Advertisement

Ayodhya: ಪೇಜಾವರ ಶ್ರೀಗಳ ಸುಧಾಮಂಗಲೋತ್ಸವ ಸಂಪನ್ನ

01:04 AM Mar 01, 2024 | Team Udayavani |

ಅಯೋಧ್ಯೆ: ಅಯೋಧ್ಯೆಯಲ್ಲಿ 48 ದಿನಗಳ ಮಂಡಲೋತ್ಸವವನ್ನು ವೈಭವದಿಂದ ನಡೆಸುತ್ತಿರುವ ಶ್ರೀ ಪೇಜಾವರ ಮಠಾಧೀಶರಾದ ಶ್ರೀ ವಿಶ್ವಪ್ರಸನ್ನತೀರ್ಥ ಶ್ರೀಪಾದರು ಗುರುವಾರ ತಮ್ಮ ವಿದ್ಯಾರ್ಥಿಗಳಿಗೆ ಶ್ರೀಮನ್ಯಾಯಸುಧಾ ಮಂಗಲೋತ್ಸವ ನಡೆಸಿ ರಾಮನಿಗೆ ಜ್ಞಾನ ಪುಷ್ಪವನ್ನು ಸಮರ್ಪಿಸಿದರು.

Advertisement

ಅಯೋಧ್ಯೆಯ ತೀರ್ಥಕ್ಷೇತ್ರಪುರಮ್‌ನ ಟೆಂಟ್‌ ಸಿಟಿ ಸಭಾಂಗಣದಲ್ಲಿ ಬೆಂಗಳೂರಿನ ಪೂರ್ಣಪ್ರಜ್ಞ ವಿದ್ಯಾಪೀಠದ ಘಟಿಕೋತ್ಸವ ನಡೆಯಿತು. ವಿದ್ಯಾಪೀಠದಲ್ಲಿ 13 ವರ್ಷಗಳ ವ್ಯಾಸಂಗ ಮುಗಿಸಿದ 14 ವಿದ್ಯಾರ್ಥಿಗಳು ಮಂಗಲೋತ್ಸವವನ್ನು ಶ್ರೀರಾಮನಿಗೆ ಅರ್ಪಿಸಿದರು.

ಶ್ರೀ ಪಲಿಮಾರು ಉಭಯ ಶ್ರೀಗಳು, ಪೇಜಾವರ ಶ್ರೀ, ಚಿತ್ರಾಪುರ ಮಠದ ಶ್ರೀ ವಿದ್ಯೆàಂದ್ರತೀರ್ಥರು ಸಾನ್ನಿಧ್ಯ ವಹಿಸಿ ಶ್ರೀ ಜಯತೀರ್ಥ ಗುರುವಿರಚಿತ ಶ್ರೀಮನ್ಯಾಯಸುಧಾನುವಾದ ಹಾಗೂ ಜಗದ್ಗುರು ಮಧ್ವಾಚಾರ್ಯರ ತಣ್ತೀವಾದದ ಹಿನ್ನೆಲೆಯಲ್ಲಿ ಸಂದೇಶ ನೀಡಿದರು.

ಹಿರಿಯ ವಿದ್ವಾಂಸರಾದ ಪ್ರೊ| ಎ. ಹರಿದಾಸ ಭಟ್‌, ರಾಮವಿಟuಲಾಚಾರ್ಯ, ಸತ್ಯಧ್ಯಾನಾಚಾರ್ಯ ಕಟ್ಟಿ ಜಿ.ಪಿ. ನಾಗರಾಜ ಆಚಾರ್ಯ, ರಘುಪತಿ ಉಪಾಧ್ಯಾಯ, ತಿರುಮಲ ಕುಲಕರ್ಣಿ, ಬ್ರಹ್ಮಣ್ಯಾಚಾರ್ಯ ಮೊದಲಾದವರಿದ್ದರು. ವಿದ್ಯಾಪೀಠದ ಪ್ರಾಚಾರ್ಯ ವಿದ್ವಾನ್‌ ಸತ್ಯನಾರಾಯಣಾಚಾರ್ಯ ಕಾರ್ಯಕ್ರಮ ನಿರೂಪಿಸಿ ವಂದಿಸಿದರು.

Advertisement

Udayavani is now on Telegram. Click here to join our channel and stay updated with the latest news.

Next