Advertisement

ಜನಸಂಖ್ಯೆ ಹೆಚ್ಚಾದಂತೆ ಸಮಸ್ಯೆಗಳು ಸಹಜ

12:52 AM Sep 14, 2019 | Lakshmi GovindaRaju |

ಬೆಂಗಳೂರು: ಮಹಾನಗರದಲ್ಲಿ ದಿನೇ ದಿನೆ ಜನಸಂಖ್ಯೆ ಹೆಚ್ಚಾಗುತ್ತಿದ್ದು, ಸಹಜವಾಗೇ ಸಮಸ್ಯೆಗಳೂ ಹೆಚ್ಚಾಗುತ್ತಿವೆ ಎಂದು ಬಿಬಿಎಂಪಿ ಮೇಯರ್‌ ಗಂಗಾಂಬಿಕೆ ಅಭಿಮತ ವ್ಯಕ್ತಪಡಿಸಿದರು. ನಗರದ ಮಹಾಲಕ್ಷ್ಮೀಪುರ ವಾರ್ಡ್‌-68ರಲ್ಲಿ ಶುಕ್ರವಾರ ಶ್ರೀ ನಾಗಮ್ಮದೇವಿ ಶ್ರೀ ನಾಗಲಿಂಗೇಶ್ವರ ಸ್ವಾಮಿ ದೇವಸ್ಥಾನದ ರಸ್ತೆ ಹಾಗೂ ಬೆಂಗಳೂರು ಒನ್‌ ಕಚೇರಿ ಉದ್ಘಾಟಿಸಿ ಮಾತನಾಡಿದರು.

Advertisement

ನಗರಕ್ಕೆ ದೇಶದ ನಾನಾ ಕಡೆಗಳಿಂದ ಜನ ಬಂದು ನೆಲೆಸುತ್ತಿರುವುದರಿಂದ ಜನಸಂಖ್ಯೆ ಹೆಚ್ಚಾಗುತ್ತಿದೆ. ಅದಕ್ಕನುಗುಣವಾಗಿ ಸಮಸ್ಯೆಗಳೂ ಉದ್ಭವಿಸುತ್ತಿವೆ. ಸಾರ್ವಜನಿಕರ ಸಮಸ್ಯೆಗಳ ನಿವಾರಣೆಗೆ ತಕ್ಷಣ ಸ್ಪಂದಿಸಿ, ಸಮಸ್ಯೆಗಳನ್ನು ದೂರಾಗಿಸುವಲ್ಲಿ ಬಿಬಿಎಂಪಿ ಸದಸ್ಯರು, ಅಧಿಕಾರಿಗಳು ಶ್ರಮಿಸುತ್ತಿದ್ದಾರೆ. ಬೆಂಗಳೂರು ಒನ್‌ ಕಚೇರಿ ತೆರೆದಿರುವುದರಿಂದ ವಾರ್ಡ್‌ ವ್ಯಾಪ್ತಿಯಲ್ಲಿ ಸಾರ್ವಜನಿಕರಿಗೆ ಬಹಳಷ್ಟು ಅನುಕೂಲವಾಗಲಿದೆ ಎಂದು ಹೇಳಿದರು.

ಮಹಾಲಕ್ಷ್ಮೀಪುರ ವಾರ್ಡ್‌ ಪಾಲಿಕೆ ಸದಸ್ಯ ಕೇಶವಮೂರ್ತಿ ಮಾತನಾಡಿ, ಭಕ್ತರ ಬಹುದಿನಗಳ ಬೇಡಿಕೆಗೆ ಸ್ಪಂದಿಸಿ ಶ್ರೀನಾಗಮ್ಮ, ನಾಗಲಿಂಗೇಶ್ವರ ದೇವಸ್ಥಾನದ ರಸ್ತೆ ನಾಮಕರಣ ಮಾಡಲಾಗಿದೆ. ಅಲ್ಲದೆ, ನಮ್ಮ ವಾರ್ಡ್‌ನಲ್ಲಿ ಬೆಂಗಳೂರು ಒನ್‌ ಕಚೇರಿ ತೆರೆಯುವ ಮೂಲಕ ಸಾರ್ವಜನಿಕರಿಗೆ ಬೆಸ್ಕಾಂ, ಜಲಮಂಡಳಿ, ಮೊಬೈಲ್‌ ಬಿಲ್ಲು ಹಣ ಪಾವತಿ ಅನುಕೂಲ ಮತ್ತಿತರ 105 ಸೌಲಭ್ಯಗಳು ದೊರೆಯಲಿವೆ ಎಂದರು.

ಕಾರ್ಯಕ್ರಮದಲ್ಲಿ ಅನರ್ಹಗೊಂಡ ಶಾಸಕ ಗೋಪಾಲಯ್ಯ, ಉಪಮೇಯರ್‌ ಭದ್ರೇಗೌಡ, ತೆರಿಗೆ ಮತ್ತು ಸ್ಥಾಯಿ ಸಮಿತಿ ಅಧ್ಯಕ್ಷೆ ಹೇಮಲತಾ ಗೋಪಾಲಯ್ಯ, ಶಂಕರಮಠ ವಾರ್ಡ್‌ ಸದಸ್ಯ ಎಂ.ಶಿವರಾಜು, ನಂದಿನಿ ಲೇಔಟ್‌ ವಾರ್ಡ್‌ ಸದಸ್ಯ ರಾಜೇಂದ್ರಕುಮಾರ್‌, ಸುಬ್ರಹ್ಮಣ್ಯನಗರ ವಾರ್ಡ್‌ ಸದಸ್ಯ ಎಚ್‌. ಮಂಜುನಾಥ್‌ ಇತರರಿದ್ದರು.

Advertisement

Udayavani is now on Telegram. Click here to join our channel and stay updated with the latest news.

Next