Advertisement
ಹೌದು, ನವನಗರದ ಬಸ್ ನಿಲ್ದಾಣಕ್ಕೆ ಬರುವ ಪ್ರಯಾಣಿಕರು ಈಗ ಮೂಗು ಮುಚ್ಚಿಕೊಂಡು ನಿಲ್ದಾಣದಲ್ಲಿ ಹೆಜ್ಜೆ ಇಡಬೇಕು.ಸ್ವತ್ಛತೆ ಕಾಪಾಡುವ ಮೂಲಕ ಪ್ರಯಾಣಿಕರಿಗೆ ಅನುಕೂಲ ಕಲ್ಪಿಸಬೇಕಾದ ಸಾರಿಗೆ ಸಂಸ್ಥೆಯ ಸಿಬ್ಬಂದಿ ನಿರ್ಲಕ್ಷ್ಯ ವಹಿಸಿದ್ದಾರೆ ಎಂಬ ಆರೋಪ ಕೇಳಿ ಬಂದಿದೆ.
ಊರುಗಳಿಗೆ ಪ್ರಯಾಣ ಬೆಳೆಸಲು ನವನಗರ ಬಸ್ ನಿಲ್ದಾಣ ಪ್ರಮುಖವಾಗಿದೆ. ಆದರೆ, ಅಲ್ಲಿಗೆ ಬರುವ ಪ್ರಯಾಣಿಕರಿಗೆ ಮಾತ್ರ ಸರಿಯಾದ ಸೌಲಭ್ಯವಿಲ್ಲದಂತಾಗಿದೆ ಎಂಬ ಅಸಮಾಧಾನ ತೀವ್ರವಾಗಿದೆ. ಗಬ್ಬೆದ್ದ ಒಳಚರಂಡಿ: ನವನಗರದ ಬಸ್ ನಿಲ್ದಾಣದಲ್ಲಿರುವ ಒಳಚರಂಡಿ ತುಂಬಿದ್ದು, ಕಸ-ಕಡ್ಡಿಗಳು ಸಿಕ್ಕು ಬ್ಲಾಕ್ ಆಗಿ ಚರಂಡಿ ನೀರೆಲ್ಲ ಹೊರಕ್ಕೆ ಹರಿಯುತ್ತಿದೆ. ಇದರಿಂದ ಬಸ್ ನಿಲ್ದಾಣದ ತುಂಬೆಲ್ಲ ದುರ್ವಾಸನೆ ಹೊಡೆಯುತ್ತಿದೆ. ಇದರಿಂದ ಸೊಳ್ಳೆಗಳು ಹೆಚ್ಚಾಗಿದ್ದು, ಬಸ್ ನಿಲ್ದಾಣ ಸೊಳ್ಳೆಗಳ ತಾಣವಾಗಿದೆ. ಆದ್ದರಿಂದ, ಒಳಚರಂಡಿ ಸ್ವಚ್ಛಗೊಳಿಸುವ ಮೂಲಕ ಬಸ್
ನಿಲ್ದಾಣದಲ್ಲಿ ಉಂಟಾಗಿರುವ ದುರ್ವಾಸನೆ ಹೋಗಲಾಡಿಸಲು ಸಂಬಂಧಪಟ್ಟ ಅಧಿಕಾರಿಗಳು ಕ್ರಮ ಕೈಗೊಳ್ಳಬೇಕೆಂಬ ಒತ್ತಾಯ
ಕೇಳಿ ಬಂದಿದೆ.
Related Articles
ನವನಗರದ ಬಸ್ ನಿಲ್ದಾಣದಲ್ಲಿ ಕಳೆದ ಹಲವು ತಿಂಗಳಿಂದ ಉಂಟಾದ ಈ ಸಮಸ್ಯೆಗೆ ಪ್ರಯಾಣಿಕರು ಬೇಸತ್ತಿದ್ದಾರೆ. ಆದರೆ, ಈವರೆಗೆ ಸಾರಿಗೆ ಸಂಸ್ಥೆಯ ಅಧಿಕಾರಿಗಳು ಇತ್ತ ಗಮನಹರಿಸಿಲ್ಲ. ಇದರಿಂದ ಬಸ್ ನಿಲ್ದಾಣಕ್ಕೆ ಬರುವ ಪ್ರಯಾಣಿಕರೆಲ್ಲ ಅಧಿಕಾರಿಗಳ ವಿರುದ್ಧ ಆಕ್ರೋಶ ಹೊರ ಹಾಕುತ್ತಿದ್ದಾರೆ. ಇದು ಪ್ರಯಾಣಿಕರು ಅಷ್ಟೇ ಅಲ್ಲ, ನಿತ್ಯವೂ ಕರ್ತವ್ಯ ನಿರ್ವಹಿಸುವ ಸಿಬ್ಬಂದಿ ಆರೋಗ್ಯದ ಮೇಲೂ ಪರಿಣಾಮ ಬೀರುತ್ತಿದೆ ಎನ್ನಲಾಗಿದೆ.
Advertisement
*ವಿಶೇಷ ವರದಿ