Advertisement
ಶಾಸಕ ಅಶೋಕ್ ಕುಮಾರ್ ರೈ ನೇತೃತ್ವದ ಪುತ್ತೂರು ರೈ ಎಸ್ಟೇಟ್ಸ್ ಎಜುಕೇಶನ್ ಹಾಗೂ ಚಾರಿಟೆಬಲ್ ಟ್ರಸ್ಟ್ ವತಿಯಿಂದ ದೀಪಾವಳಿ ಪ್ರಯುಕ್ತ ಕೊಂಬೆಟ್ಟು ತಾಲೂಕು ಕ್ರೀಡಾಂಗಣದಲ್ಲಿ ನ.2ರಂದು ಜರಗಿದ 12ನೇ ವರ್ಷದ ವಸ್ತ್ರದಾನ, ಸಹಭೋಜನ ಹಾಗೂ ದೀಪಾವಳಿ ಗೂಡುದೀಪ ಸ್ಪರ್ಧೆಯ ಸಭಾ ಕಾರ್ಯಕ್ರಮವನ್ನು ಉದ್ಘಾಟಿಸಿ ಅವರು ಮಾತನಾಡಿದರು.
ಟ್ರಸ್ಟ್ ಪ್ರವರ್ತಕ, ಶಾಸಕ ಅಶೋಕ್ ಕುಮಾರ್ ರೈ ಮಾತನಾಡಿ, ಇದು ಪಕ್ಷಾತೀತ, ಜಾತಿ, ಧರ್ಮ ಮೀರಿದ ಕಾರ್ಯಕ್ರಮ. ಟ್ರಸ್ಟ್ ಮೂಲಕ 24 ಸಾವಿರ ಕುಟುಂಬಗಳಿಗೆ ವಿವಿಧ ರೀತಿಯ ನೆರವು ನೀಡಿದ್ದು, ಆ ಕುಟುಂಬಸ್ಥರಿಗೆ ಒಂದು ಕಾರ್ಡ್ ಹಾಕಿ ಕಾರ್ಯಕ್ರಮಕ್ಕೆ ಆಹ್ವಾನ ನೀಡುತ್ತೇವೆ. ಅವರು ಪ್ರೀತಿಯಿಂದ ಬರುತ್ತಾರೆ. ಈ ವರ್ಷ 85 ಸಾವಿರ ಜನರಿಗೆ ವಸ್ತ್ರದಾನ ಮಾಡಿದ್ದು, ಮುಂದಿನ ವರ್ಷ 1 ಲಕ್ಷ ಜನರಿಗೆ ವಸ್ತ್ರದಾನ ಮಾಡುವ ಗುರಿ ಹೊಂದಿದ್ದೇನೆ ಎಂದರು. ಶಾಸಕನಾಗಿ ಆಯ್ಕೆಯಾದರೆ ಭ್ರಷ್ಟಾಚಾರ ರಹಿತವಾಗಿ ಕೆಲಸ ಮಾಡುವೆ ಎಂದಿದ್ದೆ. ಅದರಂತೆ ನಡೆದುಕೊಳ್ಳುತ್ತಿದ್ದೇನೆ. ಅಕ್ರಮ ಸಕ್ರಮ, ಕ್ಷೇತ್ರದಲ್ಲಿ 94ಸಿ-94ಸಿಸಿಗೆ ಸಂಬಂಧಿಸಿದ 5 ಸಾವಿರ ಅರ್ಜಿಗಳನ್ನು ವಿಲೇವಾರಿ ಮಾಡಲಾಗಿದೆ. ಕುಡಿಯುವ ನೀರಿಗೆ ಸಂಬಂಧಿಸಿ 1 ಸಾವಿರ ಕೋ.ರೂ. ಅನುದಾನಕ್ಕೆ ಟೆಂಡರ್ ಆಗಿದ್ದು, 400 ಕೋ.ರೂ. ಅನುದಾನ ಬಿಡುಗಡೆಯಾಗಿದೆ. ಉದ್ಯೋಗ ಸೃಷ್ಟಿಗೆ ಕೆಎಂಎಫ್ ಘಟಕ ತೆರೆಯಲು ಸಿದ್ಧತೆ ನಡೆದಿದೆ.
