Advertisement

IPL: ಇಂಪ್ಯಾಕ್ಟ್ ಪ್ಲೇಯರ್‌ ನಿಯಮಕ್ಕೆ ಅಕ್ಷರ್‌ ಪಟೇಲ್‌ ಕೂಡ ವಿರೋಧ

09:13 PM Apr 25, 2024 | Team Udayavani |

ಹೊಸದಿಲ್ಲಿ: ಐಪಿಎಲ್‌ನಲ್ಲಿ ಬಳಕೆಯಾಗುತ್ತಿರುವ ಇಂಪ್ಯಾಕ್ಟ್ ಪ್ಲೇಯರ್‌ ನಿಯಮದಿಂದಾಗಿ ಆಲ್‌ರೌಂಡರ್‌ಗಳ ಪಾತ್ರ ಅಪಾಯದಲ್ಲಿದೆ ಎಂದು ಡೆಲ್ಲಿ ತಂಡದ ಆಲ್‌ರೌಂಡರ್‌ ಅಕ್ಷರ್‌ ಪಟೇಲ್‌ ಹೇಳಿದ್ದಾರೆ.

Advertisement

ಈ ಮೂಲಕ ರೋಹಿತ್‌ ಶರ್ಮ, ಆ್ಯಡಂ ವೋಗ್ಸ್‌ ಬಳಿಕ ಅಕ್ಷರ್‌ ಸಹ ವಿರೋಧ ವ್ಯಕ್ತಪಡಿಸಿದ್ದಾರೆ.

ಇಂಪ್ಯಾಕ್ಟ್ ಪ್ಲೇಯರ್‌ ನಿಯಮ ಆಲ್‌ರೌಂಡರ್‌ಗಳಿಗೆ ತೊಂದರೆ ಉಂಟು ಮಾಡುತ್ತಿದೆ ಎಂದು ಒಬ್ಬ ಆಲ್‌ರೌಂಡರ್‌ ಆಗಿ ನಾನು ಹೇಳಬಲ್ಲೆ. ಈ ನಿಯಮವಿಲ್ಲದಿದ್ದರೆ ಪ್ರತಿ ತಂಡವೂ 6 ಜನ ಬೌಲರ್‌ ಮತ್ತು 6 ಮಂದಿ ಬ್ಯಾಟರ್‌ಗಳೊಂದಿಗೆ ಕಣಕ್ಕಿಳಿಯಲು ಬಯಸುತ್ತದೆ. ಇದರಲ್ಲಿ ಒಬ್ಬ ಆಲ್‌ರೌಂಡರ್‌ ಆಗಿರುತ್ತಾರೆ. ಈ ನಿಯಮ ಇರುವುದರಿಂದ ತಂಡಗಳು ಹೆಚ್ಚುವರಿ ಬ್ಯಾಟರ್‌ ಅಥವಾ ಬೌಲರ್‌ಗಳನ್ನು ಬಳಕೆ ಮಾಡಿಕೊಳ್ಳುತ್ತವೆ ಎಂದು ಅವರು ಹೇಳಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next