Advertisement
ಹೌದು, ಇದು ಮುಂಡಗೋಡ ತಾಲೂಕಿನ ಚವಡಳ್ಳಿ ಗ್ರಾಪಂ ವ್ಯಾಪ್ತಿಯ ಲಕ್ಕೊಳ್ಳಿ ಗ್ರಾಮದ ಎನ್.ಎಸ್. ಸಿಮಿ ಅವರು ರಾಷ್ಟ್ರಮಟ್ಟದಲ್ಲಿ ಮಿಂಚುತ್ತಿದ್ದಾರೆ.
Related Articles
Advertisement
2021ರ ಸೆ.15 ರಂದು ತೆಲಂಗಾಣದಲ್ಲಿ ನಡೆದ ನ್ಯಾಷನಲ್ ಓಪನ್ ಅಥ್ಲೆಟಿಕ್ಸ್ ಚಾಂಪಿಯನ್‌ಶಿಪ್‌ನಲ್ಲಿ ಬೆಂಗಳೂರಿನ ಮೆಜೆಸ್ಟಿಕ್ ರೈಲ್ವೇಸ್ ಪರವಾಗಿ ಸಿಮಿ ಅವರು ಭಾಗಿಯಾಗಿ 100 ಮೀಟರ್ ಓಟದ ಸ್ಫರ್ಧೇಯಲ್ಲಿ ತೃತೀಯ ಸ್ಥಾನ ಮತ್ತು ರಿಲೇಯಲ್ಲಿ ಭಾಗಿಯಾಗಿ ಪ್ರಥಮ ಸ್ಥಾನ ಪಡೆಯುವಲ್ಲಿ ಇವರು ಪ್ರಮುಖ ಪಾತ್ರ ವಹಿಸಿ ರಾಜ್ಯ ಜಿಲ್ಲೆಯ ಮತ್ತು ತಾಲೂಕಿನ ಕೀರ್ತಿ ಪತಾಕೆ ಹಾರಿಸಿದ್ದಾರೆ. ಈಗಾಗಲೇ ತಾಲೂಕಿನ ವಿವಿಧ ಸಂಘ ಸಂಸ್ಥೆಯವರು ಸಿಮಿಯವರ ಸಾಧನೆಯನ್ನು ಗುರುತಿಸಿ ಸನ್ಮಾನಿಸಿ ಪ್ರೋತ್ಸಾಹ ನೀಡುತ್ತಿದ್ದಾರೆ.
ಇದನ್ನೂ ಓದಿ:ಆರೋಗ್ಯ ಸಮಸ್ಯೆ ಹೇಳಿಕೊಂಡ “ಉಲ್ಲಾಸ ಉತ್ಸಾಹ” ನಟಿ ಯಾಮಿ
ಎನ್.ವಿ.ಸಾಮ್ಯುವೆಲ್ ಸಿಮಿ ತಂದೆ: ನಾನು ಒಬ್ಬ ಮಾಜಿ ಕ್ರೀಡಾಪಟು. ನನಗೆ ಮೂವರು ಹೆಣ್ಣು ಮಕ್ಕಳು. ನಾನು, ನಮ್ಮ ಹೆಣ್ಣು ಮಕ್ಕಳು ಸ್ಪೋರ್ಟ್ಸ್ ನಲ್ಲಿ ಏನು ಮಾಡುತ್ತಾರೆ ಎಂದು ತಿಳಿದಿದ್ದೆ. ಬಾಲ್ಯದಲ್ಲಿ ಒಂದು ಬಾರಿ ತಾಲೂಕು ಮಟ್ಟದ ಕ್ರೀಡಾ ಸ್ಪರ್ಧೆಯಲ್ಲಿ ನಾನು ಆಯ್ಕೆಯಾಗಿದ್ದೇನೆ ಎಂದು ಸಿಮಿ ಕರೆದಳು. ಅಂದರಂತೆ ನಾನು ಹೋಗಿ ನೋಡಿದಾಗ 100 ಮೀಟರ್ ಓಟದ ಸ್ಪರ್ಧೆಯಲ್ಲಿ ಅವಳ ಓಟವನ್ನು ನೋಡಿ ಮುಂದೊಂದು ದಿನ ನನ್ನ ಮಗಳು ಏನಾದರೂ ಸಾಧನೆ ಮಾಡುತ್ತಾಳೆ ಎಂದು ತಿಳಿದೆ. ಅಂದಿನಿಂದ ಇಂದಿನವರೆಗೆ ಅವಳಿಗೆ ಬೆನ್ನಲುಬಾಗಿ ನಿಂತು ಪ್ರೋತ್ಸಾಹ ನೀಡುತ್ತಿದ್ದೇನೆ. ಬಡತನದ ಪರಿಸ್ಥಿತಿಯಲ್ಲೂ ಕಷ್ಟಪಟ್ಟು ಚಿಕ್ಕ ಹಿಡುವಳಿದಾರನಾಗಿ ಕೃಷಿ ಕೂಲಿ ಮಾಡಿ ಸಿಮಿಯ ಆಸೆಗೆ ನೀರೆರೆಯುತ್ತಾ ಬಂದಿದ್ದೇನೆ. ಅವಳು ಗುರಿ ತಲುಪುವರೆಗೂ ನಾನು ಪ್ರೋತ್ಸಾಹ ನೀಡುತ್ತೇನೆ.