Related Articles
Advertisement
ಮಾಯಿದೇವುಸ್ ಚರ್ಚ್ ಧರ್ಮಗುರು ಫಾ| ಲಾರೆನ್ಸ್ ಮಸ್ಕರೇನ್ಹಸ್, ಧಾರ್ಮಿಕ ಮುಖಂಡ ಎಸ್.ಬಿ.ದಾರಿಮಿ ಶುಭ ಹಾರೈಸಿದರು. ವೇದಿಕೆಯಲ್ಲಿ ವಿಧಾನ ಪರಿಷತ್ ಸದಸ್ಯ ಮಂಜುನಾಥ ಭಂಡಾರಿ, ಮಾಜಿ ಸಚಿವ ವಿನಯ ಕುಮಾರ್ ಸೊರಕೆ, ಜಿಲ್ಲಾ ಕಾಂಗ್ರೆಸ್ ಅಧ್ಯಕ್ಷ ಹರೀಶ್ ಕುಮಾರ್, ಗೇರು ನಿಗಮದ ಅಧ್ಯಕ್ಷ ಮಮತಾ ಗಟ್ಟಿ, ಮಾಜಿ ಶಾಸಕಿ ಶಕುಂತಲಾ ಟಿ. ಶೆಟ್ಟಿ, ಪದ್ಮರಾಜ್ ಆರ್ ಪೂಜಾರಿ, ಪುತ್ತೂರು ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಕೃಷ್ಣ ಪ್ರಸಾದ್ ಆಳ್ವ, ಜಿಲ್ಲಾ ಯುವ ಕಾಂಗ್ರೆಸ್ ಮಾಜಿ ಅಧ್ಯಕ್ಷ ಮಿಥುನ್ ರೈ, ಮುಖಂಡರಾದ ಇನಾಯತ್ ಆಲಿ, ರಕ್ಷಿತ್ ಶಿವರಾಂ, ಕೃಷ್ಣಪ್ಪ ಸುಳ್ಯ, ಭರತ್ ಮುಂಡೋಡಿ, ಸದಾಶಿವ ಉಳ್ಳಾಲ್, ಹೇಮನಾಥ ಶೆಟ್ಟಿ ಕಾವು, ಎಂ.ಎಸ್.ಮಹಮ್ಮದ್, ಡಾ| ರಘು, ರೈ ಎಸ್ಟೇಟ್ಸ್ನ ಗಿರಿಜಾ ರೈ, ಸುಮಾ ಅಶೋಕ್ ರೈ ಮೊದಲಾದವರು ಉಪಸ್ಥಿತರಿದ್ದರು.
ರಾಮಕೃಷ್ಣ ಪ್ರೌಢಶಾಲಾ ವಿದ್ಯಾರ್ಥಿಗಳು ಪ್ರಾರ್ಥಿಸಿದರು. ಟ್ರಸ್ಟ್ ಕಾರ್ಯಾಧ್ಯಕ್ಷ ಸುಧೇಶ್ ಶೆಟ್ಟಿ ಸ್ವಾಗತಿಸಿ, ಬಾಲಕೃಷ್ಣ ರೈ ಪೊರ್ದಾಲ್, ಹೇಮಾ ನಿರೂಪಿಸಿದರು.
26 ಮಂದಿಗೆ ಸಮ್ಮಾನಈ ಸಂದರ್ಭದಲ್ಲಿ ಡಿ.ಕೆ.ಶಿವಕುಮಾರ್ ಹಾಗೂ ವಿವಿಧ ಕ್ಷೇತ್ರಗಳ 20 ಸಾಧಕರನ್ನು ಸಮ್ಮಾನಿಸಲಾಯಿತು. 85 ಸಾವಿರ ಮಂದಿಗೆ ವಸ್ತ್ರದಾನ
ಬೆಳಗ್ಗಿನಿಂದ ಸಂಜೆ ತನಕ ಮಹಿಳೆಯರು, ಪುರುಷರು ಹಾಗೂ ಮಕ್ಕಳು ಸಹಿತ 85 ಸಾವಿರಕ್ಕೂ ಅಧಿಕ ಮಂದಿಗೆ ವಸ್ತ್ರದಾನ ನಡೆಯಿತು. ಸಮಾವೇಶದಲ್ಲಿ 60 ಸಾವಿರಕ್ಕೂ ಅಧಿಕ ಮಂದಿ ಭೋಜನ ಸ್ವೀಕರಿಸಿದರು. ಸಿಎಂ ಜತೆ ರೈ ಜಗಳ!
ಅಶೋಕ್ ರೈ ಭಾರೀ ವೇಗದ ಮನುಷ್ಯ. ಕ್ಷೇತ್ರದ ಕೆಲಸಕ್ಕಾಗಿ ಸಿಎಂ ಜತೆಗೆ ಆಗಾಗ ಜಗಳವಾಡುತ್ತಾರೆ. ಎಲ್ಲವನ್ನೂ ಒಮ್ಮೆಲೆ ಮಾಡಬೇಕು ಎನ್ನುವ ಆತುರತೆ ಅವರಲ್ಲಿದೆ. ರೈ ಸ್ವಲ್ಪ ತಾಳ್ಮೆ ವಹಿಸಿ ಎಂದು ಸಲಹೆ ನೀಡಿದ ಡಿಕೆಶಿ, ಒಂದೊಂದು ಕೆಲಸವನ್ನು ಮಾಡುತ್ತಾ ಹೋಗಬೇಕು. ತಾಳ್ಮೆ ಇದ್ದರೆ ಮಾತ್ರ ಯಶಸ್ಸು ಸಾಧ್ಯ ಎಂದು ಶಾಸಕರಿಗೆ ಕಿವಿಮಾತು ಹೇಳಿದರು. ಪ್ರಾಸ್ತಾವಿಕ ಭಾಷಣದಲ್ಲಿ ರೈ ಅವರು, ಕಳೆದ ವಿಧಾನಸಭಾ ಚುನಾವಣೆಯಲ್ಲಿ ಡಿಕೆಶಿ ನನ್ನನ್ನು ಕರೆದು ಟಿಕೆಟ್ ಕೊಟ್ಟಿದ್ದರು. ನಾನು ಶಾಸಕನಾಗಲು ಕ್ಷೇತ್ರದ ಜನರು, ದೇವರು, ಡಿಕೆಶಿ ಆರ್ಶೀವಾದ ಕಾರಣ ಎಂದು ಉಲ್ಲೇಖೀಸಿದ್ದರು.