Advertisement
01. ಸರಯೂ ನದಿ ತೀರದ ರಾಮ್ ಕಿ ಪೌದಿಯಲ್ಲಿ ಸುಮಾರು 22 ಸಾವಿರ ಮಂದಿ ಸ್ವಯಂ ಸೇವಕರು 15 ಲಕ್ಷ ಹಣತೆಗಳನ್ನು ಬೆಳಗುವರು.02. ಒಂದೊಂದು ಚೌಕದಲ್ಲಿ 256 ದೀಪಗಳಂತೆ ಚೌಕವನ್ನು ನಿರ್ಮಿಸಿ ವಿನ್ಯಾಸಗೊಳಿಸುತ್ತಿರುವುದು ಮತ್ತೂಂದು ವಿಶೇಷ.
03. ಬರೀ ಹಣತೆಗಳಷ್ಟೆ ಅಲ್ಲ ; ಲೇಸರ್ ಶೋ ಹಾಗೂ ಬಾಣ ಬಿರುಸು ಪ್ರದರ್ಶನ ಇರಲಿದೆ.
04. ಮತ್ತೊಂದು ವಿಶೇಷವೆಂದರೆ ಪ್ರಸಿದ್ಧ ರಾಮ್ ಲೀಲಾವನ್ನು ನಮ್ಮ ದೇಶದ್ದಲ್ಲದೇ ರಷ್ಯಾದ ತಂಡವೂ ಪ್ರದರ್ಶಿಸಲಿದೆ.
05. ಅಯೋಧ್ಯೆಯ ರಾಮಮಂದಿರದೊಳಗಿರುವ ರಾಮಲಲ್ಲಾ ಕೆಂಪು-ಗುಲಾಬಿ ಬಣ್ಣದ ವಿಶೇಷ ದಿರಿಸಿನಲ್ಲಿ ಕಂಗೊಳಿಸಲಿದ್ದಾನೆ.
06. ಪ್ರಧಾನಿ ಮೋದಿ ರವಿವಾರ ರಾಮಲಲ್ಲಾನಿಗೆ ಪೂಜೆ ಸಲ್ಲಿಸುವರು. ಸಂಜೆ ನಡೆಯುವ ಸರಯೂ ತಟದ ಆರತಿಯಲ್ಲೂ ಪಾಲ್ಗೊಳ್ಳುವರು. ಸ್ತಬ್ಧಚಿತ್ರ ಇತ್ಯಾದಿ ಹಲವು ವಿಶೇಷಗಳು ದೀಪಾವಳಿಯಲ್ಲಿರಲಿವೆ.