Advertisement
ಪಂದ್ಯದ ವೇಳೆ ಆಗಾಗ್ಗೆ ಹೆಚ್ಚು ಉಸಿರಾಡುತ್ತಿದ್ದ ಅವರು ಕೆಮ್ಮು ಸಮಸ್ಯೆಯಿಂದ ಬಳಲುತ್ತಿದ್ದರು. ಆದರೆ ಅವರ ಈ ಆರೋಗ್ಯ ಸಮಸ್ಯೆ ಆಟಕ್ಕೇನೂ ಪರಿಣಾಮ ಬೀರಲಿಲ್ಲ. 2021ರ ಬಳಿಕ ಇದೇ ಮೊದಲ ಬಾರಿ ಆರಂಭಿಕ ಅವಧಿಯಲ್ಲಿ ಆಡಿದ ಜೊಕೋವಿಕ್ 6-0, 6-0, 6-3 ಸೆಟ್‌ಗಳಿಂದ ಗೆದ್ದು ಅಂತಿಮ ಎಂಟರ ಸುತ್ತಿಗೇರಿದರು. ಇದು ಅವರ 32ನೇ ಸತತ ಗೆಲುವು ಮತ್ತು ಗ್ರ್ಯಾನ್ ಸ್ಲಾಮ್‌ನಲ್ಲಿ 58ನೇ ಬಾರಿ ಕ್ವಾರ್ಟರ್‌ಫೈನಲಿಗೇರಿದ ಸಾಧನೆ ಮಾಡಿದರಲ್ಲದೇ ಸ್ವಿಸ್ ತಾರೆ ರೋಜರ್ ಫೆಡರರ್ ಸಾಧನೆಯನ್ನು ಸಮಗಟ್ಟಿದರು.
ಕಳೆದ ವರ್ಷದ ರನ್ನರ್ ಅಪ್ ಸ್ಟೆಫನೋಸ್ ಟಿಟಿಪಸ್ ಅವರು ನಾಲ್ಕು ಸೆಟ್‌ಗಳ ಕಠಿನ ಹೋರಾಟದಲ್ಲಿ ಟಯ್ಲರ್ ಫ್ರಿಟ್ಜ್ ಅವರ ಕೈಯಲ್ಲಿ ಸೋತು ನಿರ್ಗಮಿಸಿದ್ದಾರೆ. ಅಮೆರಿಕದ ಫ್ರಿಟ್ಜ್ ಅವರು 7-6 (3), 5-7, 6-3, 6-3 ಸೆಟ್‌ಗಳಿಂದ ಗೆಲುವು ಸಾಧಿಸಿ ಮೊದಲ ಬಾರಿ ಇಲ್ಲಿ ಕ್ವಾರ್ಟರ್‌ಫೈನಲ್ ತಲುಪಿದ ಸಾಧನೆ ಮಾಡಿದರು. ಕಳೆದ ವರ್ಷದ ಯುಎಸ್ ಓಪನ್‌ನಲ್ಲಿ ಕ್ವಾರ್ಟರ್‌ಫೈನಲ್ ತಲುಪಿದ³ ಫ್ರಿಟ್ಜ್ ಅವರ 13 ಏಸ್ ಸಿಡಿಸಿದರಲ್ಲದೇ 50 ವಿಜಯಿ ಹೊಡೆತ ನೀಡಿ ಗೆಲುವು ಒಲಿಸಿಕೊಂಡರು. ಇನ್ನೊಂದು ಪಂದ್ಯದಲ್ಲಿ ಜಾನ್ನಿಕ್ ಸಿನ್ನರ್ ಅವರು ಕರೆನ್ ಕಚನೋವ್ ಅವರನ್ನು 6-4, 7-5, 6-3 ಸೆಟ್‌ಗಳಿಂದ ಸೋಲಿಸಿ ಕ್ವಾರ್ಟರ್‌ಫೈನಲ್ ಹಂತಕ್ಕೇರಿದರು. ಕಚನೋವ್ ಕಳೆದ ವರ್ಷ ಇಲ್ಲಿ ಸೆಮಿಫೈನಲ್ ತಲುಪಿದ್ದರು.
Related Articles
ಮೆಲ್ಬರ್ನ್: ನಾಲ್ಕನೇ ಶ್ರೇಯಾಂಕದ ಕೊಕೊ ಗಾಫ್ ಅವರನ ಪೋಲಂಡಿನ ಮಗ್ಡಲೆನಾ ಫ್ರೆಚ್ ಅವರನನ್ನ 6-1, 6-2 ಸೆಟ್‌ಗಳಿಂದ ಸುಲಭವಾಗಿ ಸೋಲಿಸಿ ಇದೇ ಮೊದಲ ಬಾರಿ ಇಲ್ಲಿ ಕ್ವಾರ್ಟರ್‌ಫೈನಲ್‌ಗೇರಿದರು. ಯುಎಸ್ ಓಪನ್ ಚಾಂಪಿಯನ್ ಆಗಿರುವ ಗ್ರಾಫ್ ಮೆಲ್ಬರ್ನ್ ಪಾರ್ಕ್‌ನಲ್ಲಿ ಇನ್ನೂ ಒಂದೇ ಒಂದು ಸೆಟ್ ಕಳೆದುಕೊಂಡಿಲ್ಲ. ಈ ಪಂದ್ಯವನ್ನು ಆಸ್ಟ್ರೇಲಿಯದ ಖ್ಯಾತ ಆಟಗಾರ ರಾಡ್ ಲೆವರ್ ವೀಕ್ಷಿಸಿದ್ದರು.
Advertisement
ಸಬಲೆಂಕಾಗೆ ಗೆಲುವುಹಾಲಿ ಚಾಂಪಿಯನ್ ಆರ್ಯಾನಾ ಸಬಲೆಂಕಾ ಅವರು ಅಮೆರಿಕದ ಅಮಂಡಾ ಅನಿಸಿಮೋವಾ ಅವರನ್ನು 6-3, 6-2 ಸೆಟ್‌ಗಳಿಂದ ಸೋಲಿಸಿ ಕ್ವಾರ್ಟರ್‌ಫೈನಲ್ ಹಂತಕ್ಕೇರಿದರು. ಈ ಗೆಲುವಿನಿಂದ ನನಗೆ ಸೂಪರ್ ಖುಷಿಯಾಗಿದೆ ಎಂದವರು ಹೇಳಿದರು.