Advertisement

Asia Cup 2023; ಮಿರಾಜ್- ಶಾಂಟೋ ಶತಕದಾಟ; ಅಫ್ಘಾನ್ ಗೆಲುವಿಗೆ ಬೇಕು ಬೃಹತ್ ಮೊತ್ತ

06:53 PM Sep 03, 2023 | |

ಲಾಹೋರ್: ಏಷ್ಯಾಕಪ್ ಕೂಟದ ಪಾಕಿಸ್ತಾನ ಲೆಗ್ ನ ಎರಡನೇ ಪಂದ್ಯದಲ್ಲಿ ಅಫ್ಘಾನಿಸ್ತಾನ ಮತ್ತು ಬಾಂಗ್ಲಾದೇಶ ತಂಡಗಳು ಮುಖಾಮುಖಿಯಾಗಿದೆ. ಮೊದಲು ಬ್ಯಾಟಿಂಗ್ ಮಾಡಿದ ಬಾಂಗ್ಲಾದೇಶ ತಂಡವು ಐದು ವಿಕೆಟ್ ನಷ್ಟಕ್ಕೆ 334 ರನ್ ಪೇರಿಸಿದೆ.

Advertisement

ಗೆಲ್ಲಲೇಬೇಕಾದ ಪಂದ್ಯದಲ್ಲಿ ಟಾಸ್ ಗೆದ್ದ ಬಾಂಗ್ಲಾ ಮೊದಲು ಬ್ಯಾಟಿಂಗ್ ಆಯ್ಕೆ ಮಾಡಿತು. ಮೊದಲ ವಿಕೆಟ್ ಗೆ ಮೆಹದಿ ಹಸನ್ ಮತ್ತು ಮೊಹಮ್ಮದ್ ನಯಿಮ್ 60 ರನ್ ಜೊತೆಯಾಟವಾಡಿದರು. ನಯಿಮ್ 28 ರನ್ ಗಳಿಸಿ ಔಟಾದರು. ಆದರೆ ಮೂರನೇ ವಿಕೆಟ್ ಗೆ ಹಸನ್ ಜೊತೆಗೂಡಿದ ನಜಮುಲ್ ಶಾಂಟೋ ಬರೋಬ್ಬರಿ 215 ರನ್ ಗಳ ಜೊತೆಯಾಟವಾಡಿದರು.

119 ಎಸೆತಗಳಲ್ಲಿ 112 ರನ್ ಗಳಿಸಿದ ಮೆಹದಿ ಹಸನ್ ಕೈಗೆ ಗಾಯಮಾಡಿಕೊಂಡು ಮೈದಾನದಿಂದ ಹೊರನಡೆದರು. ಮತ್ತೊಂದೆಡೆ ಅದ್ಭುತ ಫಾರ್ಮ್ ಮುಂದುವರಿಸಿದ ಶಾಂಟೋ 104 ರನ್ ಗಳಿಸಿ ರನೌಟಾದರು. ಉಳಿದಂತೆ ನಾಯಕ ಶಕೀಬ್ ಅಜೇಯ 32 ರನ್, ಮುಶ್ಫಿಕರ್ ರಹೀಂ 25 ರನ್ ಮಾಡಿದರು.

ಅಫ್ಘಾನ್ ಪರ ಮುಜೀಬ್ ಉರ್ ರೆಹಮಾನ್ ಮತ್ತು ಗುಲ್ಬದಿನ್ ನೈಬ್ ತಲಾ ಒಂದು ವಿಕೆಟ್ ಕಿತ್ತರು. ಮೂರು ವಿಕೆಟ್ ಗಳು ರನೌಟ್ ರೂಪದಲ್ಲಿ ಬಂದವು.

Advertisement

Udayavani is now on Telegram. Click here to join our channel and stay updated with the latest news.

Next