Advertisement

Kasaragod: ಎಟಿಎಂಗೆ ತುಂಬಿಸಲು ತಂದ 50 ಲಕ್ಷ ರೂ. ಕಳವು ಮಾಡಿದ ಸೂತ್ರಧಾರನ ಬಂಧನ

10:05 PM Dec 27, 2024 | Team Udayavani |

ಕಾಸರಗೋಡು: ಎಟಿಎಂಗೆ ತುಂಬಿಸಲು ತಂದ 50 ಲಕ್ಷ ರೂ.ಗಳಿದ್ದ ವಾಹನಕ್ಕೆ ಹಾನಿಗೈದು ಕಳವು ಮಾಡಿದ ಪ್ರಕರಣಕ್ಕೆ ಸಂಬಂಧಿಸಿದಂತೆ ಸೂತ್ರಧಾರ ತಮಿಳುನಾಡಿನ ರಾಂಜೀ ನಗರದ ತಿರುಟ್ಟು ಗ್ರಾಮದ ಕಾರ್‌ವಾರ್ನರ್‌(28)ನನ್ನು ಮಂಜೇಶ್ವರ ಪೊಲೀಸರು ಬಂಧಿಸಿದ್ದಾರೆ.

Advertisement

ಉಪ್ಪಳದಲ್ಲಿ ರಸ್ತೆ ಬದಿಯ ಎಟಿಎಂಗೆ ಹಣ ತುಂಬಿಸಲು ತಂದ 50 ಲಕ್ಷ ರೂ. ಗಳಿದ್ದ ಸೆಕ್ಯೂರ್‌ ವಾಲ್ಯೂಂ ಕಂಪೆನಿಯ ವಾಹನಕ್ಕೆ ಹಾನಿಗೈದು ಕಳವು ಮಾಡಲಾಗಿತ್ತು. ಮಾರ್ಚ್‌ ತಿಂಗಳಲ್ಲಿ ಮೂವರ ತಂಡ ಈ ಕೃತ್ಯ ಎಸಗಿತ್ತು. ಈ ಘಟನೆಗೆ ಸಂಬಂಧಿಸಿ ಮುತ್ತು ಕುಮಾರ್‌ನನ್ನು ಈ ಹಿಂದೆ ಬಂಧಿಸಲಾಗಿತ್ತು. ಈ ವಿವರ ಲಭಿಸಿದ ಹಿನ್ನೆಲೆಯಲ್ಲಿ ಆರೋಪಿಗಳಿಬ್ಬರು ತಲೆಮರೆಸಿಕೊಂಡಿದ್ದರು.

Advertisement

Udayavani is now on Telegram. Click here to join our channel and stay updated with the latest news.

Next