ಮೆಲ್ಬರ್ನ್: ಭಾರತದ ಸುಮಿತ್ ನಾಗಲ್ ಆಸ್ಟ್ರೇಲಿಯನ್ ಓಪನ್ ಪಂದ್ಯಾವಳಿಯ ಮೊದಲ ಸುತ್ತಿನಲ್ಲೇ ಸೋಲನುಭವಿಸಿ ನಿರ್ಗಮಿಸಿದ್ದಾರೆ. ಲಿಥುವೇನಿಯಾದ ರಿಕಾರ್ಡಸ್ ಬೆರಂಕಿಸ್ ವಿರುದ್ಧ ಸುಮಿತ್ 2-6, 5-7, 3-6 ಅಂತರದಿಂದ ಪರಾಭವಗೊಂಡರು. ಇದರೊಂದಿಗೆ ಕೂಟದಲ್ಲಿ ಭಾರತದ ಸಿಂಗಲ್ಸ್ ಸವಾಲು ಅಂತ್ಯಗೊಂಡಿದೆ.
ಆ್ಯಶ್ಲಿ ಬಾರ್ಟಿಗೆ ಸುಲಭ ಜಯ
ವನಿತಾ ಸಿಂಗಲ್ಸ್‌ನಲ್ಲಿ ಆತಿಥೇಯ ನಾಡಿದ ಆ್ಯಶ್ಲಿ ಬಾರ್ಟಿ ಕೇವಲ 44 ನಿಮಿಷಗಳಲ್ಲಿ ಡಂಕಾ ಕೊವಿನಿಕ್ ಅವರನ್ನು ಪರಾಭವಗೊಳಿಸಿ ದ್ವಿತೀಯ ಸುತ್ತು ಪ್ರವೇಶಿಸಿದರು. ಬಾರ್ಟಿ ಎದುರಾಳಿಗೆ ಒಂದೂ ಅಂಕ ಬಿಟ್ಟುಕೊಡಲಿಲ್ಲ. ಗೆಲುವಿನ ಅಂತರ 6-0, 6-0.
ಹಾಲಿ ಚಾಂಪಿಯನ್ ಸೋಫಿಯಾ ಕೆನಿನ್ 7-5, 6-4ರಿಂದ ಮ್ಯಾಡಿಸನ್ ಇಂಗ್ಲಿಸ್ ವಿರುದ್ಧ ಜಯ ಸಾಧಿಸಿದರು. ಆದರೆ ಮಾಜಿ ಚಾಂಪಿಯನ್ ವಿಕ್ಟೋರಿಯಾ ಅಜರೆಂಕಾ ಮೊದಲ ಸುತ್ತಿ ನಲ್ಲೇ ಎಡವಿದರು. ಇವರೆದುರು ಕೆಸ್ಸಿಕಾ ಪೆಗುಲಾ 7-5, 6-4 ಅಂತರದಿಂದ ಗೆದ್ದು ಬಂದರು.ಬ್ರಿಟನ್ನಿನ ಜೋಹಾನ್ನಾ ಕೊಂಟಾ ಪಂದ್ಯದ ನಡುವೆ ಗಾಯಾಳಾಗಿ ಕೂಟವನ್ನು ತ್ಯಜಿಸಿದರು.
ಇದನ್ನೂ ಓದಿ:ಇನ್ನು ವಾರದಲ್ಲಿ 4 ದಿನ ಕೆಲಸ, 3 ರಜೆ? ಕಾರ್ಮಿಕ ನಿಯಮಾವಳಿ ಬದಲಾವಣೆಗೆ ಮುಂದಾದ ಕೇಂದ್ರ
ರಫೆಲ್ ನಡಾಲ್ ಜಯ
ಪುರುಷರ ಸಿಂಗಲ್ಸ್‌ನಲ್ಲಿ ಸರ್ಬಿಯಾದ ಲಾಸ್ಲೊ ಡಿಜೆರ್ ಅವರನ್ನು 6-3, 6-4ರಿಂದ ಮಣಿಸಿದ ರಫೆಲ್ ನಡಾಲ್ ಮೊದಲ ಸುತ್ತು ದಾಟಿದರು. ರಶ್ಯದ ಎಟಿಪಿ ಕಪ್ ಹೀರೋಗಳಾದ ಡ್ಯಾನಿಲ್ ಮೆಡ್ವೆಡೇವ್, ಆ್ಯಂಡ್ರೆ ರುಬ್ಲೇವ್ ಕೂಡ ಮೊದಲ ಸುತ್ತಿನಲ್ಲಿ ಜಯ ಸಾಧಿಸಿದ್ದಾರೆ.