Advertisement
ಕೊಡಗು ಜಿಲ್ಲೆಯ ಶನಿವಾರ ಸಂತೆಯ ನಂದೀಶ್ ಎಚ್.ಎನ್. ಹಾಗೂ ಆರೋಪಿತ ಪ್ರದೀಪ್ ಸಿ.ಜಿ. ಗ್ರಾನೈಟ್ ವ್ಯವಹಾರದ ಪಾಲು ದಾರರಾಗಿದ್ದರು. ನಂದೀಶ್ ಅವರನ್ನು ಕೊಲೆ ಮಾಡುವ ಉದ್ದೇಶದಿಂದ ವರಣ್ ಮತ್ತು ಕಿಶೋರ್ ಜತೆಗೂಡಿ ಜೂ. 8ರಂದು ಮುಂಜಾನೆ ಗುರುವಾಯನಕೆರೆ ಕುಲಾಲ ಮಂದಿರದ ಬಳಿ ಕಾರನ್ನು ಅತೀ ವೇಗ ಮತ್ತು ಅಜಾಗರೂಕತೆಯಿಂದ ಚಲಾಯಿಸಿ ಅಪಘಾತ ನಡೆಸಿದ್ದರು. ಇದರಿಂದ ಕಾಲಿಗೆ, ಕೈ, ತಲೆಗೆ ಗಾಯವಾಗಿತ್ತು. ಅಭಿ ಅವರ ಮೂಲಕ ಅಪಘಾತ ನಡೆಸಿದ ವಾಹನವನ್ನು ಸ್ಕ್ರ್ಯಾಫ್‌ಗೆ ನೀಡಿ ಬಿಡಿ ಭಾಗಗಳನ್ನು ಬದಲಾಯಿಸಿ ಸಾಕ್ಷ್ಯ ನಾಶ ಮಾಡಿದ್ದರು ಎನ್ನಲಾಗಿದೆ. ನಂದೀಶ್ ಅವರು ಸಂಚಾರಿ ಠಾಣೆಯಲ್ಲಿ ನೀಡಿದ ದೂರಿನಂತೆ ನ್ಯಾಯಾಲಯ ಹಾಗೂ ಬಂಟ್ವಾಳ ಡಿವೈಎಸ್‌ಪಿ ಅವರ ಆದೇಶದಂತೆ ಬೆಳ್ತಂಗಡಿ ಠಾಣೆಗೆ ವರ್ಗಾವಣೆಗೊಂಡ ಪ್ರಕರಣದ ಹಿನ್ನೆಲೆಯಲ್ಲಿ ಆರೋಪಿಗಳನ್ನು ಬಂಧಿಸಲಾಗಿದೆ.
ಈ ಪ್ರಕರಣಕ್ಕೆ ಸಂಬಂಧಪಟ್ಟ ಆರೋಪಿಗಳನ್ನು ಜು. 16ರಂದು ಬಂಧಿಸಲಾಗಿತ್ತು. ಬಂಧಿತ ಆರೋಪಿಗಳನ್ನು ಈಗಿನ ನಿಯಮದಂತೆ ಗಂಟಲು ದ್ರವ ಪರೀಕ್ಷೆ ಮಾಡಲಾಗಿತ್ತು. ಬಂಧಿತ 4 ಮಂದಿ ಆರೋಪಿಗಳಲ್ಲಿ 3 ಮಂದಿಗೆ ಕೋವಿಡ್-19 ಸೋಂಕು ದೃಢಪಟ್ಟಿದೆ.