Advertisement

ಮಾಬುಕಳ : ಎಟಿಎಂ ದರೋಡೆಗೆ ಯತ್ನ

12:47 PM Aug 13, 2021 | Team Udayavani |

ಕೋಟ : ಸಾಸ್ತಾನ ಸಮೀಪದ ಮಾಬುಕಳದಲ್ಲಿರುವ ಕೆನರಾ ಬ್ಯಾಂಕ್ ಎ.ಟಿ.ಎಂ.ನಿಂದ ಹಣ ದರೋಡೆಗೆ ಯತ್ನಿಸಿದ ಘಟನೆ ಗುರುವಾರ ರಾತ್ರಿ ಸಂಭವಿಸಿದೆ.

Advertisement

ಎ.ಟಿ.ಎಂ. ರಾತ್ರಿ ಕೂಡ ತೆರೆದಿದ್ದು ಸಿ.ಸಿ. ಟಿವಿಯ ವೈಯರ್ ಕಡಿತಗೊಳಿಸಿ ಒಳನುಗ್ಗಿದ ದುಷ್ಕರ್ಮಿಗಳು ಯಂತ್ರವನ್ನು  ಒಡೆದು ಹಣದೋಚಲು ಯತ್ನಿಸಿದ್ದಾರೆ ಹಾಗೂ ಒಳಗಡೆ ಇದ್ದ ಎ.ಸಿ.ಯನ್ನು ಕದ್ದೊಯ್ಯಲು ವಿಫಲ ಯತ್ನ ನಡೆಸಿದ್ದಾರೆ.

ಗ್ರಾಹಕರೋರ್ವರು ಇಂದು(ಶುಕ್ರವಾರ, ಆಗಸ್ಟ್ 13)  ಬೆಳಗ್ಗೆ ಹಣ ನಗದೀಕರಿಸಲು ಬಂದಾಗ ಘಟನೆ ಬೆಳಕಿಗೆ ಬಂದಿದ್ದು,  ತತ್‍ ಕ್ಷಣ ಕೋಟ ಪೊಲೀಸ್ ಠಾಣೆಗೆ ವಿಷಯ ತಿಳಿಸಲಾಯಿತು.  ಇದೀಗ  ಹೆಚ್ಚಿನ ತನಿಖೆ ನಡೆಯುತ್ತಿದ್ದು, ಯಂತ್ರದಲ್ಲಿ ಠೇವಣಿ ಮಾಡಲಾದ ಹಣ ಹಾಗೂ ನಗದೀಕರಿಸಲ್ಪಟ್ಟ ಹಣದ ಲೆಕ್ಕಚಾರ ನಡೆಯುತ್ತಿದ್ದು  ಕಳವಾದ ಬಗ್ಗೆ ಸ್ಪಷ್ಟ ಮಾಹಿತಿ ಇನ್ನಷ್ಟೇ ತಿಳಿದುಬರಬೇಕಿದೆ.

ಇದನ್ನೂ ಓದಿ : ನಾನು ಅಂಗಾಂಗ ದಾನಕ್ಕೆ ಸಹಿ ಹಾಕುತ್ತಿದ್ದೇನೆ, ಇತರರಿಗೂ ಕರೆ ಕೊಡುತ್ತೇನೆ: ಸಿಎಂ ಬೊಮ್ಮಾಯಿ

ಎ.ಟಿ.ಎಂ.ಗೆ  ಭದ್ರತಾ ಸಿಬಂದಿ ನೇಮಿಸದಿರುವ ಕಾರಣ ದುಷ್ಕರ್ಮಿಗಳಿಗೆ ಕೃತ್ಯವೆಸಗಲು ಸಹಕಾರಿಯಾಗಿದೆ.

Advertisement

ಉಡುಪಿ ಎ.ಎಸ್.ಪಿ. ಸುಧಾಕರ್ ನಾಯಕ್, ಬ್ರಹ್ಮಾವರ ವೃತನಿರೀಕ್ಷಕ ಆನಂತಪದ್ಮನಾಭ, ಕೋಟ ಠಾಣಾ ಉಪನಿರೀಕ್ಷಕ ಸಂತೋಷ್ ಬಿ.ಪಿ. ಬ್ರಹ್ಮಾವರ ಠಾಣೆ ಉಪನಿರೀಕ್ಷಕ ಗುರುನಾಥ ಹಾದಿಮನೆ ಹಾಗೂ ಸಿಬಂದಿಗಳು,  ಬೆರಳಚ್ಚು ತಂಡದವರು ಸ್ಥಳಕ್ಕಾಗಮಿಸಿ  ಪರಿಶೀಲನೆ ನಡೆಸಿದ್ದಾರೆ.

ಬ್ಯಾಂಕ್‌ ಸೀನಿಯರ್ ಮ್ಯಾನೇಜರ್ ಮನೋಜ್ ಕಾಮತ್, ಎ.ಜಿ.ಎಂ. ಜಗದೀಶ್ ಶೆಣೈ, ಶಾಖಾ ಪ್ರಬಂಧಕಿ ಶಿಲ್ಪಾ ಅವರು ಸ್ಥಳಕ್ಕಾಗಮಿಸಿ ಪೊಲೀಸರಿಗೆ ಅಗತ್ಯ  ಮಾಹಿತಿ ನೀಡಿದ್ದಾರೆ.

ಇದನ್ನೂ ಓದಿ : ರಾಮನ ತೇಜಸ್ಸು-ರಾವಣನ ವರ್ಚಸ್ಸು!: ಲಂಕೆ ಬಗ್ಗೆ ನಿರ್ದೇಶಕ ರಾಮ್‌ ಪ್ರಸಾದ್‌ ಮಾತು

Advertisement

Udayavani is now on Telegram. Click here to join our channel and stay updated with the latest news.

Next