Advertisement

Ayodhya; ಬಾಲರಾಮನ ಪ್ರತಿಷ್ಠಾಪನೆಗೆ ತಗುಲಿದ ವೆಚ್ಚವೆಷ್ಟು?

11:48 PM Aug 26, 2024 | Team Udayavani |

ಅಯೋಧ್ಯೆ: ಬಾಲರಾಮನ ಪ್ರಾಣ ಪ್ರತಿಷ್ಠಾಪನೆ ಕಾರ್ಯಕ್ರಮಕ್ಕೆ ಬರೋಬ್ಬರಿ 113 ಕೋಟಿ ರೂ. ವೆಚ್ಚವಾಗಿದ್ದು, ರಾಮ ಜನ್ಮಭೂಮಿ ತೀರ್ಥ ಕ್ಷೇತ್ರ ಟ್ರಸ್ಟ್‌ ಈ ಮಾಹಿತಿಯನ್ನು ನೀಡಿರು ವುದಾಗಿ ಮಾಧ್ಯಮವೊಂದು ವರದಿ ಮಾಡಿದೆ.

Advertisement

ಟ್ರಸ್ಟ್‌ನ ಪ್ರಧಾನ ಕಾರ್ಯದರ್ಶಿ ಚಂಪತ್‌ ರಾಯ್‌ ಅವರ ಪ್ರಕಾರ 2024ರ ಎ. 1ರಿಂದ 2025ರ ಮಾ. 31ರವರೆಗೆ ರಾಮಮಂದಿರ ಯೋಜನೆಗೆ 850 ಕೋಟಿ ರೂ. ವೆಚ್ಚವಾಗಲಿದೆ. ಇದರಲ್ಲಿ 670 ಕೋಟಿ ರೂ. ದೇವಸ್ಥಾನದ ನಿರ್ಮಾಣಕ್ಕೆ ವೆಚ್ಚವಾದರೆ, ಉಳಿದ 180 ಕೋಟಿ ರೂ.ಗಳನ್ನು ಇತರ ಕೆಲಸಗಳಿಗೆ ಬಳಸಲಾಗುತ್ತದೆ.
ಟ್ರಸ್ಟ್‌ ನೀಡಿರುವ ಮಾಹಿತಿ ಪ್ರಕಾರ 2023- 24ನೇ ಆರ್ಥಿಕ ವರ್ಷದಲ್ಲಿ 676 ಕೋಟಿ ರೂ. ವೆಚ್ಚವಾಗಿದೆ. ಇದರಲ್ಲಿ 540 ಕೋಟಿ ರೂ. ಮಂದಿರ ನಿರ್ಮಾಣಕ್ಕೆ ವೆಚ್ಚವಾಗಿದ್ದರೆ, 136 ಕೋಟಿ ರೂ. ಇತರ ಕೆಲಸಗಳಿಗೆ ವೆಚ್ಚವಾಗಿದೆ. 363.34 ಕೋಟಿ ರೂ. ಆದಾಯ ಬಂದಿದೆ. ಇದರಲ್ಲಿ 204 ಕೋಟಿ ರೂ. ಬ್ಯಾಂಕ್‌ಗಳ ಬಡ್ಡಿಯಿಂದ ಬಂದಿದ್ದರೆ, 58 ಕೋಟಿ ರೂ. ಕೊಡುಗೆಗಳಿಂದ ಬಂದಿದೆ.

ಕಳೆದ 4 ವರ್ಷಗಳಲ್ಲಿ ಭಕ್ತರು 20 ಕೇಜಿ ಚಿನ್ನ ಮತ್ತು 13 ಕ್ವಿಂಟಾಲ್‌ ಬೆಳ್ಳಿಯ ಆಭರಣಗಳನ್ನು ದೇವಸ್ಥಾನಕ್ಕೆ ಕೊಡುಗೆಯಾಗಿ ನೀಡಿದ್ದಾರೆ.ಮಂದಿರ ನಿರ್ಮಾಣಕ್ಕೆ ಈವರೆಗೆ 1,800 ಕೋಟಿ ರೂ. ವೆಚ್ಚವಾಗಿದ್ದು, ಬಾಕಿ 2 ಹಂತಗಳ ನಿರ್ಮಾಣಕ್ಕೆ 670 ಕೋಟಿ ರೂ. ವೆಚ್ಚವಾಗಲಿದೆ ಎಂದು ಟ್ರಸ್ಟ್‌ ಇತ್ತೀಚೆಗೆ ತಿಳಿಸಿತ್ತು.

Advertisement

Udayavani is now on Telegram. Click here to join our channel and stay updated with the latest news.

Next