ರಸಂಗದಲ್ಲಿ ಮಾಲಿನಿಯಾಗಿ ಗಗನ ಬದ್ರಿನಾಥ್‌, ಸಿಂಹವಾಗಿ ಪ್ರಶಾಂತ್‌ ಹೊಳ್ಳ, ದೇವಿ ಪಾತ್ರದಲ್ಲಿ ಪ್ರತೀಕ್ಷಾ ರಾವ್‌ ಮತ್ತು ಮಹಿಷಾಸುರನಾಗಿ ಸುಬ್ರಹ್ಮಣ್ಯ ಶಾನಭಾಗ್‌ ಪಾತ್ರ ನಿರ್ವಹಿಸಿದರು. ಸಾಧು ಶೆಟ್ಟಿ, ನಾಗರಾಜ ಉಪಾಧ್ಯ, ಉದಯ್‌ ಭಟ್‌ ಮತ್ತು ರೂಪ ಉಪಾಧ್ಯ ಮಹಿಷಾಸುರನ ಆಗಮನವನ್ನು ದೊಂದಿ ದೀಪ ಮತ್ತು ರಾಳ ಜತೆಗೆ ನಮ್ಮ ಕರಾವಳಿಯಲ್ಲಿ ಮಾಡುವ ಹಾಗೆ ವಿಜೃಂಭಣೆಯಿಂದ ಮಾಡಿದರು.

ಅನಘ ಪ್ರಸಾದ್‌ ಗಣಪತಿ ಸ್ತುತಿಯನ್ನು ನಾಟ್ಯ ರೂಪದಲ್ಲಿ ಪ್ರದರ್ಶಿಸಿದರು. ಹಿಮ್ಮೇಳದಲ್ಲಿ ಹರಿಪ್ರಸಾದ್‌ ಕುಂಭಾಶಿ ಮತ್ತು ಅಭಿರಾಮ್‌ ಉಪಾಧ್ಯ ಸಹಾಯ ಮಾಡಿದರು. ರೂಪ ಉಪಾಧ್ಯ ಮತ್ತು ಚಂದ್ರಿಕಾ ಪಡುಬಿದ್ರಿ ಮೇಕ್‌ಅಪ್‌ ಮಾಡಿದರು. ಯಕ್ಷಗಾನ ವೇಷ ಭೂಷಣಗಳನ್ನು ದೇವಾನಂದ್‌ ಭಟ್‌ ಬೆಳುವಾಯಿ ಮತ್ತು ಪುತ್ತಿಗೆ ಮಠ, ಫೀನಿಕ್ಸ್‌ ಅವರು ಒದಗಿಸಿದರು.

ಭಾರತದ ನಮ್ಮ ಈ ಯಕ್ಷಗಾನ ಕಲೆ ಅಂತಾರಾಷ್ಟ್ರೀಯ ಮಟ್ಟದಲ್ಲಿ ಬೆಳಗಬೇಕೆಂಬ ಏಕೈಕ ಉದ್ದೇಶ ಹೊಂದಿರುವ ನಮ್ಮ ಈ ಡಿಎಫ್‌ಡಬ್ಲ್ಯು ಯಕ್ಷಗಾನ ಹವ್ಯಾಸಿ ತಂಡವು ಅಮೆರಿಕದ ಡಲ್ಲಾಸ್‌ ನಗರದಲ್ಲಿ ಕಳೆದ 5 ವರ್ಷಗಳಿಂದ ಹತ್ತು ಹಲವಾರು ಕಡೆ 15ಕ್ಕೂ ಹೆಚ್ಚು ಯಕ್ಷಗಾನ ಕಾರ್ಯಕ್ರಮಗಳನ್ನು ಬಹು ಯಶಸ್ವಿಯಾಗಿ ಪ್ರದರ್ಶಿಸಿ ಪ್ರಶಂಸೆಗೆ ಪಾತ್ರವಾಗಿದೆ. ಡಿಎಫ್‌ಡಬ್ಲ್ಯು ಯಕ್ಷಗಾನ ಹವ್ಯಾಸಿಯ ಯುಟ್ಯೂಬ್‌ ಚಾನೆಲ್‌ ತಮ್ಮ ಕೆಲವು ಪ್ರಸಂಗಗಳನ್ನು ಹೊರ ಮೂಡಿಸಿವೆ.

ನಮ್ಮ ಡಿಎಫ್‌ಡಬ್ಲ್ಯು ಯಕ್ಷಗಾನ ಹವ್ಯಾಸಿ ತಂಡಕ್ಕೆ, ತಂಡದ ಎಲ್ಲ ಕಾರ್ಯಕ್ರಮಗಳಿಗೆ ಕಲಾಭಿಮಾನಿಗಳ ಬೆಂಬಲ, ಸಹಕಾರ, ಉತ್ತೇಜನ ಮತ್ತು ಮಾರ್ಗದರ್ಶನ ಹಾಗೂ ಸದಾ ಆ ಶ್ರೀ ಕೃಷ್ಣನ ಅನುಗ್ರಹ ದೊರಕಲಿ ಎಂದು ಪ್ರಾರ್ಥಿಸುತ್ತೇವೆ.

Advertisement
Advertisement

Udayavani is now on Telegram. Click here to join our channel and stay updated with the latest news.

Next