ಎನ್.ಎಸ್. ಸಿಮಿ ಅಥ್ಲೆಟಿಕ್ಸ್ ಕ್ರೀಡಾಪಟು : ಮುಂದಿನ ಏಷ್ಯನ್ ಗೇಮ್ಸ್ ಕಾಮನ್‍ವೆಲ್ತ್ ಕೂಟ ಇದ್ದು, ಇಂಡಿಯನ್ ತಂಡದ ಪರವಾಗಿ ಅಹ೯ತೆ ಪಡೆಯುವ ತರಬೇತಿಗೆ ಆಯ್ಕೆಯಾಗಿದ್ದೇನೆ. ಅದಕ್ಕಾಗಿ ಪಂಜಾಬ್ ಗೆ ತೆರೆಳುತ್ತಿದ್ದಾರೆ….. ಈಗ ಮಾಡಿರುವ ಸಾಧನೆ ಏನೂ ಅಲ್ಲ. ಅಂತಾರಾಷ್ಟ್ರ ಮಟ್ಟದಲ್ಲಿ ಸಾಧನೆ ಮಾಡಬೇಕಿದೆ. ಅವಳು, ಹುಡುಗಿ ಸ್ಪೋರ್ಟ್ಸ್ ನಲ್ಲಿ ಏನು ಮಾಡುತ್ತಾಳೆ ಅವಳನ್ನು ಓದಿಸಿ ಮದುವೆ ಮಾಡಿಸು ಎಂದು ಅನೇಕರು ನಮ್ಮ ತಂದೆ ಮತ್ತು ಫ್ಯಾಮಿಲಿ ಮುಂದೆ ಹೇಳುತ್ತಿದ್ದರು. ಸ್ಪೋರ್ಟ್ಸ್ ಅಂದರೆ ಕೆಲ ಜನರು ಕೀಳಾಗಿ ನೋಡುತ್ತಾರೆ. ಆದರೆ ನನ್ನ ತಂದೆ ಬಾಲ್ಯದಿಂದಲೂ ನನಗೆ ಸಂಪೂರ್ಣ ಬೆಂಬಲ ನೀಡಿ ಈ ಹಂತಕ್ಕೆ ತಂದಿದ್ದಾರೆ.
ಸಿಮಿಯವರು ನಾಲ್ಕು ಬಾರಿ ಕರ್ನಾಟಕ ಚಾಂಪಿಯನ್ ಆಗಿ ಹೊರಹೊಮ್ಮಿದ್ದಾರೆ. ಅಥ್ಲೆಟಿಕ್ಸ್ ನಲ್ಲಿ ಅವರು ಒಟ್ಟು 61 ಬಂಗಾರ, 25 ಬೆಳ್ಳಿ ಹಾಗೂ 15 ಕಂಚಿನ ಪದಕಗಳು ದೊರೆತಿವೆ. ಇವರ ಸಾಧನೆಯನ್ನು ಗುರುತಿಸಿ 2009ರಲ್ಲಿ ಟ್ಯಾಲೆಂಟ್ ಕೋಟಾದಲ್ಲಿ ಬೆಂಗಳೂರಿನ ಮೆಜೆಸ್ಟಿಕ್ ರೈಲು ನಿಲ್ದಾಣದಲ್ಲಿ ಕ್ಲರ್ಕ್ ಹುದ್ದೆಯನ್ನು ನೀಡಿದ್ದಾರೆ.
ಮುನೇಶ ತಳವಾರ