Advertisement
ಹೀಗಾಗಿ ನದಿಗಳ ಸಿಹಿ ನೀರು ನೇರವಾಗಿ ಸಮುದ್ರ ಸೇರುತ್ತಿವೆ. ಸಿಹಿ ನೀರಿಗೆ ಉಪ್ಪು ನೀರು ಬೆರೆಯುವುದರಿಂದ ಅಂತರ್ಜಲವು ಉಪ್ಪಾಗುತ್ತದೆ. ಇದರಿಂದ ಸಮೀಪದ ಮನೆಗಳ ಬಾವಿ ನೀರಿನ ಮೇಲೂ ಪರಿಣಾಮ ಬೀರುತ್ತದೆ. ಕೃಷಿಗೂ ಸಮಸ್ಯೆಯಾಗುತ್ತಿದೆ. ಆದ್ದರಿಂದ ತತ್ಕ್ಷಣವೇ ಹಲಗೆ ಅಳವಡಿಸಬೇಕು ಎಂಬ ಆಗ್ರಹ ಕೇಳಿ ಬರುತ್ತಿದೆ.
ತೆಗೆಯುವುದೇ ಪ್ರಧಾನ
ಮಳೆಗಾಲ ಆರಂಭಕ್ಕೂ ಮೊದಲು ಅಥವಾ ಮಳೆಗಾಲ ಆರಂಭವಾಗುತ್ತಿದ್ದಂತೆ ಕಿಂಡಿ ಅಣೆಕಟ್ಟುಗಳಿಗೆ ಅಳವಡಿಸಿರುವ ಹಲಗೆಗಳನ್ನು ತೆಗೆಯಬೇಕು. ಮಳೆಗಾಲದಲ್ಲಿ ನೀರು ಅಡೆತಡೆ ಇಲ್ಲದೆ ಸರಾಗವಾಗಿ ಹರಿಯಬೇಕು. ಹಲಗೆ ತೆಗೆಯದಿದ್ದರೆ ನದಿ, ಕಾಲುವೆಯ ಅಚ್ಚುಕಟ್ಟಿನಲ್ಲಿ ಕೃತಕ ನೆರೆಯಾಗುವ ಭೀತಿ ಇರುತ್ತದೆ. ಹಾಗೆಯೇ ಮಳೆಗಾಲ ಮುಗಿಯುತ್ತಿದ್ದಂತೆ ಹಲಗೆ ಅಳವಡಿಸಬೇಕು. ಹಲಗೆ ಅಳವಡಿಸದಿದ್ದರೆ ನದಿಯ ನೀರು ಸಮುದ್ರದ ಉಪ್ಪು ನೀರಿಗೆ ಸೇರುತ್ತದೆ. ಕೃಷಿ ಚಟುವಟಿಕೆಗಳಿಗೆ ಬಳಸಲು ಬರುವುದಿಲ್ಲ. ಹೀಗಾಗಿ ಮಳೆ ಮುಗಿಯುತ್ತಿದ್ದಂತೆ ಹಲಗೆ ಅಳವಡಿಸಲಾಗುತ್ತದೆ. ಈ ಬಾರಿ ಮಾತ್ರ ಇನ್ನೂ ಯಾವುದೇ ಕಿಂಡಿ ಅಣೆಕಟ್ಟಿಗೂ ಹಲಗೆ ಅಳವಡಿಸಿಲ್ಲ.
Related Articles
Advertisement
ಫೈಬರ್ ಹಲಗೆಹೊಸದಾಗಿ ನಿರ್ಮಿಸುತ್ತಿರುವ ಕಿಂಡಿ ಅಣೆಕಟ್ಟುಗಳಿಗೆ ಫೈಬರ್ ಹಲಗೆಗಳನ್ನು ಅಳವಡಿಸಲಾಗುತ್ತಿದೆ. ಇದು ದೀರ್ಘಕಾಲ ಬಾಳಿಕೆ ಬರುವ ಜತೆಗೆ ಅಳವಡಿಸುವುದು ಮತ್ತು ತೆಗೆಯುವುದು ಸುಲಭವಾಗುತ್ತದೆ. ನೀರಿನ ಸೋರಿಕೆ ಕೂಡ ಇದರಲ್ಲಿ ಕಡಿಮೆ ಇರುತ್ತದೆ. ಮರದ ಹಲಗೆ ಹಾಕುವ ಕಡೆಗಳಲ್ಲಿ ಸೋರಿಕೆ ಹೆಚ್ಚಿರುತ್ತದೆ. ನಿರ್ವಹಣೆಯೇ ಇಲ್ಲ
ಕಿಂಡಿ ಅಣೆಕಟ್ಟಿನ ನಿರ್ವಹಣೆ ಅತಿ ಮುಖ್ಯ. ಆದರೆ ಉಭಯ ಜಿಲ್ಲೆಯಲ್ಲಿ ಕಿಂಡಿ ಅಣೆಕಟ್ಟುಗಳ ನಿರ್ವಹಣೆಯೇ ಇಲ್ಲದಾಗಿದೆ. ಮುಖ್ಯವಾಗಿ ಸಣ್ಣ ನೀರಾವರಿ ಇಲಾಖೆಯಿಂದ ಕಿಂಡಿ ಅಣೆಕಟ್ಟು ನಿರ್ಮಿಸಲಾಗುತ್ತದೆ. ಉಡುಪಿ ಜಿಲ್ಲೆಯಲ್ಲಿ ಸುಮಾರು 660 ಹಾಗೂ ದ.ಕ. ಜಿಲ್ಲೆಯಲ್ಲಿ 600ಕ್ಕೂ ಅಧಿಕ ಕಿಂಡಿ ಅಣೆಕಟ್ಟುಗಳಿವೆ. ಎಲ್ಲಿಯೂ ನಿರ್ವಹಣೆಗೆ ಸಮಿತಿಯಿಲ್ಲ. ಸ್ಥಳೀಯರ ಮೂಲಕ ಗ್ರಾ.ಪಂ.ಗಳು ನಿರ್ವಹಣೆ ಮಾಡಬೇಕು ಎಂದು ಹೇಳಲಾಗುತ್ತಿವೆಯಾದರೂ ಆರ್ಥಿಕ ಹೊರೆ ಇರುವುದರಿಂದ ನಿರ್ವಹಣೆ ಮಾಡಲು ಯಾರೂ ಮುಂದೆ ಬರುತ್ತಿಲ್ಲ. ಕಿಂಡಿ ಅಣೆಕಟ್ಟಿಗೆ ಹಲಗೆ ಹಾಕುವ ಸಂಬಂಧ ಪ್ರಸ್ತಾವನೆಯನ್ನು ಆರ್ಥಿಕ ಅನುಮೋದನೆಗಾಗಿ ಕಳುಹಿಸಿದ್ದೇವೆ. ಶೀಘ್ರ ಅನುಮೋದನೆ ಸಿಗಲಿದೆ. ಅನಂತರ ಹಲಗೆ ಹಾಕುವ ಪ್ರಕ್ರಿಯೆ ಶುರುವಾಗಲಿದೆ.
-ಅರುಣ್, ಎಇಇ,
ಸಣ್ಣ ನೀರಾವರಿ ಇಲಾಖೆ -ರಾಜು ಖಾರ್ವಿ ಕೊಡೇರಿ