Advertisement

Kasaragod: ಮಾರ್ಬಲ್‌ ಅಂಟಿಸಲು ಬಳಸುವ ಗಮ್‌ ಮುಖದ ಮೇಲೆ ಬಿದ್ದು ಮಗುವಿನ ಸಾವು

11:42 PM Dec 06, 2024 | Team Udayavani |

ಕಾಸರಗೋಡು: ಮಾರ್ಬಲ್‌ ಅಂಟಿಸಲು ಬಳಸುವ ಗಮ್‌ ಮುಖದ ಮೇಲೆ ಬಿದ್ದು ಮೂರು ತಿಂಗಳ ಗಂಡು ಮಗು ಸಾವಿಗೀಡಾದ ಘಟನೆ ಚೆರ್ವತ್ತೂರಿನಲ್ಲಿ ನಡೆದಿದೆ.

Advertisement

ಚೆರ್ವತ್ತೂರು ರೈಲು ನಿಲ್ದಾಣ ಸಮೀಪದ ಯೂನಿಟ್‌ ಆಸ್ಪತ್ರೆ ಪರಿಸರದಲ್ಲಿ ಬಾಡಿಗೆ ಮನೆಯಲ್ಲಿ ವಾಸಿಸುತ್ತಿರುವ ರಾಜಸ್ತಾನ ನಿವಾಸಿ ದರಂ ಸಿಂಗ್‌ ಅವರ ಮಗು ಸಾವಿಗೀಡಾಯಿತು.

ಮನೆಯಲ್ಲಿ ತಂದಿರಿಸಿದ ಗಮ್‌ ಬಾಟ್ಲಿ ಹಿಡಿದುಕೊಂಡು ಆಟ ಆಡುತ್ತಿದ್ದ ಮಗುವಿನ ಮುಖದ ಮೇಲೆ ಗಮ್‌ ಬಿದ್ದು ಉಸಿರಾಟಕ್ಕೆ ತೊಂದರೆಯಾಗುತ್ತಿದ್ದಾಗ ಪರಿಯಾರಂ ವೈದ್ಯಕೀಯ ಕಾಲೇಜು ಆಸ್ಪತ್ರೆಗೆ ಸಾಗಿಸಿ ಚಿಕಿತ್ಸೆ ನೀಡಿದರೂ ರಕ್ಷಿಸಲು ಸಾಧ್ಯವಾಗಲಿಲ್ಲ, ಚಂದೇರ ಪೊಲೀಸರು ಪ್ರಕರಣ ದಾಖಲಿಸಿಕೊಂಡಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next