Advertisement

ಪ್ರಥಮ ಟೆಸ್ಟ್ : ಆಸ್ಟ್ರೇಲಿಯ ಬೃಹತ್‌ ಮೊತ್ತ

11:03 PM Dec 01, 2022 | Team Udayavani |

ಪರ್ತ್‌: ಪ್ರವಾಸಿ ವೆಸ್ಟ್‌ಇಂಡೀಸ್‌ ವಿರುದ್ಧದ ಮೊದಲ ಟೆಸ್ಟ್‌ ಪಂದ್ಯದಲ್ಲಿ ಆಸ್ಟ್ರೇಲಿಯ ತಂಡವು ಬೃಹತ್‌ ಮೊತ್ತ ಪೇರಿಸಿ ಇನ್ನಿಂಗ್ಸ್‌ ಡಿಕ್ಲೇರ್‌ ಮಾಡಿಕೊಂಡಿದೆ. ಇದಕ್ಕೆ ಉತ್ತರವಾಗಿ ವೆಸ್ಟ್‌ಇಂಡೀಸ್‌ ತಂಡವು ಎರಡನೇ ದಿನದಾಟದ ಅಂತ್ಯಕ್ಕೆ ಯಾವುದೇ ವಿಕೆಟ್‌ ನಷ್ಟವಿಲ್ಲದೇ 74 ರನ್‌ ಗಳಿಸಿದೆ.

Advertisement

ಟಾಸ್‌ ಗೆದ್ದಿರುವ ಆಸ್ಟ್ರೇಲಿಯ ತಂಡವು ಮೊದಲು ಬ್ಯಾಟಿಂಗ್‌ ನಡೆಸಲು ನಿರ್ಧರಿಸಿದೆ. ಮೊದಲ ದಿನ 2 ವಿಕೆಟಿಗೆ 293 ರನ್‌ ಗಳಿಸಿತ್ತು. ಮೊದಲ ದಿನ ಅಜೇಯರಾಗಿ ಉಳಿದಿದ್ದ ಮಾರ್ನಸ್‌ ಲಬುಸ್‌ಚಗ್ನೆ ಮತ್ತು ಸ್ಟೀವನ್‌ ಸ್ಮಿತ್‌ ಅವರು ದ್ವಿತೀಯ ದಿನ ದ್ವಿಶತಕ ಸಿಡಿಸಿ ಸಂಭ್ರಮಿಸಿದರು. ಅವರಿಬ್ಬರು 3ನೇ ವಿಕೆಟಿಗೆ 251 ರನ್ನುಗಳ ಜತೆಯಾಟದಲ್ಲಿ ಪಾಲ್ಗೊಂಡರು. ಲಬುಸ್‌ಚಗ್ನೆ 204 ರನ್‌ ಗಳಿಸಿ ಔಟಾದರು. 350 ಎಸೆತ ಎದುರಿಸಿದ್ದ ಅವರು 1 ಸಿಕ್ಸರ್‌ ಮತ್ತು 20 ಬೌಂಡರಿ ಬಾರಿಸಿದ್ದರು.

ಸಂಕ್ಷಿಪ್ತ ಸ್ಕೋರು

ಆಸ್ಟ್ರೇಲಿಯ ಪ್ರಥಮ ಇನ್ನಿಂಗ್ಸ್‌ 4 ವಿಕೆಟಿಗೆ 598 ಡಿಕ್ಲೇರ್‌ (ಉಸ್ಮಾನ್‌ ಖ್ವಾಝ 65, ಲಬುಸ್‌ಚಗ್ನೆ 204, ಸ್ಟೀವನ್‌ ಸ್ಮಿತ್‌ 200 ಔಟಾಗದೆ, ಟ್ರ್ಯಾವಿಸ್‌ ಹೆಡ್‌ 99); ವೆಸ್ಟ್‌ಇಂಡೀಸ್‌ ಪ್ರಥಮ ಇನ್ನಿಂಗ್ಸ್‌ ವಿಕೆಟ್‌ ನಷ್ಟವಿಲ್ಲದೇ 74.

Advertisement

Udayavani is now on Telegram. Click here to join our channel and stay updated with the latest news.

Next