Advertisement

Assembly Session: ಉದ್ಘಾಟನೆಗೊಂಡ ವಿಧಾನಸೌಧ ಪಶ್ಚಿಮದ್ವಾರ

01:10 AM Jul 16, 2024 | Team Udayavani |

ಬೆಂಗಳೂರು: ವಿಧಾನಸೌಧದ ಪಶ್ಚಿಮ ದ್ವಾರ ಕೊನೆಗೂ ಸಿಂಗಾರಗೊಂಡಿದ್ದು, ಕಬ್ಬಿಣದ ಗೇಟ್‌ ಬದಲು ರೋಸ್‌ವುಡ್‌ನಿಂದ ತಯಾರಿಸಿದ ಬಾಗಿಲನ್ನು ಅಳವಡಿಸಲಾಗಿದೆ.

Advertisement

ವಿಧಾನಸೌಧ ಸ್ಥಾಪನೆಗೊಂಡ ಅನಂತರ ಮೊದಲ ಬಾರಿಗೆ ಈ ರೀತಿ ನವೀಕರಿಸಲಾಗಿದೆ. ಅದೇ ರೀತಿ ಶಾಸಕರ ಹಾಜರಿ ಲೆಕ್ಕ ಹಾಕುವುದಕ್ಕೆ ವಿಧಾನಸಭೆಯ 3 ಬಾಗಿಲುಗಳಲ್ಲಿ ಎಐ ತಂತ್ರಜ್ಞಾನ ಆಧಾರಿತ ಕೆಮರಾವನ್ನೂ ಅಳವಡಿಸಲಾಗಿದೆ.

ಈ ದ್ವಾರವನ್ನು ಸಿದ್ದರಾಮಯ್ಯ ಉದ್ಘಾಟಿಸಿ, ಖಾದರ್‌ ಕ್ರಮವನ್ನು ಶ್ಲಾ ಸಿದರು. ವಿಪಕ್ಷ ನಾಯಕ ಆರ್‌. ಅಶೋಕ್‌, ಮಾಜಿ ಡಿಸಿಎಂ ಡಾ| ಸಿ.ಎನ್‌. ಅಶ್ವತ್ಥನಾರಾಯಣ ಅಭಿನಂದಿಸಿದರು. ಜತೆಗೆ ವಿಧಾನಸಭೆಯಲ್ಲಿ ಗಂಡಬೇರುಂಡ ಲಾಂಛನ ಇರುವ 4 ಗಡಿಯಾರಗಳನ್ನು ಅಳವಡಿಸಲಾಗಿದ್ದು, ಮಹಾದ್ವಾರದಲ್ಲಿ ಸಂವಿಧಾನದ ಪೂರ್ವಪೀಠಿಕೆಯನ್ನು ಹಾಕಲಾಗಿದೆ.

ಕೆಮರಾದಲ್ಲಿ ಸೆರೆ
ಸದನಕ್ಕೆ ಬರುವ ಪ್ರತಿಯೊಬ್ಬರೂ ಹಾಜರಿ ಪುಸ್ತಕಕ್ಕೆ ಸಹಿ ಹಾಕುವ ಬದಲು ಬಾಗಿಲಲ್ಲಿರುವ ಎಐ ಕೆಮರಾದ ಮುಂದೆ ನಿಲ್ಲಬೇಕು. ಕೆಮರಾ ಅವರ ಭಾವಚಿತ್ರ ತೆಗೆದುಕೊಳ್ಳುವುದರ ಜತೆಗೆ ಯಾವಾಗ ಬಂದರು? ಎಷ್ಟು ಹೊತ್ತಿಗೆ ಹೊರಗೆ ಹೋದರು? ಒಟ್ಟು ಎಷ್ಟು ಸಮಯ ಸದನದಲ್ಲಿದ್ದರು? ಎಷ್ಟು ಬಾರಿ ಹೊರ ಹೋದರು? ಎಂಬ ಮಾಹಿತಿಯನ್ನು ನೀಡುತ್ತದೆ. ಈ ಡೇಟಾ ವಿಧಾನಸಭೆಯ ಕಾರ್ಯದರ್ಶಿ ಕಚೇರಿ ಸಿಬ್ಬಂದಿ ಗಮನಿಸುತ್ತಾರೆ.

ರೂಪಕಲಾ ಮೊದಲಿಗರು
ಕೆಜಿಎಫ್ ಶಾಸಕಿ ರೂಪಕಲಾ ಬೆಳಗ್ಗೆ 9.50ಕ್ಕೆ ವಿಧಾನಸಭೆಗೆ ಪ್ರವೇಶಿಸಿದ ಮೊದಲಿಗರಾದರೆ, ತಿಪಟೂರು ಕ್ಷೇತ್ರದ ಕಾಂಗ್ರೆಸ್‌ ಶಾಸಕ ಷಡಕ್ಷರಿ 10.20ಕ್ಕೆ ಸದನದಿಂದ ಹೊರಗೆ ಹೋಗಿ ಮತ್ತೆ ಬಂದರು. ಇವರಿಬ್ಬರ ಹೆಸರನ್ನು ಸ್ಪೀಕರ್‌ ಸದನದಲ್ಲೇ ಘೋಷಿಸಿದರು.

Advertisement
Advertisement

Udayavani is now on Telegram. Click here to join our channel and stay updated with the latest news.

Next