– ಇದು ಕೇಂದ್ರ ಶಿಕ್ಷಣ ಇಲಾಖೆ ನಡೆಸಿದ ಅಖೀಲ ಭಾರತ ಉನ್ನತ ಶಿಕ್ಷಣ ಸಮೀಕ್ಷೆ (ಎಐಎಸ್‌ಎಚ್)ಯ ಪ್ರಮುಖ ಅಂಶ. ದೇಶದಲ್ಲಿ ಪಿಯುಸಿ ಮುಗಿಸಿದ ಬಹುತೇಕ ವಿದ್ಯಾರ್ಥಿಗಳು ಇಂದಿಗೂ ಪದವಿಗಾಗಿ ಆರಿಸಿಕೊಳ್ಳುವುದು ಬಿಎ. 2019-20ರಲ್ಲಿ ಬಿಎ ಮುಗಿಸಿದ ವಿದ್ಯಾರ್ಥಿಗಳ ಸಂಖ್ಯೆ 20 ಲಕ್ಷಕ್ಕೂ ಹೆಚ್ಚು. ಕಳೆದ ಐದು ವರ್ಷಕ್ಕೆ ಹೋಲಿಸಿದರೆ ಬಿಎಗೆ ಸೇರುವವರ ಸಂಖ್ಯೆ ಮತ್ತು ಮುಗಿಸಿದವರ ಸಂಖ್ಯೆ ಹೆಚ್ಚಾಗಿದೆ.
Advertisement
ಸ್ನಾತಕೋತ್ತರದಲ್ಲೂ ಎಂಎಯನ್ನು ಆರಿಸಿಕೊಳ್ಳುವವರೇ ಹೆಚ್ಚು. ಬಳಿಕದ ಸ್ಥಾನಗಳಲ್ಲಿ ಎಂಎಸ್ಸಿ), ಎಂಬಿಎ, ಎಂಕಾಂ, ಎಂಟೆಕ್ ವಿಭಾಗಗಳಿವೆ ಎಂದು ಈ ಸಮೀಕ್ಷೆ ತಿಳಿಸಿದೆ. ಹಾಗೆಯೇ ಪಿಎಚ್‌ಡಿ ಮಾಡುವವರಲ್ಲಿ ಎಂಜಿನಿಯರಿಂಗ್ ಮತ್ತು ಟೆಕ್ನಾಲಜಿ ವಿಭಾಗದವರೇ ಹೆಚ್ಚು. ಅನಂತರದಲ್ಲಿ ವಿಜ್ಞಾನ ವಿಭಾಗದವರು ಇದ್ದಾರೆ.
ಉನ್ನತ ಶಿಕ್ಷಣ ಪಡೆಯುವ ಅಲ್ಪಸಂಖ್ಯಾಕರಲ್ಲಿ ಮುಸ್ಲಿಂ ಸಮುದಾಯದವರೇ ಹೆಚ್ಚಿದ್ದಾರೆ. ಶೇ. 5.5ರಷ್ಟು ವಿದ್ಯಾರ್ಥಿಗಳು ಮುಸ್ಲಿಮರಾಗಿದ್ದರೆ, ಶೇ. 2.3ರಷ್ಟು ವಿದ್ಯಾರ್ಥಿಗಳು ಉಳಿದ ಅಲ್ಪಸಂಖ್ಯಾಕ ಸಮುದಾಯಗಳಿಗೆ ಸೇರಿದವರು. ಮುಸ್ಲಿಮರಲ್ಲಿ ಉನ್ನತ ಶಿಕ್ಷಣಕ್ಕೆ ಹೋಗುವವರಲ್ಲಿ ವಿದ್ಯಾರ್ಥಿನಿಯರೇ ಹೆಚ್ಚು.
Related Articles
ಇಡೀ ದೇಶದ ಲೆಕ್ಕಾಚಾರದಲ್ಲಿ ಪ್ರತೀ 28 ವಿದ್ಯಾರ್ಥಿಗಳಿಗೆ ಒಬ್ಬ ಬೋಧಕರಿದ್ದಾರೆ. ಆದರೆ ಬಿಹಾರ ಮತ್ತು ಜಾರ್ಖಂಡ್‌ಲ್ಲಿ ಪ್ರತೀ 50 ಮಕ್ಕಳಿಗೆ ಒಬ್ಬರು ಬೋಧಕರಿದ್ದಾರೆ. ಕರ್ನಾಟಕ ಮತ್ತು ತಮಿಳುನಾಡಿನ ಸ್ಥಿತಿ ಉತ್ತಮವಾಗಿದೆ. ಇಲ್ಲಿ ಪ್ರತೀ 18 ವಿದ್ಯಾರ್ಥಿಗಳಿಗೆ ಒಬ್ಬ ಬೋಧಕರಿದ್ದಾರೆ.
Advertisement