Advertisement

ಶೂನ್ಯ ಗುರುತ್ವದಲ್ಲಿ ಇಟಲಿ ವಿಜ್ಞಾನಿ ಗೊಂಬೆ!

07:29 PM Oct 04, 2021 | Team Udayavani |

ರೋಮ್‌: ಇಟಲಿಯ ಮಹಿಳಾ ಖಗೋಳ ವಿಜ್ಞಾನಿಯಾದ ಸಮಂತಾ ಕ್ರಿಸ್ಟೋಫೆರೆಟಿ ಅವರ ಪ್ರತಿಕೃತಿಯಾದ ಬಾರ್ಬಿ ಗೊಂಬೆಯೊಂದನ್ನು ಸೋಮವಾರ, ಶೂನ್ಯ ಗುರುತ್ವಾಕರ್ಷಣ ಆಕಾಶಕಾಯದಲ್ಲಿ ಇರಿಸಿ ಬಾಹ್ಯಾಕಾಶಕ್ಕೆ ಕಳುಹಿಸಲಾಗಿದೆ.

Advertisement

ಈ ಮೂಲಕ, ಜಗತ್ತಿನ ಯುವತಿಯನ್ನು ವಿಜ್ಞಾನ, ತಂತ್ರಜ್ಞಾನ, ಗಣಿತ ಮತ್ತು ಇಂಜಿನಿಯರಿಂಗ್‌ (ಸ್ಟೆಮ್‌) ವಿಷಯಗಳತ್ತ ಸೆಳೆಯುವ ಉದ್ದೇಶವನ್ನು ವಿಜ್ಞಾನಿಗಳು ಹೊಂದಿದ್ದಾರೆ.

ಅಸಲಿಗೆ, ಅ. 4ರಿಂದ 10ರವರೆಗೆ ಜಗತ್ತಿನಾದ್ಯಂತ “ವಿಶ್ವ ಬಾಹ್ಯಾಕಾಶ ಸಪ್ತಾಹ’ವನ್ನಾಗಿ ಆಚರಿಸಲಾಗುತ್ತಿದೆ. ಈ ಬಾರಿಯ ಈ ಸಪ್ತಾಹವನ್ನು ಮಹಿಳಾ ವಿಶೇಷವಾಗಿಯೂ ಆಚರಿಸಲು ನಿರ್ಧರಿಸಲಾಗಿದೆ. ಈ ಹಿನ್ನೆಲೆಯಲ್ಲಿ, ಇಟಲಿಯ ಖ್ಯಾತ ಗೊಂಬೆ ತಯಾರಿಕಾ ಸಂಸ್ಥೆಯಾದ ಮ್ಯಾಟೆಲ್‌ ಇಂಕ್‌ ಕಂಪನಿ, ಯೂರೋಪಿಯನ್‌ ಸ್ಪೇಸ್‌ ಏಜೆನ್ಸಿ (ಇಎಸ್‌ಎ) ಹಾಗೂ ಸಮಂತಾ ಜೊತೆಗೆ ಒಪ್ಪಂದ ಮಾಡಿಕೊಂಡು ಯುವತಿಯನ್ನು ಬಾಹ್ಯಾಕಾಶ ವಿಜ್ಞಾನದೆಡೆಗೆ ಆಕರ್ಷಿಸುವ ಸಲುವಾಗಿ ಸಮಂತಾರ ಪ್ರತಿಕೃತಿ ಗೊಂಬೆಯನ್ನು ಬಾರ್ಬಿ ಸ್ವರೂಪದಲ್ಲಿ ಸೃಷ್ಟಿಸಿ, ಅದನ್ನು ಶೂನ್ಯ ಗುರುತ್ವಾಕರ್ಷಣ ಆಕಾಶಕಾಯಕ್ಕೆ ಕಳುಹಿಸಲಾಗಿದೆ.

ಇದನ್ನೂ ಓದಿ :ಕೋವಿಡ್: ರಾಜ್ಯದಲ್ಲಿಂದು 397 ಹೊಸ ಪ್ರಕರಣ ಪತ್ತೆ | 693 ಸೋಂಕಿತರು ಗುಣಮುಖ

Advertisement

Udayavani is now on Telegram. Click here to join our channel and stay updated with the latest news.

Next