Advertisement
ರವಿವಾರ ರಾತ್ರಿ ಜೈಪುರದಲ್ಲಿ ಹೈಡ್ರಾಮಾ ನಡೆದಿದ್ದು, ಅಶೋಕ್ ಗೆಹ್ಲೋಟ್ ಬಣದ 92 ಶಾಸಕರು ಸ್ಪೀಕರ್‌ಗೆ ರಾಜೀನಾಮೆ ಸಲ್ಲಿಸಿದ್ದರು. ಅಲ್ಲದೆ ಯಾವುದೇ ಕಾರಣಕ್ಕೂ ಸಚಿನ್ ಪೈಲಟ್‌ಗೆ ಸಿಎಂ ಹುದ್ದೆ ನೀಡಬಾರದು ಎಂದು ಪಟ್ಟು ಹಿಡಿದಿದ್ದರು. ಈ ಡ್ರಾಮಾ ಸೋಮವಾರ ಬೆಳಗ್ಗೆಯೂ ಮುಂದುವರಿದಿದ್ದು, ಇಡೀ ಪ್ರಹಸನದ ಬಗ್ಗೆ ಎಐಸಿಸಿ ಅಧ್ಯಕ್ಷೆ ಸೋನಿಯಾ ಗಾಂಧಿ ಕೆಂಡವಾಗಿದ್ದಾರೆ. ಗೆಹ್ಲೋಟ್ ವಿರುದ್ಧ ಕಠಿನ ಕ್ರಮ ತೆಗೆದುಕೊಳ್ಳುವ ಸಾಧ್ಯತೆ ಅಧಿಕವಾಗಿದೆ.
ಸಚಿನ್ ಪೈಲಟ್‌ಗೆ ಸಿಎಂ ಸ್ಥಾನ ಸಿಗಬಾರದು ಎಂದು ಗೆಹ್ಲೋಟ್ ತಕರಾರು ತೆಗೆದಿರುವಂತೆಯೇ ಸೋನಿಯಾ ನಿವಾಸದಲ್ಲಿ ಪ್ರಿಯಾಂಕಾ ವಾದ್ರಾ, ಕೆ.ಸಿ. ವೇಣುಗೋಪಾಲ್, ಮಲ್ಲಿಕಾರ್ಜುನ ಖರ್ಗೆ, ಕಮಲ್‌ನಾಥ್, ಅಜಯ ಮಕೇನ್ ಸಭೆ ನಡೆಸಿದರು.
Related Articles
Advertisement
ಲಿಖಿತ ವರದಿಗೆ ಸೂಚನೆಸಿಎಂ ಅಶೋಕ್ ಗೆಹ್ಲೋಟ್ ಸೂಚಿಸುವ ವ್ಯಕ್ತಿಯೇ ಮುಖ್ಯಮಂತ್ರಿಯಾಗಬೇಕು ಎಂದು 92 ಮಂದಿ ಶಾಸಕರು ಪಟ್ಟುಹಿಡಿದಿದ್ದು, ಶಾಸಕಾಂಗ ಸಭೆ ನಡೆಯದೇ ಇರುವುದು ಕಾಂಗ್ರೆಸ್‌ಗೆ ಆಘಾತ ತಂದೊಡ್ಡಿದೆ. ವಿಶೇಷವೆಂದರೆ, ಸೋಮವಾರ ಬೆಳಗ್ಗೆ ಅಶೋಕ್ ಗೆಹ್ಲೋಟ್ ಪರ ಶಾಸಕರಿಗಾಗಿ ರಾಜ್ಯ ಸಭೆ ವಿಪಕ್ಷ ನಾಯಕ ಮಲ್ಲಿಕಾರ್ಜುನ ಖರ್ಗೆ ಮತ್ತು ಮಾಕೆನ್ ಕಾದು ಕುಳಿತರೂ ಯಾರೊಬ್ಬರೂ ಬರಲೇ ಇಲ್ಲ. ಈ ಹಿನ್ನೆಲೆಯಲ್ಲಿ ಜೈಪುರದಿಂದ ಹೊಸ ದಿಲ್ಲಿಗೆ ದೌಡಾಯಿಸಿದ ಖರ್ಗೆ, ಕಾಂಗ್ರೆಸ್ ಉಸ್ತುವಾರಿ ಅಜಯ ಮಕೇನ್ ಸೋನಿಯಾ ಅವರಿಗೆ ಮೌಖಿಕ ವರದಿ ಒಪ್ಪಿಸಿ ದ್ದಾರೆ. ಅಷ್ಟಕ್ಕೇ ತೃಪ್ತರಾಗದ ಅವರು, ಶೀಘ್ರಾತಿಶೀಘ್ರ ಲಿಖಿತ ವರದಿ ನೀಡುವಂತೆ ಇಬ್ಬರು ಮುಖಂಡರಿಗೆ ಸೂಚಿಸಿದ್ದಾರೆ.