Advertisement

Assam: ದೀರ್ಘ‌ ಕಾಲ ದೇಶ ಆಳಿದವರು ಸಂಸ್ಕೃತಿ ಮರೆತರು: ಪ್ರಧಾನಿ ನರೇಂದ್ರ ಮೋದಿ 

09:33 PM Feb 04, 2024 | Team Udayavani |

ಗುವಾಹಟಿ: ದೇಶವನ್ನು ದೀರ್ಘ‌ಕಾಲ ಆಳಿದ ಪಕ್ಷಗಳು, ತಮ್ಮ ರಾಜಕೀಯ ಲಾಭಕ್ಕಾಗಿ ತಮ್ಮದೇ ಸಂಸ್ಕೃತಿ-ಇತಿಹಾಸದ ಬಗ್ಗೆ ನಾಚಿಕೆಪಟ್ಟುಕೊಂಡವು. ಯಾವುದೇ ರಾಷ್ಟ್ರವೂ ತನ್ನ ಇತಿಹಾಸವನ್ನು ನಾಶ ಮಾಡಿ, ಬೇರುಗಳನ್ನು ಕಡಿದುಕೊಂಡು ಬಾಳಲು ಸಾಧ್ಯವಿಲ್ಲ… ಹೀಗೆಂದು ಪ್ರಧಾನಿ ನರೇಂದ್ರ ಮೋದಿ ಗುವಾಹಟಿಯಲ್ಲಿ ನಡೆದ ರ್ಯಾಲಿಯಲ್ಲಿ ಹೇಳಿದರು. ಈ ವೇಳೆ ಅವರು ಕಾಮಾಖ್ಯ ಶಕ್ತಿಪೀಠವೂ ಸೇರಿದಂತೆ ಇಡೀ ಅಸ್ಸಾಮ್‌ನ ಅಭಿವೃದ್ಧಿಗೆ ಪೂರಕವಾಗುವ; 11,600 ಕೋಟಿ ರೂ. ಮೌಲ್ಯದ ವಿವಿಧ ಕಾಮಗಾರಿಗಳಿಗೆ ಚಾಲನೆ ನೀಡಿದರು.

Advertisement

ಕಾಮಾಖ್ಯ ದೇವಸ್ಥಾನವನ್ನು ಕೇಂದ್ರ ಸರ್ಕಾರ, “ಕಾಮಾಖ್ಯ ದಿವ್ಯಲೋಕ ಪರಿಯೋಜನಾ” ಮೂಲಕ, 498 ಕೋಟಿ ರೂ. ಮೊತ್ತದಲ್ಲಿ ಅಭಿವೃದ್ಧಿಪಡಿಸಲಿದೆ. ಈ ಕ್ಷೇತ್ರ ಅಭಿವೃದ್ಧಿಯಾದರೆ ಶಕ್ತಿಪೀಠಕ್ಕೆ ಭಾರೀ ಪ್ರಮಾಣದಲ್ಲಿ ಭಕ್ತರು ಹರಿದುಬರಲಿದ್ದಾರೆ. ಸಂಪೂರ್ಣ ಈಶಾನ್ಯಭಾರತದ ಪ್ರವಾಸೋದ್ಯಮಕ್ಕೂ ಇದರಿಂದ ಉತ್ತೇಜನ ಸಿಗಲಿದೆ. ಈ ಪೀಠ ಈಶಾನ್ಯಭಾಗದ ದ್ವಾರವಾಗಲಿದೆ. ಸಾವಿರಾರು ವರ್ಷಗಳ ಕಾಲ ಸವಾಲುಗಳನ್ನು ಎದುರಿಸಿದರೂ, ಇವೆಲ್ಲ ನಮ್ಮ ಸಂಸ್ಕೃತಿಯ ಸಂಕೇತಗಳಾಗಿ ಉಳಿದುಕೊಂಡಿವೆ. ನಮ್ಮ ಶ್ರೇಷ್ಠ ಸಂಸ್ಕೃತಿಯ ಇಂತಹ ಹಲವು ಶಕ್ತಿಕೇಂದ್ರಗಳು ಈಗ ಅಳಿವಿನಂಚಿನಲ್ಲಿವೆ ಎಂದು ಮೋದಿ ಹೇಳಿದ್ದಾರೆ.

ಏನೇನು ಯೋಜನೆಗಳು?
– ಕಾಮಾಖ್ಯ ಶಕ್ತಿ ಪೀಠದ ಅಭಿವೃದ್ಧಿ ಯೋಜನೆ
– ನೆಹರೂ ಫ‌ುಟ್ಬಾಲ್‌ ಸ್ಟೇಡಿಯಂ ಅಭಿವೃದ್ಧಿ
– ಚಂದ್ರಾಪುರದಲ್ಲಿ ಹೊಸ ಕ್ರೀಡಾ ಸಂಕೀರ್ಣ ನಿರ್ಮಾಣ

Advertisement

Udayavani is now on Telegram. Click here to join our channel and stay updated with the latest news.

Next