Advertisement
ಬೇಲೆಕೇರಿ ಅದಿರು ನಾಪತ್ತೆ ಪ್ರಕರಣ ಸೇರಿ ವಿವಿಧ ಅಪರಾಧಗಳು ಸಾಬೀತಾದ ಹಿನ್ನೆಲೆಯಲ್ಲಿ ಕಾರವಾರ ಕಾಂಗ್ರೆಸ್ ಶಾಸಕ ಸತೀಶ್ ಸೈಲ್‌ಗೆ ಶನಿವಾರವೇ ನ್ಯಾಯಾಲಯದಿಂದ ಶಿಕ್ಷೆ ಪ್ರಕಟವಾಗಿತ್ತು. ಆ ಕ್ಷಣದಿಂದಲೇ ಅವರ ಶಾಸಕ ಸ್ಥಾನವನ್ನು ವಿಧಾನಸಭಾಧ್ಯಕ್ಷ ಯು.ಟಿ. ಖಾದರ್ ಅನರ್ಹಗೊಳಿಸಿ ಅಧಿಸೂಚಿಸಬೇಕಿದ್ದು, ಅದಕ್ಕೆ ನ್ಯಾಯಾಲಯದಿಂದ ಶಿಕ್ಷೆ ಪ್ರಕಟವಾಗಿರುವ ಬಗ್ಗೆ ಪ್ರಮಾಣೀಕೃತ ಪ್ರತಿ ತಲುಪಬೇಕು. ಆದರೆ ಈ ವರೆಗೆ ಕೋರ್ಟ್ ಕಾಪಿ ತಲುಪಿಲ್ಲ.ಲೋಕಸಭೆ ಅಧಿಕಾರಿಗಳ ಮೊರೆ ಹೋಗುವ ಸಾಧ್ಯತೆ?
ಸೋಮವಾರ ಸ್ಪೀಕರ್ ಕಚೇರಿಯನ್ನು ಖುದ್ದು ಸಂಪರ್ಕಿಸಿರುವ ಸಂಬಂಧಿಸಿದ ಠಾಣೆಯ ಪೊಲೀಸ್ ಅಧಿಕಾರಿಗಳು, ನ್ಯಾಯಾಲಯದಿಂದ ಶಿಕ್ಷೆ ಪ್ರಕಟವಾಗಿರುವ ಮಾಹಿತಿ ನೀಡಿದ್ದಾರೆ. ಪ್ರಮಾಣೀಕೃತ ಪ್ರತಿಗಾಗಿ ಸ್ಪೀಕರ್ ಕಚೇರಿ ಕಾಯುತ್ತಿದ್ದು, ಜನಪ್ರತಿನಿಧಿಗಳ ಕಾಯ್ದೆ ಅನ್ವಯ ಕ್ರಮ ಜರುಗಿಸಬೇಕಿರುವುದರಿಂದ ಲೋಕಸಭೆ ಕಾರ್ಯದರ್ಶಿ ಸೇರಿ ವಿವಿಧ ಮಟ್ಟದ ಅಧಿಕಾರಿಗಳನ್ನು ಸಂಪರ್ಕಿಸಿ ಮಾರ್ಗದರ್ಶನ ಪಡೆಯಲು ರಾಜ್ಯ ವಿಧಾನಸಭೆ ಅಧಿಕಾರಿಗಳು ಚಿಂತನೆ ನಡೆಸಿದ್ದಾರೆ.