Advertisement

Ayodhya ಕೊಳಕು ಉದ್ದೇಶಗಳಿಂದ ಶಾಪಗ್ರಸ್ತವಾಗಿತ್ತು…:ಯೋಗಿ ಆದಿತ್ಯನಾಥ್ ಕಿಡಿ

11:45 PM Feb 07, 2024 | Team Udayavani |

ಲಕ್ನೋ : ಅಯೋಧ್ಯಾ ನಗರವನ್ನು ಹಿಂದಿನ ಸರಕಾರಗಳು ನಿಷೇಧ ಮತ್ತು ಕರ್ಫ್ಯೂ ವ್ಯಾಪ್ತಿಗೆ ತಂದಿದ್ದವು. ಶತಮಾನಗಳವರೆಗೆ, ಅಯೋಧ್ಯೆಯು ಕೊಳಕು ಉದ್ದೇಶಗಳಿಂದ ಶಾಪಗ್ರಸ್ತವಾಗಿತ್ತು, ಯೋಜಿತ ತಿರಸ್ಕಾರವನ್ನು ಎದುರಿಸಿತ್ತು ಎಂದು ಸಿಎಂ ಯೋಗಿ ಆದಿತ್ಯನಾಥ್ ಅವರು ಉತ್ತರ ಪ್ರದೇಶದ ವಿಧಾನಸಭೆಯಲ್ಲಿ ಬುಧವಾರ ಗುಡುಗಿದ್ದಾರೆ.

Advertisement

”ಸಾರ್ವಜನಿಕ ಭಾವನೆಗಳಿಗೆ ನೋವು ತರುವಂತಹ ಇಂತಹ ವರ್ತನೆ ಬಹುಶಃ ಬೇರೆಲ್ಲೂ ಕಂಡಿರಲಿಲ್ಲ. ಅಯೋಧ್ಯೆ ಅನ್ಯಾಯವನ್ನು ಎದುರಿಸಿತು. ನಾನು ಅನ್ಯಾಯದ ಬಗ್ಗೆ ಮಾತನಾಡುವಾಗ, ನಾವು 5000 ವರ್ಷಗಳ ಹಿಂದಿನ ವಿಷಯವನ್ನು ನೆನಪಿಸಿಕೊಳ್ಳುತ್ತೇವೆ. ಆ ಕಾಲದಲ್ಲಿ ಪಾಂಡವರಿಗೂ ಅನ್ಯಾಯವಾಗಿತ್ತು. ಅಯೋಧ್ಯೆ, ಕಾಶಿ ಮತ್ತು ಮಥುರಾದಲ್ಲಿ ಅನ್ಯಾಯ ಸಂಭವಿಸಿದೆ” ಎಂದು ಹೇಳಿದರು.

ಹಿಂದೂಗಳದ್ದು ಬರೀ 3 ಬೇಡಿಕೆ
“ಶ್ರೀಕೃಷ್ಣನು ಪಾಂಡವರಿಗಾಗಿ ಅಂದು ಕೇವಲ ಐದು ಹಳ್ಳಿಗಳನ್ನು ಕೇಳಿದ್ದ. ಇಂದು ಹಿಂದೂ ಸಮಾಜ ಕೇವಲ ಮೂರು ಶ್ರದ್ಧಾ ಕೇಂದ್ರಗಳನ್ನು ಕೇಳುತ್ತಿದೆ’ ಎಂದು ಯೋಗಿ ಹೇಳಿದ್ದಾರೆ. ಅಂದು ಕೃಷ್ಣ ಕೌರವರ ಬಳಿ ಪಾಂಡವರಿಗಾಗಿ ಐದು ಹಳ್ಳಿಗಳನ್ನು ಕೇಳಿ ಮಿಕ್ಕಿದ್ದೆಲ್ಲ ನಿಮ್ಮ ಬಳಿಯೇ ಇಟ್ಟುಕೊಳ್ಳಿ ಎಂದಿದ್ದ. ಆದರೆ ದುರ್ಯೋಧನ ಹಳ್ಳಿಗಳನ್ನು ನೀಡಿರಲಿಲ್ಲ. ಈಗ ಅಯೋಧ್ಯೆ, ಕಾಶಿ, ಮಥುರಾದಲ್ಲೂ ಇದೇ ಆಗಿದೆ. ಹಿಂದೂ ಸಮಾಜವು ಕೇವಲ ತನ್ನ 3 ಶ್ರದ್ದಾ ಕೇಂದ್ರ ಗಳನ್ನು ಕೇಳುತ್ತಿದೆ ಅಷ್ಟೇ ಎಂದು ಹೇಳಿದ್ದಾರೆ.

ಉತ್ತರ ಪ್ರದೇಶ ಸರಕಾರ ಅಯೋಧ್ಯೆ ಅಭಿವೃದ್ದಿಗಾಗಿ ಬಜೆಟ್ ನಲ್ಲಿ ನೂರು ಕೋಟಿ ರೂ. ಅನುದಾನ ಮೀಸಲಿರಿಸಿದೆ.

Advertisement

Udayavani is now on Telegram. Click here to join our channel and stay updated with the latest news.

Next