Advertisement

ಏಶ್ಯ ಕಪ್‌ ಆತಿಥ್ಯ ಅದಲು-ಬದಲು: ಪಾಕ್‌ ಇಂಗಿತ

02:09 AM Jun 13, 2020 | Sriram |

ಲಾಹೋರ್‌: ಈ ವರ್ಷ ತನ್ನ ಆತಿಥ್ಯದಲ್ಲಿ ನಡೆಯಬೇಕಿರುವ ಏಶ್ಯ ಕಪ್‌ ಕ್ರಿಕೆಟ್‌ ಪಂದ್ಯಾವಳಿಯನ್ನು ಆಯೋ ಜಿಸುವಂತೆ ಪಾಕಿಸ್ಥಾನ ಕ್ರಿಕೆಟ್‌ ಮಂಡಳಿ ಶ್ರೀಲಂಕಾವನ್ನು ಕೇಳಿಕೊಂಡಿದೆ. ಜತೆಗೆ 2022ರ ಶ್ರೀಲಂಕಾ ಆತಿಥ್ಯದ ಏಶ್ಯ ಕಪ್‌ ಕೂಟದ ಆತಿಥ್ಯವನ್ನು ತನಗೆ ನೀಡುವಂತೆ ವಿನಂತಿಸಿದೆ.

Advertisement

ಆದರೆ ಈ ಅದಲು-ಬದಲು ಪ್ರಕ್ರಿಯೆಗೆ ಏಶ್ಯನ್‌ ಕ್ರಿಕೆಟ್‌ ಕೌನ್ಸಿಲ್‌ (ಎಸಿಸಿ) ಅನುಮತಿ ನೀಡಿಲ್ಲ. ಜೂನ್‌ ಅಂತ್ಯದೊಳಗಾಗಿ ತನ್ನ ನಿರ್ಧಾರವನ್ನು ಪ್ರಕಟಿಸುವ ಸಾಧ್ಯತೆ ಇದೆ.

ಭಾರತದೊಂದಿಗಿನ ಸಂಬಂಧ ಬಿಗ ಡಾಯಿಸಿರುವುದರಿಂದ ಹಾಗೂ ದೇಶದಲ್ಲಿ ಕೊರೊನಾ ಹಾವಳಿ ತೀವ್ರಗೊಂಡಿರುವು ದರಿಂದ ಪಾಕಿಸ್ಥಾನ ಇಂಥದೊಂದು ನಿರ್ಧಾ ರಕ್ಕೆ ಬಂದಿರುವುದು ಗುಟ್ಟಿನ ಸಂಗತಿಯಲ್ಲ.

ಲಂಕಾ 2010ರ ಬಳಿಕ ಏಶ್ಯ ಕಪ್‌ ಆಯೋಜಿಸಿಲ್ಲ. ಹೀಗಾಗಿ ಅದು ಪಿಸಿಬಿ ಮನವಿಯನ್ನು ಒಪ್ಪಲೂಬಹುದು.

Advertisement

Udayavani is now on Telegram. Click here to join our channel and stay updated with the latest news.

Next