ಪಡುಬಿದ್ರಿ: ಬಡಾ ಗ್ರಾ. ಪಂ. ವ್ಯಾಪ್ತಿಯಲ್ಲಿ ಅದಾನಿ-ಯುಪಿಸಿಎಲ್‌ನ ಸಿಎಸ್‌ಆರ್ ನಿಧಿಯಲ್ಲಿ 2016-17ನೇ ಸಾಲಿನ ಸುಮಾರು 30 ಲಕ್ಷ ರೂ. ಗಳ ಅಭಿವೃದ್ಧಿ ಕಾಮಗಾರಿಗಳಿಗೆ ಶಿಲಾನ್ಯಾಸವನ್ನು ಕಂಪೆನಿಯ ಜಂಟಿ ಅಧ್ಯಕ್ಷ ಕಿಶೋರ್ ಆಳ್ವ ಇತ್ತೀಚೆಗೆ ನೆರವೇರಿಸಿದರು.
ಈ ಸಂದರ್ಭ ಮಾತಾಡಿದ ಕಿಶೋರ್ ಆಳ್ವ ಉಚ್ಚಿಲ ಬಡಾ ಗ್ರಾ. ಪಂ. ವ್ಯಾಪ್ತಿಯಲ್ಲಿ ವಿವಿಧ ಗ್ರಾಮಾಭಿವೃದ್ಧಿ ಯೋಜನೆಗಳ ಅನುಷ್ಠಾನಕ್ಕಾಗಿ ರೂ. 3 ಕೋಟಿ ಸಿಎಸ್‌ಆರ್ ನಿಧಿಯನ್ನು 3 ವರ್ಷಗಳ ಅವಧಿಗೆ ಘೋಷಿಸಲಾಗಿದೆ.
ಈಗಾಗಲೇ ರೂ.20 ಲಕ್ಷ ವೆಚ್ಚದಲ್ಲಿ ಶುದ್ಧ ಕುಡಿಯುವ ನೀರಿನ ಘಟಕ ನಿರ್ಮಾಣ ಮಾಡಿದೆ ಹಾಗೂ ರೂ. 10 ಲಕ್ಷ ವೆಚ್ಚದಲ್ಲಿ ಮಹಾಲಿಂಗೇಶ್ವರ ದೇವಸ್ಥಾನದ ಆವರಣ ಗೋಡೆ ನಿರ್ಮಾಣ ಕಾಮಗಾರಿಗೆ ಚಾಲನೆ ನೀಡಿದ್ದೇವೆ. ಪ್ರಸಕ್ತ ಸಾಲಿನಲ್ಲಿ ಒಟ್ಟು 65.50 ಲಕ್ಷ ರೂ. ಗಳ ಅಭಿವೃದ್ಧಿ ಕಾರ್ಯವನ್ನು ಬಡಾ ಗ್ರಾಮಕ್ಕಾಗಿ ಅದಾನಿ ಯುಪಿಸಿಎಲ್ ನಿರ್ವಹಿಸಿದೆ ಎಂದರು.ಬಡಾ ಗ್ರಾ. ಪಂ. ಅಧ್ಯಕ್ಷೆ ನಾಗರತ್ನ ಕರ್ಕೇರ ಅಧ್ಯಕ್ಷತೆ ವಹಿಸಿದ್ದು, ಅದಾನಿ ಯುಪಿಸಿಎಲ್‌ನ ಜನಪರ ಕಾರ್ಯಗಳನ್ನು ಶ್ಲಾಘಿಸಿದರು.
ಈ ಸಂದರ್ಭ ಜಿ. ಪಂ. ಸದಸ್ಯೆ ಶಿಲ್ಪಾ ಜಿ. ಸುವರ್ಣ, ತಾ. ಪಂ. ಸದಸ್ಯ ಯು.ಸಿ. ಶೇಖಬ್ಬ, ಉಪಾಧ್ಯಕ್ಷೆ ಇಂದಿರಾ ಶೆಟ್ಟಿ, ಪಂಚಾಯತ್ ಸದಸ್ಯರಾದ ಚಂದ್ರಶೇಖರ್ ಕೋಟ್ಯಾನ್, ರವಿ ಎಂ. ಕೋಟ್ಯಾನ್, ಮೋಹಿನಿ ಸುವರ್ಣ, ವಸಂತ್ ದೇವಾಡಿಗ, ಜ್ಯೋತಿ, ಸಾಧು, ಶಕುಂತಳಾ, ದೀಪಕ್, ಮೊಹಮ್ಮದ್ ರಫೀಕ್, ರಫೀಕ್ ದೇವ್, ಪುಟ್ಟಮ್ಮ, ಸೋಮನಾಥ್ ಸಾಲ್ಯಾನ್, ಶಿವಕುಮಾರ್, ಪಿಡಿಒ ಕುಶಾಲಿನಿ ವಿ.ಎಸ್., ಕಂಪೆನಿ ಎಜಿಎಂ ಗಿರೀಶ್ ನಾವಡ, ಪ್ರಬಂಧಕ ರವಿ ಜೀರೆ, ವಸಂತ್ ಕುಮಾರ್, ಗೋಕುಲ್ ದಾಸ್, ಅದಾನಿ ಫೌಂಡೇಶನ್‌ನ ವಿನೀತ್ ಅಂಚನ್, ಸುಕೇಶ್ ಸುವರ್ಣ, ಅನುದೀಪ್ ಪೂಜಾರಿ ಮೊದಲಾದವರು ಉಪ ಸ್ಥಿತರಿದ್ದರು.