Advertisement
ಗ್ರಾ.ಪಂ. ಹಕ್ಕೊತ್ತಾಯ ಆಂದೋಲನ ಸಮಿತಿಯು ಜಿಲ್ಲಾ ಸ್ವೀಪ್ ಸಮಿತಿಯ ನಿರ್ದೇಶನದಂತೆ ಎಲ್ಲ ಕಡೆಗಳಲ್ಲಿ ಮತದಾನದ ಜಾಗೃತಿ ಕುರಿತಂತೆ ಕಾರ್ಯಕ್ರಮಗಳನ್ನು ಆಯೋಜಿಸುತ್ತಿದ್ದು, ಆ ಕಾರ್ಯಕ್ರಮಗಳಲ್ಲಿ ವ್ಯಕ್ತವಾದ ಜನಾಭಿಪ್ರಾಯವನ್ನು ಆಧರಿಸಿ ಈ ಪ್ರತಿಜ್ಞಾ ವಿಧಿಯನ್ನು ಸಿದ್ದಪಡಿಸಿದ್ದು, ಇದನ್ನು ಈಗ ಅಭ್ಯರ್ಥಿಗಳ ಮುಂದಿಡಲಾಗುತ್ತಿದೆ.
- ಹಣ, ಹೆಂಡ, ವಸ್ತುಗಳನ್ನು ಹಂಚದೇ, ಯಾವುದೇ ಆಸೆ-ಆಮಿಷಗಳನ್ನು ಜನರಿಗೆ ಒಡ್ಡದೇ ಪ್ರಾಮಾಣಿಕ, ಚೊಕ್ಕ ಚುನಾವಣೆ ನಡೆಸುತ್ತೇನೆ.
- ಎಲ್ಲರನ್ನೊಳಗೊಂಡ ಜನ ಭಾಗವಹಿಸುವಿಕೆಗೆ ಬೆಂಬಲ ನೀಡುತ್ತೇನೆ ಹಾಗೂ ಜನಪರ ಅಭಿವೃದ್ಧಿಯಲ್ಲಿ ಪಕ್ಷ ರಾಜಕೀಯ ಮಾಡುವುದಿಲ್ಲ.
- ದೇಶದ ಸಂವಿಧಾನಕ್ಕೆ ಹಾಗೂ ಅದರ ರಕ್ಷಣೆ, ಅನುಷ್ಠಾನಕ್ಕೆ ಬದ್ಧನಾಗಿರುತ್ತೇನೆ.
- ಹಕ್ಕು, ಅಧಿಕಾರ ಮತ್ತು ಜವಾಬ್ದಾರಿಗಳನ್ನು ಪರಿಣಾಮಕಾರಿಯಾಗಿ ಅನುಷ್ಠಾನಗೊಳಿಸುವಲ್ಲಿ ಬದ್ಧನಾಗಿರುತ್ತೇನೆ.
- ಯಾವುದೇ ಸಂದರ್ಭದಲ್ಲೂ, ಯಾವುದೇ ಕಾರಣಕ್ಕೂ ಜನರನ್ನು ಹಣ ಕೊಟ್ಟು ಕೊಂಡುಕೊಳ್ಳುವುದಿಲ್ಲ.
- ಮಹಿಳೆ ಮತ್ತು ಮಕ್ಕಳನ್ನು ಒಳಗೊಂಡ ಶೋಷಿತ ವರ್ಗದವರ ಬಗ್ಗೆ ಗೌರವ ಮತ್ತು ಕಾಳಜಿ ಉಳ್ಳವನಾಗಿದ್ದು, ಅವರ ಪರವಾಗಿ, ಅವರ ಸಮಗ್ರ ಅಭಿವೃದ್ಧಿಯನ್ನು ಕೇಂದ್ರೀಕರಿಸಿ ಕೆಲಸ ಮಾಡುತ್ತೇನೆ.
- ಜಾತಿ, ಮತ, ಧರ್ಮ, ಪ್ರಾದೇಶಿಕ, ಲಿಂಗ, ವಯಸ್ಸಿನ ಬೇಧ ಮಾಡದೇ ಎಲ್ಲರ ಅಭಿವೃದ್ಧಿಗೆ ಬದ್ಧನಾಗಿರುತ್ತೇನೆ ಹಾಗೂ ಪಾರದರ್ಶಕ ಆಡಳಿತ ನಡೆಸುತ್ತೇನೆ. ಅಭ್ಯರ್ಥಿಗಳೇ ಪ್ರತಿಜ್ಞೆ ಮಾಡಿ
“ಭಾರತ ದೇಶದ ಪ್ರಜೆಯಾದ ನಾನು, ಈ ದೇಶದ ಸಂವಿಧಾನವನ್ನು ಗೌರವಿಸುವುದಲ್ಲದೇ, ಸಂವಿಧಾನದ ಆಶಯಗಳನ್ನು ಚಾಚೂ ತಪ್ಪದೇ ಅನುಷ್ಠಾನಗೊಳಿಸುವಲ್ಲಿ ಬದ್ಧನಾಗಿರುತ್ತೇನೆ. ಅದಲ್ಲದೇ ಈಗ ನಡೆಯುತ್ತಿರುವ ರಾಜ್ಯ ವಿಧಾನಸಭಾ ಚುನಾವಣೆಯಲ್ಲಿ ನಾನು, ಪ್ರಜಾಪ್ರಭುತ್ವದ ನೆಲೆಯಲ್ಲಿ ಜನರ ಒಡಗೂಡಿ ಪ್ರಾಮಾಣಿಕವಾಗಿ, ಯಾವುದೇ ರೀತಿಯ ಸ್ವಂತ ಹಿತಾಸಕ್ತಿ ತೋರದೇ, ಜನರನ್ನು ಆಸೆ-ಆಮಿಷಗಳಿಗೆ ಒಡ್ಡದೇ, ಜನರೊಂದಿಗೆ ಸೇರಿ ಸೇವೆ ಸಲ್ಲಿಸುವುದಕ್ಕೋಸ್ಕರ, ಜನರ ಅಭಿವೃದ್ಧಿಗಾಗಿ ಕೆಲಸ ಮಾಡುವಲ್ಲಿ ಯಾವುದೇ ಪಕ್ಷ ರಾಜಕೀಯ ಮಾಡುವುದಿಲ್ಲ ಎಂಬ ದೃಢ ನಿಲುವಿನೊಂದಿಗೆ ಜನರ ಅಭ್ಯರ್ಥಿಯಾಗಿ ನಾನು ಸ್ಪರ್ಧಿಸುತ್ತಿದ್ದೇನೆ’.