Advertisement
ಕುಕ್ಕೆ ಕ್ಷೇತ್ರಕ್ಕೆ ರವಿವಾರ ಆಗಮಿಸಿದ ಸಚಿವರು ದೇವರ ದರ್ಶನದ ಬಳಿಕ ಸುದ್ದಿಗಾರರೊಂದಿಗೆ ಮಾತನಾಡಿದರು.ಈ ಹಿಂದೆ ಬ್ರಹ್ಮರಥೋತ್ಸವ ಸೇವೆ ನೆರವೇರಿಸಲು ಭಕ್ತರಿಗೆ ಅವಕಾಶವಿತ್ತು. ಆದರೆ ಈ ಬಾರಿ ಕೋವಿಡ್ ಹಿನ್ನೆಲೆಯಲ್ಲಿ ಬ್ರಹ್ಮರಥೋತ್ಸವ ಸೇವೆ ನೆರವೇರಿಸಲು ಭಕ್ತರಿಗೆ ಅವಕಾಶ ವಿರುವುದಿಲ್ಲ ಎಂದರು.
ಕಸ್ತೂರಿ ರಂಗನ್ ವರದಿ ಹಿನ್ನೆಯಲ್ಲಿ ಕೇಂದ್ರದಿಂದ ರಾಜ್ಯ ಸರಕಾರಕ್ಕೆ ಬಂದ ಸೂಚನೆಗೆ ರಾಜ್ಯ ಸರಕಾರವು ಯಾವುದೇ ಮಾರ್ಗಸೂಚಿ ಸಿದ್ಧ ಪಡಿಸಿಲ್ಲ. ಈ ವರದಿ ಮೂಲಕ ರೈತರನ್ನು ಒಕ್ಕಲೆಬ್ಬಿಸುವುದಾಗಲೀ ತೊಂದರೆ ಕೊಡುವುದಾಗಲೀ ಮಾಡುವುದಿಲ್ಲ. ಜನರ ಬದುಕಿಗೆ ತೊಂದರೆ ಯಾಗದಂತೆ ಪರಿಸರ ಉಳಿಸಲು ನಾವು ಬದ್ಧರಾಗಿದ್ದೇವೆ ಎಂದು ಸಚಿವರು ಹೇಳಿದರು.
Related Articles
ಕುಕ್ಕೆ ಶ್ರೀ ಸುಬ್ರಹ್ಮಣ್ಯ ದೇವಸ್ಥಾನ ಅಭಿವೃದ್ಧಿ ಸಮಿತಿ ಅಧ್ಯಕ್ಷರಾಗಿರುವ ಶಾಸಕ ಎಸ್. ಅಂಗಾರ, ದೇವಸ್ಥಾನದ ಆಡಳಿತಾಧಿಕಾರಿ ಮತ್ತು ಅಪರ ಜಿಲ್ಲಾಧಿಕಾರಿ ರೂಪಾ ಎಂ.ಜೆ. ಉಪಸ್ಥಿತರಿದ್ದರು.
Advertisement
180 ಕೊಠಡಿಗಳ ಸುಸಜ್ಜಿತ ವಸತಿಗೃಹ ಲೋಕಾರ್ಪಣೆಕುಕ್ಕೆ ಕ್ಷೇತ್ರದ ಸಮಗ್ರ ಅಭಿವೃದ್ಧಿಯ ಮಾಸ್ಟರ್ ಪ್ಲಾನ್ ಯೋಜನೆಯಲ್ಲಿ ಆದಿಸುಬ್ರಹ್ಮಣ್ಯದಲ್ಲಿ 25 ಕೋಟಿ ರೂ. ವೆಚ್ಚದಲ್ಲಿ ನಿರ್ಮಿಸಲಾದ 180 ಕೊಠಡಿಗಳ ವಸತಿಗೃಹ “ಅನಘ’ವನ್ನು ರವಿವಾರ ಸಚಿವ ಕೋಟ ಶ್ರೀನಿವಾಸ ಪೂಜಾರಿ ಉದ್ಘಾಟಿಸಿದರು. ಕ್ಷೇತ್ರಕ್ಕೆ ಬರುವ ಭಕ್ತರು ಎಲ್ಲ ಸೇವೆಗಳನ್ನು ಸುಸೂತ್ರವಾಗಿ ನೆರವೇರಿಸಿ ಸಂತುಷ್ಟರಾಗಿ ತೆರಳಲು ಬೇಕಾದ ವ್ಯವಸ್ಥೆಗಳನ್ನು ಸರಕಾರ ಕಲ್ಪಿಸಿಕೊಡಲಿದೆ ಎಂದು ಸಚಿವರು ಇದೇ ವೇಳೆ ತಿಳಿಸಿದರು. ಡಿಸೆಂಬರ್‌ನಲ್ಲಿ ಸಪ್ತಪದಿ
ಕುಕ್ಕೆ ಸೇರಿದಂತೆ ರಾಜ್ಯದ ಮುಜರಾಯಿ ದೇಗುಲಗಳಲ್ಲಿ ನಡೆಸಲು ಯೋಜಿಸಲಾಗಿದ್ದ ಸರಳ ಸಾಮೂಹಿಕ ವಿವಾಹ “ಸಪ್ತಪದಿ’ಯು ಕೋವಿಡ್ ಹಿನ್ನೆಲೆಯಲ್ಲಿ ಜಾರಿಯಾಗಿರಲಿಲ್ಲ. ಡಿಸೆಂಬರ್ ಆರಂಭದಲ್ಲಿ ನೆರವೇರಿಸಲು ಈಗಾಗಲೇ ಕ್ರಮ ಕೈಗೊಳ್ಳಲಾಗಿದೆ ಎಂದು ಸಚಿವ ಕೋಟ ಶ್ರೀನಿವಾಸ ಪೂಜಾರಿ ತಿಳಿಸಿದರು.